ಸ್ಫಟಿಕ ಶಿಲೆ ಯು ಭೂಮಿಭೂಖಂಡೀಯ ತೊಗಟೆಯಲ್ಲಿ ಫೆಲ್ಡ್‌ಸ್ಪರ್‌‌ನ ನಂತರ ಎರಡನೇ ವಿಪುಲ ಲಭ್ಯತೆಯ ಖನಿಜವಾಗಿದೆ. ಈ ಖನಿಜವು ಪ್ರತಿ ಆಮ್ಲಜನಕದ ಪರಮಾಣುವನ್ನು ಎರಡು ಚತುರ್ಮುಖಗಳ ನಡುವೆ ಹಂಚಿರುವ ರೀತಿಯಲ್ಲಿ, ಒಟ್ಟಾರೆಯಾಗಿ SiO2 ಸೂತ್ರದಂತೆ ರೂಪುಗೊಳ್ಳುವ ಹಾಗೆ SiO4 ಎಂಬ ಸಿಲಿಕಾನ್‌‌–ಆಮ್ಲಜನಕ ಚತುರ್ಮುಖಗಳ ಸಾತತ್ಯ ಸಂರಚನೆಯಿಂದ ಕೂಡಿದೆ.

Quartz
Quartz crystal cluster from Tibet
General
ವರ್ಗSilicate mineral
ರಾಸಾಯನಿಕ ಸೂತ್ರSilica (silicon dioxide, SiO2)
ಸ್ಟ್ರೋಂಝ್ ವರ್ಗೀಕರಣ04.DA.05
ಡಾನಾ ವರ್ಗೀಕರಣ75.01.03.01
ಸ್ಫಟಿಕ ಸಮರೂಪತೆTrigonal 32
ಏಕಕೋಶa = 4.9133 Å, c = 5.4053 Å; Z=3
Identification
ಬಣ್ಣColorless through various colors to black
ಸ್ಫಟಿಕ ಗುಣಲಕ್ಷಣ6-sided prism ending in 6-sided pyramid (typical), drusy, fine-grained to microcrystalline, massive
ಸ್ಫಟಿಕ ಪದ್ಧತಿα-quartz: trigonal trapezohedral class 3 2; β-quartz: hexagonal 622[]
ಅವಳಿ ಸಂಯೋಜನೆCommon Dauphine law, Brazil law and Japan law
ಸೀಳು{0110} Indistinct
ಬಿರಿತConchoidal
ಜಿಗುಟುತನBrittle
ಮೋಸ್ ಮಾಪಕ ಗಡಸುತನ7 – lower in impure varieties
ಹೊಳಪುVitreous – waxy to dull when massive
ಪುಡಿಗೆರೆWhite
ಪಾರದರ್ಶಕತೆTransparent to nearly opaque
ವಿಶಿಷ್ಟ ಗುರುತ್ವ2.65; variable 2.59–2.63 in impure varieties
ದ್ಯುತಿ ಗುಣಗಳುUniaxial (+)
ವಕ್ರೀಕರಣ ಸೂಚಿnω = 1.543–1.545 nε = 1.552–1.554
ದ್ವಿವಕ್ರೀಭವನ+0.009 (B-G interval)
ಬಹುವರ್ಣಕತೆNone
ಕರಗುವ ಬಿಂದು1670 °C (β tridymite) 1713 °C (β cristobalite)[]
ಕರಗುವಿಕೆInsoluble at STP; 1 ppmmass at 400 °C and 500 lb/in2 to 2600 ppmmass at 500 °C and 1500 lb/in2[]
ಇತರ ಗುಣಲಕ್ಷಣಗಳುPiezoelectric, pyroelectric, may be triboluminescent, chiral (hence optically active if not racemic)
ಉಲ್ಲೇಖಗಳು[][][][]

ಸ್ಫಟಿಕ ಶಿಲೆಯಲ್ಲಿ ಅನೇಕ ಬೇರೆ ಬೇರೆ ವಿಧಗಳಿದ್ದು, ಅವುಗಳಲ್ಲಿ ಅನೇಕವು ಅರೆ-ಪ್ರಶಸ್ತ ರತ್ನಮಣಿ/ಹರಳುಗಳು. ವಿಶೇಷವಾಗಿ ಯೂರೋಪ್‌‌ ಹಾಗೂ ಮಧ್ಯಪ್ರಾಚ್ಯಗಳಲ್ಲಿ, ಪ್ರಾಚೀನಕಾಲದಿಂದಲೇ ವಿವಿಧ ಬಗೆಯ ಸ್ಫಟಿಕ ಶಿಲೆಗಳು ರತ್ನಾಭರಣ ತಯಾರಿಕೆ ಹಾಗೂ ಕಠಿಣಶಿಲೆಗಳ ಕೆತ್ತನೆಗಳಲ್ಲಿ ಬಹು ಸಾಮಾನ್ಯವಾಗಿ ಬಳಸಲಾಗುತ್ತಿದ್ದ ಖನಿಜಗಳಾಗಿದ್ದವು.

"ಸ್ಫಟಿಕ ಶಿಲೆ" ಎಂಬ ಪದವು ಜರ್ಮನ್‌‌ ಪದ "ಕ್ವಾರ್ಜ್‌"ನಿಂದ ವ್ಯುತ್ಪನ್ನಗೊಂಡಿದ್ದು, ಅದು ವಿಪರ್ಯಾಯವಾಗಿ, ಆಮದಾದ ಮಧ್ಯಂತರ ಉನ್ನತ ಜರ್ಮನ್‌‌ ಪದ "ಟ್ವಾರ್ಕ್‌"ನಿಂದ ವ್ಯುತ್ಪನ್ನಗೊಂಡಿದ್ದು, ಅದೂ ಕೂಡಾ ಸ್ಲಾವಿಕ್‌ ಭಾಷಾಪದಗಳಾದ (cf. ಝೆಕ್‌‌ಮೂಲ ಟ್ವರ್ಡಿ ("ಕಠಿಣ"), ಪೋಲೆಂಡ್‌/ಪೋಲಿಷ್‌ ಭಾಷಾಮೂಲದ ಟ್ವಾರ್ಡಿ ("ಕಠಿಣ"), ರಷ್ಯನ್‌‌ಮೂಲದ твёрдый ("ಕಠಿಣ"))ಗಳಿಂದ ವ್ಯುತ್ಪನ್ನಗೊಂಡಿದ್ದು ಅವು ಪೂರ್ವ ಸ್ಲಾವಿಕ್‌ ಪದಮೂಲ *tvьrdъನಿಂದ ವ್ಯುತ್ಪನ್ನವಾದ 9ನೇ ಶತಮಾನದ ಸ್ಲಾವಿಕ್‌ ಪದಮೂಲ тврьдъ ("ದೃಢ")ದಿಂದ ವ್ಯುತ್ಪನ್ನಗೊಂಡಿದ್ದವು.[]

ಸ್ಫಟಿಕಗಳ ಸ್ವಭಾವ

ಬದಲಾಯಿಸಿ
 
α-ಸ್ಫಟಿಕ ಶಿಲೆಯ ಸ್ಫಟಿಕ ಸಂರಚನೆ
 
β-ಸ್ಫಟಿಕ ಶಿಲೆ

ಸ್ಫಟಿಕ ಶಿಲೆಯು ತ್ರಿಗುಣ ಸಮ್ಮಿತೀಯ ಅಕ್ಷಸ್ಫಟಿಕ ಶಿಲಾವ್ಯವಸ್ಥೆಗಳ ಗುಂಪಿಗೆ ಸೇರಿರುತ್ತದೆ. ಪರಿಪೂರ್ಣ ಸ್ವರೂಪದ ಸ್ಫಟಿಕದ ಆಕಾರವು ಪ್ರತಿ ಬದಿಯಲ್ಲೂ ಆರು-ಬದಿಗಳುಳ್ಳ ಪಿರಮಿಡ್‌‌‌‌/ಡ್ಡುಗಳೊಂದಿಗೆ ಕೊನೆಗೊಳ್ಳುವ ಆರು ಬದಿಗಳುಳ್ಳ ಅಶ್ರಗದಂತಿರುತ್ತದೆ. ಪ್ರಕೃತಿಯಲ್ಲಿ ಸ್ಫಟಿಕ ಶಿಲಾ ಹರಳುಗಳು ಅನೇಕವೇಳೆ ಯಮಳ ಸ್ಫಟಿಕಗಳಾಗಿದ್ದು, ವಿರೂಪಗೊಂಡಿರುತ್ತದೆ ಅಥವಾ ಈ ಸ್ವರೂಪವು ಅಲ್ಪ ಮಾತ್ರ ಕಾಣುವ ಹಾಗೆ ಸನಿಹದ ಸ್ಫಟಿಕ ಶಿಲೆಗಳ ಹರಳುಗಳು ಅಥವಾ ಇತರೆ ಖನಿಜಗಳೊಂದಿಗೆ ಅಂತರಿಕವಾಗಿ ಅಂಟಿಕೊಂಡು ಬೆಳೆದಿರುತ್ತದೆ ಅಥವಾ ವ್ಯಕ್ತವಾಗಬೇಕಾದ ಸ್ಫಟಿಕದ ಮುಖಗಳಲ್ಲಿ ಯಾವುದೂ ಕಾಣದಂತೆ ಮುದ್ದೆಯಾಗಿ ಕಾಣುವ ಮಟ್ಟಿಗೆ ವಿರೂಪಗೊಂಡಿರುತ್ತದೆ. ಸುಸ್ವರೂಪ ಹೊಂದಿರುವ ಸ್ಫಟಿಕಗಳು ಸಾಧಾರಣವಾಗಿ ರಿಕ್ತ/ತೆರಪಿನವರೆಗೆ ಮಿತಿಯಿಲ್ಲದ ಬೆಳವಣಿಗೆ ಕಾಣಬಹುದಾದ 'ಹಾಸು'ಗಳ ರೂಪದಲ್ಲಿರುತ್ತವೆ, ಆದರೆ ಸ್ಫಟಿಕಗಳ ಮತ್ತೊಂದು ಬದಿಯಲ್ಲಿ ಮಾತೃಕೆಯೊಂದಿಗೆ ಜೋಡಿಸುವಿಕೆ ಅಗತ್ಯವಾದುದರಿಂದ, ತುದಿಯಲ್ಲಿ ಕೇವಲ ಒಂದು ಪಿರಮಿಡ್‌‌‌ ಮಾತ್ರವೇ ಇರುತ್ತದೆ. ಸ್ಫಟಿಕ ಶಿಲಾ ಜಿಯೋಡು ಒಳಭಾಗದೆಡೆ ಮುಖ ಮಾಡಿರುವ ಹರಳುಗಳ ಸಾಲನ್ನು ಹೊಂದಿರುವ ಆಕೃತಿಯಾಗಿದ್ದು ಅದರಲ್ಲಿ ತೆರಪಿನ ಭಾಗವು ಗೋಲಾಕಾರವಾಗಿರುತ್ತದೆ.

ಮೇಲ್ಮೈನ ತಾಪಮಾನ ಹಾಗೂ ಒತ್ತಡಗಳಲ್ಲಿ, ಸಿಲಿಕಾನ್‌‌ ಡಯಾಕ್ಸೈಡ್‌‌ನ ಅತ್ಯಂತ ಸ್ಥಾಯಿ ರೂಪವೇ ಸ್ಫಟಿಕ ಶಿಲೆಯಾಗಿರುತ್ತದೆ. 1 ಕಿಲೋಬಾರ್‌ನಷ್ಟು ಒತ್ತಡದಲ್ಲಿ ಸ್ಫಟಿಕ ಶಿಲೆಯು 573 °C ತಾಪಮಾನದವರೆಗೆ ಸ್ಥಾಯಿರೂಪದಲ್ಲಿರಬಹುದಾಗಿರುತ್ತದೆ. ಒತ್ತಡ ಹೆಚ್ಚುತ್ತಿದ್ದ ಹಾಗೆ ಸ್ಫಟಿಕ ಶಿಲೆಯು ಸ್ಥಾಯಿತ್ವ ಕಳೆದುಕೊಳ್ಳಬಹುದಾದ ತಾಪಮಾನದ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ.

1300 °Cಗೂ ಮೀರಿದ ತಾಪಮಾನ ಹಾಗೂ ಸರಿಸುಮಾರು 35 ಕಿಲೋಬಾರ್‌ಗಳಷ್ಟು ಒತ್ತಡದಲ್ಲಿ, ಕೇವಲ β-ಸ್ಫಟಿಕ ಶಿಲೆ ಮಾತ್ರವೇ ಸ್ಥಾಯಿತ್ವವನ್ನು ಹೊಂದಿರುತ್ತದೆ. ಅಂತಹಾ/ಆ ಸ್ಫಟಿಕಶಿಲೆಯು ಸಾಧಾರಣವಾಗಿ ಸ್ಫಟಿಕ ಶಿಲೆ (ಅಥವಾ α-ಸ್ಫಟಿಕ ಶಿಲೆ), ಕೆಳಮಟ್ಟದ ಸ್ಫಟಿಕ ಶಿಲೆ ಅಥವಾ ಸಾಧಾರಣ ಸ್ಫಟಿಕ ಶಿಲೆಗಳಿಗೆ ಸಮಾನವಾದುದಲ್ಲ. β-ಸ್ಫಟಿಕ ಶಿಲೆಯು ಹೆಚ್ಚಿನ ಸಮ್ಮಿತಿಯನ್ನು ಹೊಂದಿರುತ್ತದೆ, ಕಡಿಮೆ ಸಾಂದ್ರವಾಗಿದ್ದು ಸ್ವಲ್ಪ ಕಡಿಮೆ ಮಟ್ಟದ ವಿಶಿಷ್ಟ ಗುರುತ್ವವನ್ನು ಹೊಂದಿರುತ್ತದೆ. ಒಂದು ಘನವಸ್ತುವನ್ನು ಮತ್ತೊಂದು ಘನವಸ್ತುವಿಗೆ ಪರಿವರ್ತಿಸುವ ಪ್ರಕ್ರಿಯೆಯು ಅಂದರೆ ಸ್ಫಟಿಕ ಶಿಲೆಯಿಂದ β-ಸ್ಫಟಿಕ ಶಿಲೆಗೆ ಪರಿವರ್ತಿಸುವ ಕ್ರಿಯೆಯು ತ್ವರಿತ ಪ್ರಕ್ರಿಯೆಯಾಗಿರುವುದಲ್ಲದೇ, ಪೂರ್ವಸ್ಥಿತಿಗೆ ಮರಳಬಲ್ಲಂತಹಾ ಪ್ರಕ್ರಿಯೆಯಾಗಿದ್ದು ಅಲ್ಪ ಪ್ರಮಾಣದ ಶಕ್ತಿಯ ಹ್ರಾಸವಾಗುವಿಕೆಯೊಂದಿಗೆ ಇವುಗಳು ಸಾಧ್ಯವಾಗಿರುತ್ತದೆ. ಹೀಗೆ ಪರಿವರ್ತಿಸುವ ಕ್ರಿಯೆಯು ಎಷ್ಟು ಸರಳವಾಗಿ ಮಾಡಬಹುದೆಂದರೆ ಸ್ಫಟಿಕ ಶಿಲೆಯ ಹರಳೊಂದನ್ನು ಬಿಸಿ ಮಾಡಿದರೆ β-ಸ್ಫಟಿಕ ಶಿಲೆಯಾಗುತ್ತದೆ, ಅದನ್ನೇ ಮರಳಿ ತಣ್ಣಗೆ ಮಾಡಿದರೆ ಸರಳ ಸ್ಫಟಿಕ ಹಾಗೂ ಮರಳಿ ಬಿಸಿ ಮಾಡಿದರೆ ಮತ್ತೆ β-ಸ್ಫಟಿಕ ಶಿಲೆಯು ಸಿಗುತ್ತದೆ etc., ಹೀಗೆ ಮುಂದುವರೆಸಿಕೊಂಡು ಹೋದರೆ ಪೂರ್ವಸ್ಥಿತಿಗೆ ಮರಳುವ ಪ್ರಕ್ರಿಯೆಗೆ ಒಳಪಡಿಸಿದಾಗ ಪ್ರಕ್ರಿಯೆಯ ಮೊದಲಿಗೆ ಯಾವ ಸ್ಥಿತಿಯಲ್ಲಿ ಇತ್ತೋ ಅದೇ ಸ್ಥಿತಿಗೆ ಸ್ಫಟಿಕ ಶಿಲೆಯು ಮರಳಿರುತ್ತದೆ.

ಪರಿವರ್ತನೆಯು ಅಷ್ಟು ಸರಳವಾಗಿ ನಡೆಯುವ ಕಾರಣವೇನೆಂದರೆ ಸ್ಫಟಿಕ ಶಿಲೆ ಹಾಗೂ β-ಸ್ಫಟಿಕ ಶಿಲೆಗಳ ನಡುವಿನ ವ್ಯತ್ಯಾಸ ಅಷ್ಟು ಅಲ್ಪಪ್ರಮಾಣದ್ದಾಗಿರುತ್ತದೆ. ಆಮ್ಲಜನಕ ಹಾಗೂ ಸಿಲಿಕಾನ್‌‌ ಪರಮಾಣುಗಳ ನಡುವಿನ ಬಂಧವು ಸ್ಫಟಿಕ ಶಿಲೆಯಲ್ಲಿ "ತಿರುಚಿರುತ್ತದೆ" ಅಥವಾ ಬಗ್ಗಿರುತ್ತದೆ ಹಾಗೂ β-ಸ್ಫಟಿಕ ಶಿಲೆಗಳಲ್ಲಿ ಇದು ಅಷ್ಟೊಂದು "ತಿರುಚಿರುವುದಿಲ್ಲ". ಹೆಚ್ಚಿನ ಉಷ್ಣತೆಗಳಲ್ಲಿ ಪರಮಾಣುಗಳು ಅವುಗಳ ನಡುವಿನ ಬಂಧವು ತಿರುಚಿರದಂತೆ ಆಗುವಷ್ಟು ಅಥವಾ ನೇರವಾಗುವ ಮಟ್ಟಿಗೆ ಪರಸ್ಪರರಿಂದ ದೂರ ಸರಿಯುತ್ತವಾಗಿ ಹೆಚ್ಚಿನ ಸಮ್ಮಿತಿಯನ್ನು ಪಡೆದುಕೊಳ್ಳುತ್ತವೆ. ಉಷ್ಣತೆಯನ್ನು ಕಡಿಮೆಗೊಳಿಸುತ್ತಿದ್ದ ಹಾಗೆ, ಪರಮಾಣುಗಳು ಒಂದರ ಮೇಲೊಂದು ಆವರಿಸಿಕೊಳ್ಳುತ್ತವೆ ಹಾಗೂ ಬಂಧಗಳು ಸ್ಥಾಯಿತ್ವ ಹೊಂದಬೇಕೆಂದರೆ ತಿರುಚಿಕೊಳ್ಳುವುದು ಅನಿವಾರ್ಯವಾಗಿರುತ್ತದೆ, ಇದರಿಂದಾಗಿ ಸಮ್ಮಿತಿಯು ಮತ್ತೆ ಕೆಳಮಟ್ಟಕ್ಕೆ ಇಳಿಯುತ್ತದೆ.

ಕೆಲವೊಮ್ಮೆ ಮಾತ್ರ β-ಸ್ಫಟಿಕ ಶಿಲೆಯಾಗಿಯೇ ನಿರ್ಮಾಣಗೊಂಡ ಸ್ಫಟಿಕಗಳ ಉದಾಹರಣೆಗಳು ಕಂಡುಬರುತ್ತವಾದರೂ 573 °Cಗಿಂತ ಕಡಿಮೆ ತಾಪಮಾನದಲ್ಲಿ ಎಲ್ಲಾ ಸ್ಫಟಿಕ ಶಿಲೆಗಳೂ ಕೆಳಮಟ್ಟದ ಸ್ಫಟಿಕ ಶಿಲೆಗಳಾಗಿರುತ್ತವೆ. ಕೆಲವೊಮ್ಮೆ β-ಸ್ಫಟಿಕ ಶಿಲೆಯನ್ನಾಗಿ ವರ್ಗೀಕರಿಸುವರಾದರೂ, ವಾಸ್ತವವಾಗಿ ಇವುಗಳು ಹುಸಿರೂಪ/ಕೂಟರೂಪದ ಅಥವಾ "ಅಸಹಜ ಆಕೃತಿಯನ್ನುಳ್ಳ" ಸ್ಫಟಿಕಗಳ ಆಕೃತಿಗಳಾಗಿದ್ದು ಸರಿಯಾಗಿ ಹೆಸರಿಸಬೇಕೆಂದರೆ 'β-ಸ್ಫಟಿಕ ಶಿಲೆಯ ನಂತರದ ದರ್ಜೆಯ ಸ್ಫಟಿಕ ಶಿಲೆ' ಎಂಬ ವರ್ಗಕ್ಕೆ ಸೇರಬೇಕಾದವು. ಕೆಳದರ್ಜೆಯ ಸ್ಫಟಿಕ ಶಿಲೆಗಳು ಕೂಡಾ ಅದೇ ತರಹದ ಸ್ಫಟಿಕಗಳಾಗಿ ರೂಪುಗೊಳ್ಳಬಹುದಾದರೂ ಈ ಸ್ಫಟಿಕಗಳು ಕೆಳದರ್ಜೆಯ ಸ್ಫಟಿಕ ಶಿಲೆಗಿಂತಲೂ ಹೆಚ್ವಿನ ಸಮ್ಮಿತಿಯನ್ನು ಹೊಂದಿರುತ್ತವೆ. ವಿರುದ್ಧ ದಿಕ್ಕಿಗೆ ತಿರುಗಿದ ಆರು ಬದಿಗಳ ಪಿರಮಿಡ್ಡುಗಳ ಜೋಡಿಗಳನ್ನು ಹೊಂದಿರುವ ಷಟ್ಕೋನೀಯ ದ್ವಿಪಿರಮಿಡ್ಡುಗಳನ್ನು ಹೊಂದಿದ್ದು ಸ್ಫಟಿಕಗಳು ಅಶ್ರಗ ಮುಖಗಳನ್ನು ಹೊಂದಿರುವುದಿಲ್ಲ. ಸ್ಫಟಿಕ ಶಿಲೆ'ಯ ಲಾಕ್ಷಣಿಕ ಪರಿಸಮಾಪ್ತಿಯು ಆರು ಬದಿಗಳ ಪಿರಮಿಡ್ಡುಗಳ ರೀತಿ ಕಾಣುವ ಮೂರು ವಜ್ರಾಕೃತಿಯ ಮುಖಗಳ ಎರಡು ಜೋಡಿಗಳನ್ನು ಹೊಂದಿರುತ್ತವೆ.

(ಸೂಕ್ಷ್ಮರೂಪಿ) ಸ್ಫಟಿಕ ಸಂರಚನೆ

ಬದಲಾಯಿಸಿ

ತ್ರಿಕೋನೀಯ ಸ್ಫಟಿಕ ವ್ಯವಸ್ಥೆಯ, ಅನುಕ್ರಮವಾಗಿ ಸಮ್ಮಿತೀಯ ಸಂರಚನಾ ಗುಂಪುಗಳಾದ P 3121 ಹಾಗೂ P 3221ಗಳಲ್ಲಿ α-ಸ್ಫಟಿಕ ಶಿಲೆಯು ಸ್ಫಟಿಕೀಕರಣಗೊಳ್ಳುತ್ತದೆ. β-ಸ್ಫಟಿಕ ಶಿಲೆಯು ಷಟ್ಕೋನೀಯ ವ್ಯವಸ್ಥೆಗೆ ಸೇರಿದ್ದು, ಅನುಕ್ರಮವಾಗಿ P 6221 ಹಾಗೂ P 6421 ಸಮ್ಮಿತೀಯ ಸಂರಚನಾ ಗುಂಪುಗಳ ಭಾಗವಾಗಿರುತ್ತದೆ.[] ಈ ಸಮ್ಮಿತೀಯ ಸಂರಚನಾ ಗುಂಪುಗಳು ವಾಸ್ತವವಾಗಿ ಅಸಮಮಿತಿಯವಾಗಿದ್ದು (ಅವುಗಳಲ್ಲಿ ಪ್ರತಿಯೊಂದೂ 11 ಪ್ರತಿರೂಪಿ ಜೋಡಿಗಳಿಗೆ ಸೇರಿರುತ್ತದೆ). α-ಸ್ಫಟಿಕ ಶಿಲೆ ಹಾಗೂ β-ಸ್ಫಟಿಕ ಶಿಲೆಗಳೆರಡೂ ಅಸಮಮಿತಿಯಲ್ಲದ ಮೂಲವಸ್ತುಗಳಿಂದ (ಪ್ರಸ್ತುತ ಸಂದರ್ಭದಲ್ಲಿ SiO4 ಚತುರ್ಮುಖ) ರೂಪುಗೊಂಡಿರುವ ಅಸಮಮಿತಿಯ ಸ್ಫಟಿಕ ಸಂರಚನೆಗಳ ಉದಾಹರಣೆಗಳಾಗಿವೆ. α- ಹಾಗೂ β-ಸ್ಫಟಿಕ ಶಿಲೆಗಳ ನಡುವಿನ ರೂಪಾಂತರವು ಚತುರ್ಮುಖಗಳಲ್ಲಿ ಪರಸ್ಪರ ಸಂಬಂಧಿಸಿದಂತೆ ಅಲ್ಪ ಪ್ರಮಾಣದ ಆವರ್ತನಗಳನ್ನು ಹೊಂದಿದ್ದು, ಅವುಗಳು ಸಂಪರ್ಕಗೊಂಡಿರುವ ರೀತಿಯಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.

ವೈವಿಧ್ಯಗಳು (ಬಣ್ಣಗಳ ಪ್ರಕಾರ)

ಬದಲಾಯಿಸಿ

ಸಾಂಪ್ರದಾಯಿಕವಾಗಿ ಶಿಲಾ ಸ್ಫಟಿಕ ಎಂದು ಕರೆಯಲ್ಪಡುವ (ಕೆಲವೊಮ್ಮೆ ಸ್ಫುಟ ಸ್ಫಟಿಕ ಶಿಲೆ ಎಂದು ಕರೆಯಲ್ಪಡುವ), ಶುದ್ಧ ಸ್ಫಟಿಕ ಶಿಲೆಯು ವರ್ಣರಹಿತವಾಗಿದ್ದು ಪಾರದರ್ಶಕ (ಸ್ಫುಟ) ಅಥವಾ ಪಾರದೀಪಕ/ಅರೆಪಾರದರ್ಶಕವಾಗಿರುತ್ತದೆ. ಹಳದಿ ಬೆಣಚು ಕಲ್ಲು, ಗುಲಾಬಿ ಸ್ಫಟಿಕ ಶಿಲೆ, ಪದ್ಮರಾಗ, ಧೂಮ್ರವರ್ಣದ ಸ್ಫಟಿಕ ಶಿಲೆ, ಹಾಲುಬಿಳುಪಿನ ಸ್ಫಟಿಕ ಶಿಲೆ, ಹಾಗೂ ಇತರೆ ಶಿಲೆಗಳು ಸ್ಫಟಿಕಗಳ ವರ್ಣಮಯ ರೂಪಗಳಾಗಿರುತ್ತವೆ. ಸ್ಫಟಿಕ ಶಿಲೆಗಳನ್ನು ವೈವಿಧ್ಯಮಯ ಹೆಸರುಗಳ ಸರಮಾಲೆಯಿಂದ ಕರೆಯಲಾಗುತ್ತದೆ. ಸ್ಫಟಿಕ ಶಿಲೆಗಳ ವಿಧಗಳ ನಡುವೆ ಬಹುಪ್ರಮುಖ ಪ್ರತ್ಯೇಕತೆಗಳೆಂದರೆ ದೊಡ್ಡ ಸ್ಫಟಿಕಗಳು (ಬರಿಗಣ್ಣಿಗೆ ಕಾಣಿಸುವಂತಹಾ ಸ್ಫಟಿಕಗಳು) ಹಾಗೂ ಸೂಕ್ಷ್ಮ ಸ್ಫಟಿಕಗಳು ಅಥವಾ ಬಹುಸೂಕ್ಷ್ಮ ಸ್ಫಟಿಕಗಳ ವಿಧಗಳು (ಹೆಚ್ಚಿನ ಪ್ರಮಾಣಕ್ಕೆ ವರ್ಧಿಸಿ ನೋಡಿದಾಗ ಮಾತ್ರ ಕಾಣುವ ಸ್ಫಟಿಕಗಳ ಸಮೂಹಗಳು). ಬಹುಸೂಕ್ಷ್ಮ ಸ್ಫಟಿಕಗಳ ವಿಧಗಳು ಅರೆಪಾರದರ್ಶಕ/ಪಾರದೀಪಕ ಅಥವಾ ಬಹುತೇಕ ಅಪಾರದರ್ಶಕವಾಗಿದ್ದರೆ, ದೊಡ್ಡ ಸ್ಫಟಿಕಗಳು ಬಹುಮಟ್ಟಿಗೆ ಪಾರದರ್ಶಕ ವಿಧಗಳಾಗಿರುತ್ತವೆ. ಕ್ಯಾಲ್ಸೆಡನಿ ಎಂಬುದೊಂದು ಸ್ಫಟಿಕ ಶಿಲೆಯಾಗಿದ್ದು, ಸ್ಫಟಿಕ ಶಿಲೆ ಹಾಗೂ ಅದರ ಏಕನತ ರೂಪಿ ಮೊಗನೈಟ್‌ಗಳೆರಡರದೂ ‌ಸೂಕ್ಷ್ಮ ಅಂತರ್‌ಬೆಳವಣಿಗೆಗಳನ್ನು ಹೊಂದಿರುವ ಸಿಲಿಕಾದ ಬಹುಸೂಕ್ಷ್ಮ ಸ್ಫಟಿಕರೂಪವಾಗಿರುತ್ತದೆ.[] ಅನೇಕ ವೇಳೆ ಸ್ಫಟಿಕ ಶಿಲೆಗಳ ವೈದೃಶ್ಯರೂಪಿ ಪಟ್ಟಿಗಳು ಅಥವಾ ಬಣ್ಣಗಳ ಮಾದರಿಗಳೂ ಸೇರಿದಂತೆ ಇತರೆ ಅಪಾರದರ್ಶಕ ರತ್ನಮಣಿ/ಹರಳು ಅಥವಾ ಸ್ಫಟಿಕ ಶಿಲೆ ಸೇರಿದಂತೆ ಮಿಶ್ರಿತ ಶಿಲೆಗಳ ವಿಧಗಳಲ್ಲಿ ಅಗೇಟು, ಸಾರ್ಡ್‌‌, ಗೋಮೇದ/ಧಕ, ಮಂದಗೆಂಪಿನ ಕ್ಯಾಲ್ಸೆಡನಿ, ರಕ್ತಶಿಲೆ, ಹಾಗೂ ಸೂರ್ಯಕಾಂತಿ ಸೇರಿವೆ.

ಹಳದಿ ಬೆಣಚು ಕಲ್ಲು

ಬದಲಾಯಿಸಿ
 
ಹಳದಿ ಬೆಣಚು ಕಲ್ಲು

ಹಳದಿ ಬೆಣಚು ಕಲ್ಲು ಪೇಲವ ಹಳದಿಯಿಂದ ಕಂದು ಬಣ್ಣಗಳವರೆಗೆ ವೈವಿಧ್ಯಮಯ ವರ್ಣಗಳಿಂದ ಕೂಡಿದ ಸ್ಫಟಿಕ ಶಿಲೆಯ ಒಂದು ವಿಧವಾಗಿದೆ. ಕತ್ತರಿಸಿದ ಹಳದಿ ಬೆಣಚು ಕಲ್ಲುಗಳನ್ನು ಹಳದಿ ಪುಷ್ಯರಾಗದಿಂದ ಪ್ರತ್ಯೇಕಿಸಿ ಹೇಳುವುದು ಕಷ್ಟಸಾಧ್ಯ. ಹಳದಿ ಬೆಣಚು ಕಲ್ಲುಗಳು ಕಬ್ಬಿಣದ ಕಲ್ಮಶಗಳನ್ನು ಹೊಂದಿದ್ದು, ನೈಸರ್ಗಿಕವಾಗಿ ಸಿಗುವುದು ಅಪರೂಪ. ಬಹುತೇಕ ವಾಣಿಜ್ಯವಾಗಿ ಲಭ್ಯವಿರುವ ಹಳದಿ ಬೆಣಚು ಕಲ್ಲು ಕೃತಕವಾಗಿ ಬಿಸಿ ಮಾಡಿದ ಪದ್ಮರಾಗ ಅಥವಾ ಧೂಮ್ರವರ್ಣದ ಸ್ಫಟಿಕ ಶಿಲೆಗಳಾಗಿರುತ್ತವೆ. ಬ್ರೆಝಿಲ್‌‌ ಹಳದಿ ಬೆಣಚು ಕಲ್ಲುಗಳ ಮುಂಚೂಣಿ ಉತ್ಪಾದಕ ರಾಷ್ಟ್ರವಾಗಿದ್ದು, ಉತ್ಪಾದನೆಯಲ್ಲಿ ಬಹುಪಾಲು ರಿಯೋ ಗ್ರಾಂಡೆ ಡು/ಡೊ ಸುಲ್‌‌‌ ರಾಜ್ಯದಿಂದ ಬರುತ್ತದೆ. ಇದರ ಹೆಸರನ್ನು "ಹಳದಿ" ಎಂಬರ್ಥದ ಲ್ಯಾಟಿನ್‌ ಭಾಷೆಯ ಪದ ಸಿಟ್ರಿನಾದಿಂದ ವ್ಯುತ್ಪನ್ನಗೊಂಡಿದ್ದು, ಇದೇ ಪದವು "ಸಿಟ್ರನ್‌‌" ಎಂಬ ಪದದ ಪದಮೂಲವೂ ಆಗಿದೆ.[]

ಹಳದಿ ಬೆಣಚು ಕಲ್ಲು ನವೆಂಬರ್‌‌ ತಿಂಗಳಿನ ಮೂರು ಸಾಂಪ್ರದಾಯಿಕ ಜನ್ಮರತ್ನಗಳಲ್ಲಿ ಒಂದಾಗಿದೆ.

ಗುಲಾಬಿ ಬಣ್ಣದ ಸ್ಫಟಿಕ ಶಿಲೆ

ಬದಲಾಯಿಸಿ
 
ಗುಲಾಬಿ ಬಣ್ಣದ ಸ್ಫಟಿಕ ಶಿಲೆಯಲ್ಲಿ ಕೆತ್ತಲಾದ ಆನೆ, 4 ಅಂಗುಲಗಳಷ್ಟು (10 cm) ಉದ್ದವಿದೆ

ಗುಲಾಬಿ ಬಣ್ಣದ ಸ್ಫಟಿಕ ಶಿಲೆ ಯು ಪೇಲವ ಗುಲಾಬಿ ಬಣ್ಣದಿಂದ ಕೆಂಪು ಛಾಯೆಯ ಗುಲಾಬಿ ಬಣ್ಣಗಳನ್ನು ಹೊರಹೊಮ್ಮಿಸುವ ಸ್ಫಟಿಕ ಶಿಲೆಯ ಒಂದು ವಿಧವಾಗಿದೆ. ಈ ಬಣ್ಣಗಳಿಗೆ ಶಿಲೆಯ ಸಾಂದ್ರ ವಸ್ತುವಿನಲ್ಲಿ ಅಡಕವಾಗಿರಬಹುದಾದ ಟೈಟೇನಿಯಮ್‌‌, ಕಬ್ಬಿಣ, ಅಥವಾ ಮ್ಯಾಂಗನೀಸ್‌‌ ಲೋಹಗಳ ಅಂಶಗಳು ಕಾರಣವಿರಬಹುದು ಎಂದು ಭಾವಿಸಲಾಗುತ್ತದೆ. ಗುಲಾಬಿ ಬಣ್ಣದ ಸ್ಫಟಿಕ ಶಿಲೆಗಳಲ್ಲಿ ಕೆಲವು ಸೂಕ್ಷ್ಮ ಗಾತ್ರದ ರೂಟೈಲ್‌‌/ಟೈಟಾನಿಯಮ್‌ ಡೈ ಆಕ್ಸೈಡ್‌‌‌ ಸೂಜಿಹರಳುಗಳನ್ನು ಹೊಂದಿದ್ದು ಅವು ಪ್ರಸರಿಸಿದ ಬೆಳಕು ತಾರಾಪುಂಜಗಳಿಂದ ಬಂದ ಬೆಳಕಿದ್ದ ಹಾಗಿರುತ್ತದೆ. ಇತ್ತೀಚಿನ X-ರೇ/ಕ್ಷ-ಕಿರಣ ವಿವರ್ತನೆಗಳ ಮೇಲಿನ ಅಧ್ಯಯನಗಳು ಸಾಂದ್ರವಾದ ಸ್ಫಟಿಕ ಶಿಲೆಗಳೊಳಗೆ ಹುದುಗಿರುವ ಸೂಕ್ಷ್ಮ ಗಾತ್ರದ ತೆಳು ತಂತುಗಳ ರೂಪದಲ್ಲಿರುವ ಬಹುಶಃ ಡ್ಯೂಮರ್‌‌ಟೈರೈಟ್‌‌‌‌ನ ಅಂಶಗಳು ಕಾರಣವಿರಬಹುದು ಎಂಬುದರೆಡೆ ಬೊಟ್ಟುಮಾಡುತ್ತವೆ.[೧೦]

ಸ್ಫಟಿಕ ರೂಪದಲ್ಲಿ ಇದನ್ನು (ಬಹಳ ಅಪರೂಪ) ಗುಲಾಬಿ ಸ್ಫಟಿಕ ಶಿಲೆ ಎನ್ನುತ್ತಾರಲ್ಲದೇ ಅದರ ಬಣ್ಣಕ್ಕೆ ಕಾರಣ ಅಲ್ಪ ಪ್ರಮಾಣದಲ್ಲಿರುವ ಫಾಸ್ಫೇಟ್‌‌ ಅಥವಾ ಅಲ್ಯೂಮಿನಿಯಂ ಅಂಶಗಳಿಂದ ಇರಬಹುದು ಎಂಬ ಭಾವನೆಯಿದೆ. ಸ್ಫಟಿಕಗಳಲ್ಲಿನ ಬಣ್ಣಗಳು ಸುವ್ಯಕ್ತವಾಗಿ ದ್ಯುತಿಸಂವೇದಿಯಾಗಿರುತ್ತವಲ್ಲದೇ ಕಾಂತಿಹೀನಗೊಳ್ಳುವ ಸಾಧ್ಯತೆಗಳೂ ಇರುತ್ತವೆ. USAಯ ಮೈನೆರಮ್‌ಫರ್ಡ್‌ನಲ್ಲಿ ಪತ್ತೆಯಾದ ಪೆಗ್ಮಾಟೈಟ್‌‌ ಮಾದರಿಯ ಮೊತ್ತಮೊದಲ ಸ್ಫಟಿಕಗಳು ಕಂಡುಬಂದರೂ ಮಾರುಕಟ್ಟೆಯಲ್ಲಿ ಲಭ್ಯವಾಗುವ ಬಹುತೇಕ ಸ್ಫಟಿಕಗಳು ಬ್ರೆಝಿಲ್‌‌ಮಿನಾಸ್‌ ಗೆರಾಯ್ಸ್‌‌‌ನಿಂದ ಬರುತ್ತವೆ.[೧೧]

ಗುಲಾಬಿ ಬಣ್ಣದ ಸ್ಫಟಿಕ ಶಿಲೆಯು ರತ್ನದಷ್ಟು ಜನಪ್ರಿಯವಲ್ಲ – ಸಾಧಾರಣವಾಗಿ ಇದಕ್ಕೆ ಸಾಕಷ್ಟು ಕಲ್ಮಶಗಳನ್ನು ಬೆರೆಸಿ ಆ ಬಣ್ಣ ಬರುವಂತೆ ಮಾಡಲಾಗುತ್ತದೆ. ಗುಲಾಬಿ ಬಣ್ಣದ ಸ್ಫಟಿಕ ಶಿಲೆಯಲ್ಲಿ ಸಾಧಾರಣವಾಗಿ ವ್ಯಕ್ತಿಗಳು ಹಾಗೂ ಹೃದಯಗಳಂತಹಾ ಚಿತ್ರಗಳನ್ನು ಹೆಚ್ಚಾಗಿ ಕೆತ್ತಲಾಗುತ್ತದೆ. ಹೃದಯ ಕೆತ್ತನೆಯನ್ನು ಹೊಂದಿದ ಸ್ಫಟಿಕ ಶಿಲೆಗಳು ಎಲ್ಲೆಡೆ ಲಭ್ಯವಿದ್ದು ಅದಕ್ಕೆ ಗುಲಾಬಿ ಬಣ್ಣದ ಸ್ಫಟಿಕ ಶಿಲೆಯು ಕೆಂಗುಲಾಬಿ ಬಣ್ಣದ್ದಾಗಿರುವುದು ಹಾಗೂ ಅದು ಶಕ್ಯವೆಚ್ಚದ ಖನಿಜವಾಗಿರುವುದು ಕಾರಣ.

ಪದ್ಮರಾಗ

ಬದಲಾಯಿಸಿ
 
ಪದ್ಮರಾಗ. ದಕ್ಷಿಣ ಆಫ್ರಿಕಾದ ಮಗಲೈ/ಲೀಸ್‌ಬರ್ಗ್‌

ಪದ್ಮರಾಗ ವು ಸ್ಫಟಿಕ ಶಿಲೆಯ ಜನಪ್ರಿಯ ರೂಪವಾಗಿದ್ದು ಉಜ್ವಲದಿಂದ ದಟ್ಟವರ್ಣ ಅಥವಾ ಮಂದ ನೇರಳೆ ವರ್ಣದ್ದಾಗಿರುವುದು.

ಧೂಮ್ರವರ್ಣದ ಸ್ಫಟಿಕ ಶಿಲೆ

ಬದಲಾಯಿಸಿ
 
ಧೂಮ್ರವರ್ಣದ ಸ್ಫಟಿಕ ಶಿಲೆ

ಧೂಮ್ರವರ್ಣದ ಸ್ಫಟಿಕ ಶಿಲೆ ಯು ಬೂದು ಬಣ್ಣದ ಅರೆಪಾರದರ್ಶಕ/ಪಾರದೀಪಕ ಸ್ಫಟಿಕ ಶಿಲೆಯಾಗಿರುತ್ತದೆ. ಅವುಗಳ ಸ್ಪಷ್ಟ/ಸ್ಫುಟತೆಯು ಬಹುತೇಕ ಪಾರದರ್ಶಕದಿಂದ ಬಹುಮಟ್ಟಿಗೆ ಅಪಾರದರ್ಶಕವಾದ ಕಂದುಛಾಯೆಯ-ಬೂದುಬಣ್ಣದ ಸ್ಫಟಿಕದವರೆಗೆ ವ್ಯತ್ಯಾಸವಾಗುತ್ತದೆ. ಇವುಗಳಲ್ಲಿ ಕೆಲವು ಕಪ್ಪು ಬಣ್ಣದ್ದೂ ಇರುತ್ತವೆ.

ಹಾಲುಬಿಳುಪಿನ/ಹಾಲಿನ ಬಣ್ಣದ ಸ್ಫಟಿಕ ಶಿಲೆ

ಬದಲಾಯಿಸಿ
 
ಹಾಲುಬಿಳುಪಿನ ಸ್ಫಟಿಕ ಶಿಲೆಯ ಮಾದರಿ
 
ಆಗಸ್ಟಸ್‌ ಚಕ್ರವರ್ತಿಯ ಪ್ರಾಚೀನ ರೋಮನ್‌‌ ಗೋಮೇದ/ಧಕದ ರತ್ನಶಿಲಾಗೆತ್ತನೆ

ಹಾಲಿನ ಬಣ್ಣದ ಸ್ಫಟಿಕ ಶಿಲೆ ಅಥವಾ ಹಾಲುಬಿಳುಪಿನ ಸ್ಫಟಿಕ ಶಿಲೆ ಯು ಬಹುಶಃ ಹರಳುರೂಪಿ ಸ್ಫಟಿಕ ಶಿಲೆಗಳ ಬಹು ಸಾಮಾನ್ಯ ವಿಧವಾಗಿದ್ದು, ಇವು ಬಹುಮಟ್ಟಿಗೆ ಎಲ್ಲೆಡೆಯೂ ದೊರಕುತ್ತವೆ. ಇದರಲ್ಲಿನ ಬಿಳಿಯ ಬಣ್ಣಕ್ಕೆ ಕಾರಣ ಬಹುಶಃ ಸ್ಫಟಿಕ ರೂಪುಗೊಳ್ಳುವ ಸಮಯದಲ್ಲಿ ಉಂಟಾಗಿರಬಹುದಾದ ಅಲ್ಪ ಪ್ರಮಾಣದಲ್ಲಿ ಅನಿಲ, ದ್ರವಗಳ ಅಥವಾ ಎರಡರದೂ ಹರಿವಿನ ಸೇರ್ಪಡೆಕಾರಣವಾಗಿರಬಹುದು. ಅವುಗಳಲ್ಲಿರಬಹುದಾದ ಸೇರ್ಪಡೆಯಾದ ಕಲ್ಮಶಗಳಿಂದ ಉಂಟಾಗುವ ಮಬ್ಬಾಗುವಿಕೆಯು ಬಹುಮಟ್ಟಿದೆ ದ್ಯುತಿಸಂವೇದಿ ಹಾಗೂ ಗುಣಮಟ್ಟದ ರತ್ನಮಣಿ/ಹರಳು ಅನ್ವಯಗಳಲ್ಲಿ ಇದರ ಬಳಕೆಯಾಗದಿರುವಿಕೆಗೆ ಕಾರಣವಾಗಿರುತ್ತದೆ.[೧೨]

ವಿಧಗಳು (ಸೂಕ್ಷ್ಮಸಂರಚನೆಗೆ ಅನುಗುಣವಾಗಿ)

ಬದಲಾಯಿಸಿ

ಅನೇಕ ಖನಿಜಗಳ ವೈವಿಧ್ಯಮಯ ಹೆಸರುಗಳು ಐತಿಹಾಸಿಕವಾಗಿ ಖನಿಜದ ಬಣ್ಣದಿಂದಾಗಿಯೇ ರೂಪುಗೊಂಡರೂ, ಪ್ರಸ್ತುತ ವೈಜ್ಞಾನಿಕ ಹೆಸರಿಡುವ ಕ್ರಮಗಳು ಪ್ರಮುಖವಾಗಿ ಖನಿಜದ ಸೂಕ್ಷ್ಮ ಸಂರಚನೆಯ ಮೇಲೆ ಆಧಾರಿತವಾಗಿರುತ್ತವೆ. ದೊಡ್ಡ ಸ್ಫಟಿಕಗಳ ವಿಧಗಳಲ್ಲಿ ಬಣ್ಣವೇ ಪ್ರಮುಖ ಗುರುತುಕಾರಕವಾಗಿದ್ದರೂ ಬಹುಸೂಕ್ಷ್ಮ ಸ್ಫಟಿಕ ಖನಿಜಗಳಲ್ಲಿ ಇದು ದ್ವಿತೀಯ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಇದು ಎಲ್ಲ ಸಂದರ್ಭಗಳಲ್ಲೂ ಅನ್ವಯಿಸಲೇಬೇಕೆಂದೇನಿಲ್ಲ.

ಸ್ಫಟಿಕ ಶಿಲೆಗಳ ಪ್ರಮುಖ ವಿಧಗಳು
ಕ್ಯಾಲ್ಸೆಡನಿ ಬಹುಸೂಕ್ಷ್ಮ ಸ್ಫಟಿಕ ಶಿಲೆ ಹಾಗೂ ಮೊಗನೈಟ್‌‌ಗಳ ಮಿಶ್ರಣವಾಗಿರುತ್ತದೆ. ಈ ಪದವನ್ನು ಸಾಧಾರಣವಾಗಿ ಶ್ವೇತ ಅಥವಾ ತೆಳು ವರ್ಣದ ವಸ್ತುಗಳಿಗೆ ಬಳಸಲಾಗುತ್ತದೆ. ಇಲ್ಲವಾದಲ್ಲಿ ಹೆಚ್ಚು ನಿರ್ದಿಷ್ಟವಾದ ಹೆಸರುಗಳನ್ನು ಬಳಸಲಾಗುತ್ತದೆ.
ಅಗೇಟ್‌ ಬಹುವರ್ಣೀಯ, ಪಟ್ಟಿಗಳುಳ್ಳ ಕ್ಯಾಲ್ಸೆಡನಿ ಶಿಲೆಯು, ಅರೆ-ಪಾರದೀಪಕದಿಂದ ಅರೆಪಾರದರ್ಶಕ/ಪಾರದೀಪಕದವರೆಗೆ ವ್ಯತ್ಯಾಸಗೊಳ್ಳಬಹುದಾಗಿರುತ್ತದೆ
ಗೋಮೇದ/ಧಕ ಪಟ್ಟಿಗಳು ನೇರವಾಗಿ ಸಮಾಂತರವಾಗಿದ್ದು ಗಾತ್ರದಲ್ಲಿ ಸಮಾನವಾಗಿರುವ ಅಗೇಟ್‌ ಶಿಲೆ.
ಜ್ಯಾಸ್ಪರ್‌ ಅಪಾರದರ್ಶಕ ಬಹುಸೂಕ್ಷ್ಮ ಸ್ಫಟಿಕ ಶಿಲಾ ಹರಳು, ಸಾಧಾರಣವಾಗಿ ಕೆಂಪು ಬಣ್ಣದಿಂದ ಕಂದು ಬಣ್ಣದವರೆಗೆ ವ್ಯತ್ಯಾಸಗೊಳ್ಳಬಹುದು
ಅವೆನ್‌ಟ್ಯೂರಿನ್‌‌ (ಸಾಧಾರಣವಾಗಿ ಮೈಕಾ) ಮಿನುಗುವ ಸಣ್ಣ ಸೇರ್ಪಡೆಗಳನ್ನು ಹೊಂದಿರುವ ಅರೆಪಾರದರ್ಶಕ/ಪಾರದೀಪಕ ಕ್ಯಾಲ್ಸೆಡನಿ ಶಿಲೆ.
ಹುಲಿಗಣ್ಣು/ಟೈಗರ್ಸ್‌ ಐ ತಂತುರೂಪದ ಚಿನ್ನದ ಬಣ್ಣದಿಂದ ಕೆಂಪು-ಕಂದು ಬಣ್ಣದವರೆಗೆ ವ್ಯತ್ಯಾಸಗೊಳ್ಳಬಹುದಾದ ಸ್ಫಟಿಕ ಶಿಲೆ, ಇದು ವರ್ಣಚದುರುವಿಕೆಯ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ.
ಶಿಲಾ ಸ್ಫಟಿಕ ಸ್ಪಷ್ಟ, ವರ್ಣರಹಿತ
ಪದ್ಮರಾಗ ನೇರಳೆ ಬಣ್ಣ, ಪಾರದರ್ಶಕ
ಹಳದಿ ಬೆಣಚು ಕಲ್ಲು ಹಳದಿಯಿಂದ ಕೆಂಪು ಛಾಯೆಯ ಕಿತ್ತಳೆ ಬಣ್ಣದಿಂದ ಕಂದು ಬಣ್ಣಗಳು, ಹಸಿರು ಲೇಪದ ಹಳದಿ ಬಣ್ಣದ ಖನಿಜ
ಪ್ರಾಸಿಯೋಲೈಟ್‌‌ ಪುದೀನ ಹಸಿರು ಬಣ್ಣ, ಪಾರದರ್ಶಕ
ಗುಲಾಬಿ ಬಣ್ಣದ ಸ್ಫಟಿಕ ಶಿಲೆ ಕೆಂಗುಲಾಬಿ ಬಣ್ಣದ, ಅರೆಪಾರದರ್ಶಕ/ಪಾರದೀಪಕ, ನಕ್ಷತ್ರತೋರ್ಪಡಿಕೆ ಲಕ್ಷಣವನ್ನು ವ್ಯಕ್ತಪಡಿಸುತ್ತದೆ
ಕೆಂಪು ಮಿನುಗು ಬಣ್ಣದ ಸ್ಫಟಿಕ ಶಿಲೆ ರೂಟೈಲ್‌‌/ಟೈಟಾನಿಯಮ್‌ ಡೈ ಆಕ್ಸೈಡ್‌‌‌ನ ಸೂಜಿಯಾಕಾರದ (ಸೂಜಿರೂಪದ ಶಿಲೆ) ಸೇರ್ಪಡೆಗಳನ್ನು ಹೊಂದಿರುತ್ತದೆ
ಹಾಲುಬಿಳುಪಿನ ಸ್ಫಟಿಕ ಶಿಲೆ ಶ್ವೇತವರ್ಣದ, ಅರೆಪಾರದರ್ಶಕ/ಪಾರದೀಪಕದಿಂದ ಅಪಾರದರ್ಶಕದವರೆಗೆ ವ್ಯತ್ಯಾಸವಾಗಬಹುದಾದ ಹಾಗೂ ನಕ್ಷತ್ರತೋರ್ಪಡಿಕೆ ಲಕ್ಷಣವನ್ನು ವ್ಯಕ್ತಪಡಿಸಬಹುದಾದ ಸ್ಫಟಿಕ ಶಿಲೆ
ಧೂಮ್ರವರ್ಣದ ಸ್ಫಟಿಕ ಶಿಲೆ ಕಂದು ಬಣ್ಣದಿಂದ ಬೂದು ಬಣ್ಣಗಳವರೆಗೆ ವ್ಯತ್ಯಾಸಗೊಳ್ಳಬಹುದಾಗಿರುವ ಅಪಾರದರ್ಶಕ ಸ್ಫಟಿಕ ಶಿಲೆ
ನಸುಗೆಂಪು ಶಿಲೆ ಕೆಂಪು ಛಾಯೆಯ ಕಿತ್ತಳೆ ಬಣ್ಣದ ಕ್ಯಾಲ್ಸೆಡನಿ, ಅರೆಪಾರದರ್ಶಕ/ಪಾರದೀಪಕ ಸ್ಫಟಿಕ ಶಿಲೆ

ಸಂಶ್ಲೇಷಿತ ಹಾಗೂ ಕೃತಕ ಸಂಸ್ಕರಣಗಳು

ಬದಲಾಯಿಸಿ
 
ಸುಮಾರು 19 cm ಉದ್ದವಿರುವ ಹಾಗೂ 127 ಗ್ರಾಮ್‌ಗಳಷ್ಟು ತೂಕವಿರುವ ಜಲೋಷ್ಣೀಯ ವಿಧಾನದ ಮೂಲಕ ಸಿದ್ಧಪಡಿಸಿದ ಸಂಶ್ಲೇಷಿತ ಸ್ಫಟಿಕ ಶಿಲಾ ಹರಳು

ಸ್ಫಟಿಕ ಶಿಲೆಗಳ ಎಲ್ಲಾ ವಿಧಗಳು ನೈಸರ್ಗಿಕವಾಗಿ ರೂಪುಗೊಳ್ಳುವುದಿಲ್ಲ. ಆಲಿವ್‌ ನಸುಬೂದು ಹಸಿರು ಬಣ್ಣದ ಪ್ರಸಿಯೋಲೈಟ್‌‌ ಎಂಬ ಶಿಲೆಯನ್ನು ಉಷ್ಣ ಸಂಸ್ಕರಣದ ಮೂಲಕ ಉತ್ಪಾದಿಸಲಾಗುತ್ತದೆ ; ನೈಸರ್ಗಿಕ ಪ್ರಸಿಯೋಲೈಟ್‌‌ ಕೂಡಾ ಪೋಲೆಂಡ್‌‌ನ ಲೋಯರ್‌ ಸಿಲೇಸಿಯಾ ಎಂಬಲ್ಲಿ ಕಂಡುಬಂದಿದೆ. ಹಳದಿ ಬೆಣಚು ಕಲ್ಲು ನೈಸರ್ಗಿಕವಾಗಿ ರೂಪುಗೊಳ್ಳುವುದಾದರೂ, ಅದರಲ್ಲಿ ಬಹುಪಾಲು ಪದ್ಮರಾಗಕ್ಕೆ ಉಷ್ಣ ಸಂಸ್ಕರಣೆ ನೀಡಿ ತಯಾರಿಸಿದ್ದರ ಪರಿಣಾಮವಾಗಿರುತ್ತದೆ. ಕೆಂಪು ಛಾಯೆಯ ಕ್ಯಾಲ್ಸಡೆನಿಗೆ ಉಷ್ಣ ಸಂಸ್ಕರಣ ನೀಡಿ ಅದರ ಬಣ್ಣವನ್ನು ಗಾಢಗೊಳಿಸುವುದು ವ್ಯಾಪಕವಾಗಿ ರೂಢಿಯಾಗಿದೆ.

ನೈಸರ್ಗಿಕ ಸ್ಫಟಿಕ ಶಿಲೆಗಳು ಬಹುತೇಕ ಸಂದರ್ಭಗಳಲ್ಲಿ ಜೋಡಿಯಾಗಿ ಯಮಳ ಸ್ಫಟಿಕಗಳಾಗುವುದರಿಂದ, ಉದ್ಯಮದಲ್ಲಿ ಬಳಕೆಯಾಗುವ ಬಹುತೇಕ ಸ್ಫಟಿಕ ಶಿಲೆಗಳು ಸಂಶ್ಲೇಷಿತವಾಗಿರುತ್ತವೆ. ದೊಡ್ಡ ಗಾತ್ರದ, ದೋಷರಹಿತ ಜೋಡಿಯಾಗದ ಸ್ಫಟಿಕಗಳನ್ನು ಜಲೋಷ್ಣೀಯ ಪ್ರಕ್ರಿಯೆಗಳ ಮೂಲಕ ಸ್ವತಾಪಕದಲ್ಲಿ ಉತ್ಪಾದಿಸಲಾಗುತ್ತದೆ; ಪಚ್ಚೆ/ಮರಕತಗಳನ್ನು ಸಹಾ ಇದೇ ರೀತಿಯಲ್ಲಿ ಸಂಶ್ಲೇಷಿತಗೊಳಿಸಲಾಗುತ್ತದೆ. ಇವುಗಳೆಲ್ಲವನ್ನೂ ಈಗಲೂ ಸಾಧಾರಣವಾಗಿ ಸ್ಫಟಿಕ ಶಿಲೆಗಳೆಂದೇ ಕರೆಯಲಾಗುವುದಾದರೂ, ಈ ವಸ್ತುಗಳಿಗೆ ಸೂಕ್ತವಾದ ಹೆಸರೆಂದರೆ ಸಿಲಿಕಾನ್‌‌ ಡಯಾಕ್ಸೈಡ್‌‌ ಆಗಿರುತ್ತದೆ.

ಲಭ್ಯತೆ/ದೊರಕುವಿಕೆ

ಬದಲಾಯಿಸಿ

ಸ್ಫಟಿಕ ಶಿಲೆಯು ಗ್ರಾನೈಟ್‌ ಹಾಗೂ ಇತರ ಫೆಲ್ಸ್‌‌ಪರ್‌‌ ಪೂರಿತ ಅಗ್ನಿಶಿಲೆಗಳ ಸಾರಭೂತ ಘಟಕವಾಗಿದೆ. ಮರಳುಶಿಲೆ ಹಾಗೂ ಜೇಡಿ ಪದರಗಲ್ಲುಗಳಂತಹಾ ಸಂಚಿತಶಿಲೆಗಳಲ್ಲಿ ಇದು ಸಾಮಾನ್ಯ ಅಂಶವಾಗಿದ್ದು, ಬಹುತೇಕ ಕಾರ್ಬೋನೇಟ್‌ ಶಿಲೆಗಳಲ್ಲಿ ಇದು ವಿವಿಧ ಪ್ರಮಾಣದಲ್ಲಿ ಲಭ್ಯವಿರುವ ಆನುಷಂಗಿಕ ಖನಿಜವಾಗಿ ಕೂಡಾ ಲಭ್ಯವಿರುತ್ತದೆ. ಅಷ್ಟೇ ಅಲ್ಲದೇ ಇದು ಪದರಶಿಲೆ, ಗ್ನೈಸ್‌ ರೂಪಾಂತರಿತ ಶಿಲೆ, ಸ್ಫಟಿಕ ರೂಪಾಂತರ/ಕ್ವಾಟ್ಸೈಟ್‌‌ ಶಿಲೆ ಹಾಗೂ ಇತರೆ ರೂಪಾಂತರಿಕ ಶಿಲೆಗಳ ಪ್ರಧಾನ ಘಟಕವಾಗಿದೆ. ವಾತಾವರಣ ಬದಲಾವಣೆಗಳಿಗೆ ಇದು ತೋರುವ ನಿರೋಧಕತೆಯಿಂದಾಗಿ ಪ್ರವಾಹ ಸಂಚಿತ ಶಿಲೆಗಳು ಹಾಗೂ ಶೇಷಾತ್ಮಕ ಮಣ್ಣಿನ ಪದರಗಳಲ್ಲಿ ಇದು ಪ್ರಧಾನವಾಗಿ ಲಭ್ಯವಿರುತ್ತದೆ.

ಸ್ಫಟಿಕ ಶಿಲೆಗಳು ಖನಿಜಗಳ ಅದಿರುಗಳ ಜೊತೆಗಿರುವ ಅದಿರುತ್ಯಾಜ್ಯ/ಕಸಗಳಂತಹಾ ಜಲೋಷ್ಣೀಯ ಸಿರೆಗಳ ಮೂಲಕ ರೂಪುಗೊಳ್ಳುತ್ತವೆ. ಸ್ಫಟಿಕ ಶಿಲೆಗಳ ದೊಡ್ಡ ಹರಳುಗಳು ಪೆಗ್ಮಾಟೈಟ್‌‌ಗಳಲ್ಲಿ ಕಂಡುಬರುತ್ತವೆ. ಉತ್ತಮವಾಗಿ-ರೂಪುಗೊಂಡ ಸ್ಫಟಿಕಗಳು ಅನೇಕ ಮೀಟರ್‌ಗಳಷ್ಟು ಉದ್ದ ಹಾಗೂ ನೂರಾರು ಕಿಲೋಗ್ರಾಮ್‌ಗಳಷ್ಟು ತೂಗಬಲ್ಲವು.

ಅರೆವಾಹಕ ಉದ್ದಿಮೆಗಳಲ್ಲಿ ಸಿಲಿಕಾನ್‌‌ ಬಿಲ್ಲೆಗಳನ್ನು ಮೂಡಿಸಲು ಬಳಸಲಾಗುವ ಕುಲುಮೆ/ಮೂಸೆಗಳು ಹಾಗೂ ಇತರೆ ಉಪಕರಣಗಳಿಗೆ ಅಗತ್ಯವಾಗಿರುವ ನೈಸರ್ಗಿಕವಾಗಿ ರಚಿತಗೊಂಡ ವಿಪರೀತ ಶುದ್ಧತೆಯ ಸ್ಫಟಿಕ ಶಿಲಾ ಹರಳುಗಳು ಬಹು ಬೆಲೆಬಾಳುವಂತಹವು ಹಾಗೂ ಅಷ್ಟೇ ಅಪರೂಪದವು. ಉತ್ತರ ಕೆರೋಲಿನಾದ ಸ್ಪ್ರೂಸ್‌ ಪೈನ್‌ನಲ್ಲಿಯ ಸ್ಪ್ರೂಸ್‌ ಪೈನ್‌ನ ರತ್ನಶಿಲಾ ಗಣಿಯು ಅಧಿಕ ಶುದ್ಧತೆಯ ಸ್ಫಟಿಕ ಶಿಲೆಗಳ ಪ್ರಮುಖ ಗಣಿಗಾರಿಕೆಯ ನೆಲೆಯಾಗಿದೆ.[೧೩]

ಸಂಬಂಧಿತ ಸಿಲಿಕಾ ಖನಿಜಗಳು

ಬದಲಾಯಿಸಿ

ಟ್ರಿಡಿಮೈಟ್‌ ಹಾಗೂ ಕ್ರಿಸ್ಟೋಬಲೈಟ್‌ಗಳು SiO2ನ ಅಧಿಕ ಉಷ್ಣತೆಯ ರೂಪಾಂತರಗಳಾಗಿದ್ದು ಸಿಲಿಕಾ ಅಧಿಕಾಂಶವಿರುವ ಅಗ್ನಿಪರ್ವತದ ಶಿಲೆಗಳಲ್ಲಿ ರೂಪುಗೊಳ್ಳುತ್ತವೆ. ಕೋಯೆಸೈಟ್‌ ಎಂಬುದು ಅಧಿಕ ಸಾಂದ್ರತೆಯ ರೂಪಾಂತರವಾಗಿದ್ದು ಕೆಲ ಉಲ್ಕಾಪಾತವಾದ ಸ್ಥಳಗಳಲ್ಲಿ ಹಾಗೂ ಭೂಮಿಯ ತೊಗಟೆಯಲ್ಲಿ ಸಾಮಾನ್ಯವಾಗಿರುವ ಒತ್ತಡಕ್ಕಿಂತ ಹೆಚ್ಚಿನ ಒತ್ತಡದಲ್ಲಿ ರೂಪುಗೊಂಡ ರೂಪಾಂತರ ಶಿಲೆಗಳಲ್ಲಿ ಕಂಡುಬರುತ್ತದೆ. ಷ್ಟಿಸೋವೈಟ್‌ ಎಂಬುದು ಮತ್ತಷ್ಟು ಸಾಂದ್ರವಾದ ಹಾಗೂ ಅಧಿಕ ಒತ್ತಡದಲ್ಲಿ ರೂಪುಗೊಳ್ಳುವ ಕೆಲ ಉಲ್ಕಾಪಾತವಾದ ಸ್ಥಳಗಳಲ್ಲಿ ಕಂಡುಬಂದ ಸ್ಫಟಿಕ ಶಿಲೆಯ ರೂಪಾಂತರವಾಗಿದೆ. ಲೆಕಾ/ಚಾಟೆಲೀರೈಟ್‌‌ ಎಂಬುದು ಅಸ್ಫಾಟಿಕ ರೂಪದ ಸಿಲಿಕಾ ಗಾಜಿನ ರೂಪದ SiO2 ಆಗಿದ್ದು ಸ್ಫಟಿಕ ಶಿಲಾ ಮರಳಿನಲ್ಲಿ ಸಿಡಿಲಿನ ಹೊಡೆತದಿಂದ ಇವು ರೂಪುಗೊಳ್ಳುತ್ತವೆ.

ಇತಿಹಾಸ

ಬದಲಾಯಿಸಿ
 
ಸ್ಫಟಿಕ (ಸ್ಫುಟ ಸ್ಫಟಿಕ ಶಿಲೆ) ಕರಂಡಕ, c.1000
 
ಪಾರದರ್ಶಕತೆ ವ್ಯಕ್ತಪಡಿಸುತ್ತಿರುವ ಸ್ಫಟಿಕ ಶಿಲಾ ಹರಳು

"ಸ್ಫಟಿಕ ಶಿಲೆ" ಎಂಬ ಪದವು ಸ್ಲ್ಯಾವಿಕ್‌‌ ಭಾಷಾ ಮೂಲಗಳಿಂದ (ಝೆಕ್‌ ಅಲ್ಪಸಂಖ್ಯಾತರು ಇದನ್ನು ಕ್ರೆಮೆನ್‌ ಎನ್ನುತ್ತಿದ್ದರು) ವ್ಯುತ್ಪನ್ನಗೊಂಡ ಜರ್ಮನ್‌ ಪದಗಳಾದ‌ Quarz,[೧೪]ಗಳಿಂದ ವ್ಯುತ್ಪನ್ನಗೊಂಡಿದೆ. ಇತರೆ ಮೂಲಗಳು ಪದದ ಮೂಲವನ್ನು ಅಡ್ಡಹಾಯ್ದ-ಬಿರುಕುಗಳುಳ್ಳ ಅದಿರು ಎಂಬರ್ಥದ ಸ್ಯಾಕ್ಸನ್‌ ಪದ ಕ್ವೆರ್ಕ್ಲುಫ್ಟರ್ಟ್ಜ್‌‌‌ ‌‌ಎಂದು ಸೂಚಿಸುತ್ತವೆ.[೧೫]

ಆಸ್ಟ್ರೇಲಿಯಾದ ಮೂಲವಾಸಿಗಳ ಪುರಾಣ ಸಾಹಿತ್ಯದಲ್ಲಿ ಪ್ರಸ್ತಾಪಿತವಾಗುವ ಮಾಬನ್‌‌ ಗೂಢ ವಸ್ತುವಿರಬಹುದೆಂದು ಗುರುತಿಸಲಾಗಿರುವ ಪ್ರಧಾನ ವಸ್ತು ಸ್ಫಟಿಕ ಶಿಲೆಯಾಗಿದೆ. ಇದನ್ನು ಐರ್‌ಲೆಂಡ್‌‌ ಗಣರಾಜ್ಯನ್ಯೂಗ್ರೇಂಜ್‌ ಅಥವಾ ಕ್ಯಾರೋಮೋರ್‌‌ಗಳಂತೆ ಯೂರೋಪ್‌‌ನಲ್ಲಿ ಹಾದಿಬದಿಯ ಗೋರಿಗಳನ್ನು ಹೊಂದಿರುವ ರುದ್ರಭೂಮಿಗಳಲ್ಲಿ ಅಪರ ಕ್ರಿಯೆಗಳ ಭಾಗವಾಗಿ ಕ್ಲುಪ್ತ ರೀತಿಯಲ್ಲಿ ಬಳಸಲಾಗುತ್ತಿತ್ತು. ಸ್ಫಟಿಕ ಶಿಲೆಯನ್ನು ಸೂಚಿಸುವ ಐರಿಷ್‌ ಪದವೆಂದರೆ ಗ್ರಿಯನ್‌ ಕ್ಲಾಚ್‌ ಎಂದು, ಅದರ ಅರ್ಥ 'ಸೂರ್ಯನ ಶಿಲೆ'.

ಜೇಡ್‌ ರತ್ನವು ಪೂರ್ವ ಏಷ್ಯಾ ಹಾಗೂ ಪೂರ್ವ-ಕೊಲಂಬಿಯನ್‌ ಅಮೇರಿಕಾಗಳಲ್ಲಿ ಪ್ರಾಚೀನ ಕಾಲದಿಂದಲೂ ಕೆತ್ತನೆಗೆ ಬಳಸುವ ಬಹು ಮಹತ್ವದ ಅರೆ-ಪ್ರಶಸ್ತ ಶಿಲೆಯಾಗಿದ್ದರೆ, ಯೂರೋಪ್‌‌ ಹಾಗೂ ಮಧ್ಯಪ್ರಾಚ್ಯಗಳಲ್ಲಿ ಕೊರೆದ ರತ್ನಶಿಲೆಗಳು ಹಾಗೂ ರತ್ನಶಿಲಾ ಉಬ್ಬುಕೆತ್ತನೆಗಳು, ಶಿಲಾ ಸ್ಫಟಿಕ ಕರಂಡಕಗಳು, ಹಾಗೂ ಅತಿರಂಜಿತ ಅಲಂಕಾರದ ಪಾತ್ರೆಗಳೂ ಸೇರಿದಂತೆ ವಿವಿಧ ಬಗೆಯ ರತ್ನಾಭರಣ ತಯಾರಿಕೆ ಹಾಗೂ ಕಠಿಣಶಿಲೆಗಳ ಕೆತ್ತನೆಗಳಲ್ಲಿ ಸ್ಫಟಿಕ ಶಿಲೆಯ ಬೇರೆ ಬೇರೆ ವಿಧಗಳನ್ನು ಸರ್ವೇಸಾಮಾನ್ಯವಾಗಿ ಬಳಸಲಾಗುತ್ತಿತ್ತು. ಆಭರಣ ತಯಾರಿಕೆಯನ್ನು ಹೊರತುಪಡಿಸಿ ವಾಡಿಕೆಯಿಂದ ಹೊರಗುಳಿದ 19ನೇ ಶತಮಾನದ ಮಧ್ಯದವರೆಗೆ ಹೀಗೆ ಬಹು ಬೆಲೆಬಾಳುವ ವಸ್ತುಗಳನ್ನು ಉತ್ಪಾದಿಸುವ ಪರಂಪರೆಯು ಮುಂದುವರೆಯಿತು. ಉಬ್ಬುಕೆತ್ತನೆಗಳ ರತ್ನಶಿಲೆಗಳ ತಂತ್ರವು ಗೋಮೇದ/ಧಕ ಹಾಗೂ ಇತರೆ ವಿಧಗಳ ರತ್ನಗಳಲ್ಲಿ ಹೊರಹೊಮ್ಮುವ ವರ್ಣರಂಜಿತ ಪಟ್ಟಿಗಳನ್ನು ಬಳಸಿಕೊಳ್ಳಲಾಗುತ್ತದೆ.

ರೋಮನ್‌ ನಿಸರ್ಗವಾದಿ ಹಿರಿಯ ಪ್ಲಿನಿಯು ಸ್ಫಟಿಕ ಶಿಲೆಯನ್ನು ದೀರ್ಘಕಾಲದಿಂದ ಘನೀಕೃತಗೊಂಡಿದ್ದು ಶಾಶ್ವತವಾಗಿ ಘನೀಕೃತಗೊಂಡ ಮಂಜುಗೆಡ್ಡೆಯೆಂದು ಭಾವಿಸಿದ್ದರು. ("ಸ್ಫಟಿಕ" ಪದವು ಶುದ್ಧತೆಯನ್ನು ಸೂಚಿಸುವ ಗ್ರೀಕ್‌ ಪದದಿಂದ ವ್ಯುತ್ಪನ್ನಗೊಂಡಿದೆ.) ಈ ಕಲ್ಪನೆಯನ್ನು ಬೆಂಬಲಿಸಲು ಅವರು ಸ್ಫಟಿಕ ಶಿಲೆಯು ಆಲ್ಪ್ಸ್‌‌‌ ಪರ್ವತಶ್ರೇಣಿಗಳ ಹಿಮನದಿಗಳ ಬಳಿ ದೊರೆಯುತ್ತದೆಯೇ ಹೊರತು ಅಗ್ನಿಪರ್ವತಗಳ ಮೇಲಲ್ಲ ಎಂದು ಹೇಳುತ್ತಿದ್ದರಲ್ಲದೇ ದೊಡ್ಡ ಸ್ಫಟಿಕ ಶಿಲಾ ಹರಳುಗಳು ಕೈಗಳನ್ನು ತಂಪಾಗಿಸಲು ಅನುಕೂಲವಾಗುವಂತೆ ವರ್ತುಲಗಳಾಗಿ ರೂಪುಗೊಂಡಂತವು ಎಂದು ವಿಶ್ಲೇಷಿಸಿದ್ದರು. ಅವರಿಗೆ ಸ್ಫಟಿಕ ಶಿಲೆಯ ಬೆಳಕನ್ನು ರೋಹಿತವನ್ನಾಗಿ ವಿಭಜಿಸುವ ಸಾಮರ್ಥ್ಯವಿರುವುದೂ ಗೊತ್ತಿತ್ತು. ಈ ಕಲ್ಪನೆಯು ಕನಿಷ್ಟ 1600ರ ದಶಕದವರೆಗೆ ಮುಂದುವರೆದಿತ್ತು.

17ನೇ ಶತಮಾನದಲ್ಲಿ, ನಿಕೋಲಸ್‌ ಸ್ಟೆನೋರ ಸ್ಫಟಿಕ ಶಿಲೆಯ ಅಧ್ಯಯನವು ಆಧುನಿಕ ಸ್ಫಟಿಕಶಾಸ್ತ್ರವು ರೂಪುಗೊಳ್ಳಲು ಹಾದಿಯನ್ನು ಸುಗಮಗೊಳಿಸಿತು. ಅವರು ಸ್ಫಟಿಕ ಶಿಲಾ ಹರಳು ಎಷ್ಟೇ ವಿರೂಪಗೊಂಡರೂ, ದೀರ್ಘ ಅಶ್ರಗದ ಮುಖಗಳು ಯಾವಾಗಲೂ ಪರಿಪೂರ್ಣ 60° ಕೋನದಲ್ಲಿರುತ್ತವೆ ಎಂಬುದನ್ನು ಕಂಡುಹಿಡಿದರು.

ಚಾರ್ಲ್ಸ್‌ B. ಸಾಯರ್‌‌ರು ವಾಣಿಜ್ಯ ಸ್ಫಟಿಕ ಶಿಲಾ ಹರಳುಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಯುನೈಟೆಡ್‌‌ ಸ್ಟೇಟ್ಸ್‌‌ಓಹಿಯೋ ರಾಜ್ಯಕ್ಲೀವ್‌ಲ್ಯಾಂಡ್‌ನಲ್ಲಿ ಕಂಡುಹಿಡಿದರು. ಇದರಿಂದಾಗಿ ವಿದ್ಯುತ್‌‌ ಉಪಕರಣಗಳಲ್ಲಿ ಬಳಸಲು ಗಣಿಗಾರಿಕೆಯಿಂದ ಪಡೆದ ಹಾಗೂ ಕತ್ತರಿಸಿದ ಸ್ಫಟಿಕ ಶಿಲೆಗಳ ಬಳಕೆಯ ಬದಲಾಗಿ ತಯಾರಿಸಿದ ಸ್ಫಟಿಕ ಶಿಲೆಗಳ ಬಳಕೆಗೆ ಸ್ಥಿತ್ಯಂತರಗೊಳ್ಳುವಂತಾಯಿತು.

ಸ್ಫಟಿಕ ಶಿಲೆ'ಯ ಸಂಪೀಡನ ವಿದ್ಯುತ್‌ ಲಕ್ಷಣಗಳನ್ನು ಜಾಕ್ವೆಸ್‌ ಹಾಗೂ ಪಿಯರಿ ಕ್ಯೂರಿಯವರುಗಳು 1880ರಲ್ಲಿ ಕಂಡುಹಿಡಿದರು. ಸ್ಫಟಿಕ ಶಿಲಾ ಆಂದೋಲಕ ಅಥವಾ ಅನುರಣಕಗಳನ್ನು ಮೊತ್ತಮೊದಲಿಗೆ 1921ರಲ್ಲಿ ವಾಲ್ಟರ್‌ ಗೈಟನ್‌ ಕ್ಯಾಡಿಯವರು ಅಭಿವೃದ್ಧಿಪಡಿಸಿದರು.[೧೬] ಜಾರ್ಜ್‌‌ ವಾಷಿಂಗ್ಟನ್‌ ಪಿಯೆರ್ಸ್‌ ಸ್ಫಟಿಕ ಶಿಲಾ ಹರಳುಗಳ ಆಂದೋಲಕಗಳನ್ನು 1923ರಲ್ಲಿ ವಿನ್ಯಾಸ ಮಾಡಿ ಅದರ ಹಕ್ಕುಸ್ವಾಮ್ಯವನ್ನು ಪಡೆದರು.[೧೭] ವಾರ್ರೆನ್‌ ಮ್ಯಾರಿಸನ್‌ ಮೊದಲ 1927ರಲ್ಲಿ ಕ್ಯಾಡಿ ಹಾಗೂ ಪಿಯೆರ್ಸ್‌ರ ಅಧ್ಯಯನಗಳನ್ನು ಆಧಾರವಾಗಿಟ್ಟುಕೊಂಡು ಸ್ಫಟಿಕ ಶಿಲಾ ಆಂದೋಲಕ ಗಡಿಯಾರವನ್ನು ನಿರ್ಮಿಸಿದರು.[೧೮]

ಸಂಪೀಡನ ವಿದ್ಯುತ್‌‌

ಬದಲಾಯಿಸಿ

ಸ್ಫಟಿಕ ಶಿಲಾ ಹರಳುಗಳು ಸಂಪೀಡನ ವಿದ್ಯುತ್‌ ಲಕ್ಷಣಗಳನ್ನು ಹೊಂದಿರುತ್ತವೆ; ಯಾಂತ್ರಿಕ ಒತ್ತಡವನ್ನು ಅವುಗಳಿಗೆ ಅನ್ವಯಿಸಿದಾಗ ವಿದ್ಯುತ್‌ ಕ್ಷೇತ್ರ/ವಿಭವವನ್ನು ಅವು ಪ್ರಕಟಗೊಳಿಸುತ್ತವೆ. ಸ್ಫಟಿಕ ಶಿಲಾ ಹರಳುಗಳ ಈ ಲಕ್ಷಣಗಳ ಹಳೆಯ ಬಳಕೆಯು ಧ್ವನಿಲೇಖ/ಫೋನೋಗ್ರಾಫ್‌ಗಳ ಗ್ರಾಹಕಗಳ ತಯಾರಿಕೆಯಲ್ಲಿ ಮಾಡಲಾಗಿತ್ತು. ಇಂದು ಸ್ಫಟಿಕ ಶಿಲೆಗಳ ಸಂಪೀಡನ ವಿದ್ಯುತ್‌ ಲಕ್ಷಣಗಳ ಪ್ರಧಾನವಾದ ಬಳಕೆಗಳಲ್ಲಿ ಒಂದೆಂದರೆ ಸ್ಫಟಿಕ ಆಂದೋಲಕಗಳು. ಸ್ಫಟಿಕ ಶಿಲಾ ಗಡಿಯಾರವು ಈ ಖನಿಜವನ್ನು ಬಳಸುವ ಅತ್ಯಂತ ಪರಿಚಿತ ಸಾಧನ. ಸ್ಫಟಿಕ ಶಿಲಾ ಹರಳಿನ ಆಂದೋಲಕದ ಅನುರಣನಾ ಆವರ್ತನಾಂಕವನ್ನು ಯಾಂತ್ರಿಕವಾಗಿ ಅದನ್ನು ಹೇರುವ ಮೂಲಕ ಬದಲಾಯಿಸಲಾಗುತ್ತದೆ ಹಾಗೂ ಈ ಸೂತ್ರವನ್ನು ಸ್ಫಟಿಕ ಶಿಲಾ ಹರಳುಗಳ ಸೂಕ್ಷ್ಮ ತಕ್ಕಡಿಗಳು ಹಾಗೂ ತೆಳು-ಪದರ/ಹಾಳೆಗಳ ಸ್ಥೂಲತಾಸೂಚಕ ಸಾಧನಗಳಲ್ಲಿ ಅಲ್ಪ ಪ್ರಮಾಣದ ದ್ರವ್ಯರಾಶಿಯ ಬದಲಾವಣೆಗಳ ನಿಖರ ಮಾಪನಗಳಿಗಾಗಿ ಬಳಸಲಾಗುತ್ತದೆ.

ಇವನ್ನೂ ನೋಡಿ

ಬದಲಾಯಿಸಿ
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಟಿಪ್ಪಣಿಗಳು

ಬದಲಾಯಿಸಿ
  1. ೧.೦ ೧.೧ ೧.೨ Deer, W. A., R. A. Howie and J. Zussman, An Introduction to the Rock Forming Minerals, Logman, 1966, pp. 340–355 ISBN 0-582-44210-9
  2. Handbook of Mineralogy. Quartz
  3. Mindat. Quartz
  4. Webmineral. Quartz
  5. Hurlbut, Cornelius S.; Klein, Cornelis (1985). Manual of Mineralogy (20 ed.). ISBN 0-471-80580-7.{{cite book}}: CS1 maint: multiple names: authors list (link)
  6. http://www.etymonline.com/index.php?term=quartz etymonline.com
  7. ಕ್ರಿಸ್ಟಲ್‌ ಡಾಟಾ, ಡಿಟರ್ಮಿನೇಟಿವ್‌ ಟೇಬಲ್ಸ್‌‌, ACA ಮಾನೋಗ್ರಾಫ್‌‌‌ No. 5, ಅಮೇರಿಕನ್‌‌ ಕ್ರಿಸ್ಟಲೋಗ್ರಾಫಿಕ್‌ ಅಸೋಸಿಯೇಷನ್‌, 1963
  8. Heaney, Peter J. (1994). "Structure and Chemistry of the low-pressure silica polymorphs". Reviews in Mineralogy and Geochemistry. 29 (1): 1–40.
  9. http://www.mindat.org/min-1054.html
  10. ಮಿನ್‌ಡಾಟ್‌. ಗುಲಾಬಿ ಬಣ್ಣದ ಸ್ಫಟಿಕ ಶಿಲೆ
  11. ಸ್ಫಟಿಕ ಶಿಲೆಗಳ ವರ್ಣಮಯ ವಿಧಗಳು Archived 2011-07-19 ವೇಬ್ಯಾಕ್ ಮೆಷಿನ್ ನಲ್ಲಿ., ಕಾಲ್ಟೆಕ್‌‌
  12. ಮಿನರಲ್‌ ಗ್ಯಾಲರೀಸ್‌ ತಾಣದಲ್ಲಿ ಹಾಲುಬಿಳುಪಿನ ಸ್ಫಟಿಕ ಶಿಲೆಗಳು
  13. Sue Nelson (2 August 2009). "Silicon Valley's secret recipe". BBC News.
  14. ಆಂಗ್ಲಭಾಷೆಯಲ್ಲಿನ ಜರ್ಮನ್‌‌ ಆಕರ ಪದಗಳು
  15. "ಖನಿಜ ಭೂಪಟ/ಅಟ್ಲಾಸ್‌‌ , ಕ್ವೀನ್ಸ್‌‌ಲ್ಯಾಂಡ್‌ ತಾಂತ್ರಿಕ ವಿಶ್ವವಿದ್ಯಾಲಯ". Archived from the original on 2007-09-04. Retrieved 2010-07-02.
  16. "The Quartz Watch – Walter Guyton Cady". The Lemelson Center, National Museum of American History. Smithsonian Institution. Archived from the original on 2009-01-04. Retrieved 2010-07-02.
  17. "The Quartz Watch – George Washington Pierce". The Lemelson Center, National Museum of American History. Smithsonian Institution. Archived from the original on 2009-01-04. Retrieved 2010-07-02.
  18. "The Quartz Watch – Warren Marrison". The Lemelson Center, National Museum of American History. Smithsonian Institution. Archived from the original on 2009-01-25. Retrieved 2010-07-02.


ಬಾಹ್ಯ ಕೊಂಡಿಗಳು

ಬದಲಾಯಿಸಿ