ಅಗೋರಾಫೋಬಿಯಾ
[೧]ಅಗೋರಾಫೋಬಿಯಾ (ಗ್ರೀಕ್ ಭಾಷೆಯಲ್ಲಿ ἀγορά, "ಮಾರುಕಟ್ಟೆಯ ಪ್ರದೇಶ"; ಮತ್ತು φόβος/φοβία, -ಫೋಬಿಯಾ) ಒಂದು ಆತಂಕಜನ್ಯ ಅಸ್ವಸ್ಥತೆ. ಸುಲಭವಾಗಿ ಹೊರಹೋಗುವ ದಾರಿಯಿರದ ವ್ಯವಸ್ಥೆಯಿಂದ ತಲ್ಲಣದ ಆಕ್ರಮಣದ ಭಯದಿಂದ ಅಗೋರಾಫೋಬಿಯಾ ಉಂಟಾಗಬಹುದು. ಅಲ್ಲದೆ, ಸಾಮಾಜಿಕ ಆತಂಕ ಸಮಸ್ಯೆಗಳು ಸಹ ಇದರ ಹಿಂದಿನ ಕಾರಣಗಳಿರಬಹುದು. ತತ್ಪರಿಣಾಮವಾಗಿ, ಅಗೋರಾಫೋಬಿಯಾ ಪೀಡಿತರಾದವರು ಸಾರ್ವಜನಿಕ ಮತ್ತು/ಅಥವಾ ಅಪರಿಚಿತ ಸ್ಥಳಗಳಿಂದ, ವಿಶೇಷತಃ ದೊಡ್ಡ, ಮುಕ್ತ ಸ್ಥಳಗಳಾದ ಶಾಪಿಂಗ್ ಮಾಲ್ ಗಳು ಅಥವಾ ವಿಮಾನನಿಲ್ದಾಣಗಳಂತಹ ಬಚ್ಚಿಟ್ಟುಕೊಳ್ಳಲು ಅವಕಾಶವಿಲ್ಲದಂತಹ ಜಾಗಗಳಿಂದ, ದೂರವಿರಲು ಪ್ರಯತ್ನಿಸುತ್ತಾರೆ. ತೀವ್ರತರವಾದ ಸಂದರ್ಭಗಳಲ್ಲಿ, ಹೀಗೆ ಪೀಡಿತನಾದವನು/ಳು ತನ್ನ ಮನೆಗೇ ಸೀಮಿತವಾಗಿದ್ದು, ಆ ಸುರಕ್ಷಿತ ಜಾಗದಿಂದ ಹೊರಕ್ಕೆ ಪಯಣಿಸಲು ಬಹಳ ಕಷ್ಟಪಡುತ್ತಾರೆ. ಸಾರ್ವಜನಿಕ ಸ್ಥಳಗಳ ಬಗ್ಗೆ ಇರುವ ಭೀತಿಯಿದೆಂದು ಬಹುತೇಕವಾಗಿ ತಿಳಿದಿದ್ದರೂ ಸಹ, ಈಗಿನ ದಿನಗಳಲ್ಲಿ ತಲ್ಲಣದ ಆಕ್ರಮಣಗಳ ಉಲ್ಬಣತೆಯಿಂದ ಅಗೋರಾಫೋಬಿಯಾ ವೃದ್ಧಿಸುತ್ತದೆ ಎಂದು ನಂಬಲಾಗಿದೆ.[೨] ಆದರೂ, ಸ್ವಾಭಾವಿಕ ತಲ್ಲಣ ಆಕ್ರಮಣ ಮತ್ತು ಅಗೋರಾಫೋಬಿಯಾಗಳ ನಡುವಿನ ಡಿಎಸ್ಎಮ್-IVರಲ್ಲಿನ ಆರೋಪಿತ ಏಕುಮುಖ ಕಾರಣಾರ್ಥಕ ಸಂಬಂಧವು ಸರಿಯಾದುದಲ್ಲವೆನ್ನಲು ಪುರಾವೆಗಳಿವೆ.[೩] ಯುಎಸ್ ನಲ್ಲಿ ೧೮ರಿಂದ ೫೪ರವರೆಗಿನ ಸುಮಾರು ೩.೨ ಮಿಲಿಯನ್ ವಯಸ್ಕರು, ಅಥವಾ ಸುಮಾರು ೨.೨%, ಅಗೋರಾಫೋಬಿಯಾದಿಂದ ನರಳುತ್ತಿದ್ದಾರೆ.[೪]
ವ್ಯಾಖ್ಯಾನ
[ಬದಲಾಯಿಸಿ]ಆಗ್ರಾಫೋಬಿಯಾಕ್ಕಿಂತಲೂ ಭಿನ್ನವೇ ಆದ ಅಗೋರಾಫೋಬಿಯಾ ವ್ಯಕ್ತಿಯು ತಾನಿರುವ ಅಪರಿಚಿತ ವಾತಾವರಣದಲ್ಲಿ (ಜಾಗದಲ್ಲಿ)ತನಗೆ ಯಾವುದೇ ವಿಧದ ಹತೋಟಿಯಿಲ್ಲವೆಂದು ಅಕಾರಣವಾಗಿ ಭೀತಿಗೊಳಗಾಗುವ ಸ್ಥಿತಿ. ಈ ಭೀತಿಗೆ ಕಾರಣಗಳು ಮುಕ್ತ(ಆವೃತವಲ್ಲದ) ಜಾಗಗಳು, ಗುಂಪು(ಸಾಮಾಜಿಕ ಆತಂಕ), ಅಥವಾ ಪ್ರಯಾಣ(ಹತ್ತಿರದ ಸ್ಥಳಗಳಿಗೂ ಸಹ) ಇರಬಹುದು. ಯಾವಾಗಲೂ ಅಲ್ಲದಿದ್ದರೂ, ಸಾಮಾನ್ಯವಾಗಿ, ಅಗೋರಾಫೋಬಿಯಾಕ್ಕೆ ಒಳಗಾದವರು ಸಾಮಾಜಿಕವಾಗಿ ಮುಜುಗರಕ್ಕೊಳಗಾಗುವ ಭೀತಿ ಹೊಂದಿರುತ್ತಾರೆ, ಏಕೆಂದರೆ ಅಗೋರಾಫೋಬಿಯಾಕ್ಕೆ ಒಳಗಾದವರು ತಲ್ಲಣದ ಆಕ್ರಮಣಗಳು ಯಾವ ಕ್ಷಣದಲ್ಲಾದರೂ ಆಗಬಹುದೆಂದು ಹೆದರಿರುತ್ತಾರೆ ಮತ್ತು ತತ್ಕಾರಣ ಸಾರ್ವಜನಿಕವಾಗಿ ತಳಮಳಗೊಂಡವರಂತೆ ಕಾಣುತ್ತಾರೆ. ಈ ಪರಿಸ್ಥಿತಿಯನ್ನು ಕೆಲವೊಮ್ಮೆ 'ಸಾಮಾಜಿಕ ಅಗೋರಾಫೋಬಿಯಾ' ಎಂದು ಕರೆಯಲಾಗುತ್ತದೆ; ಇದು ಒಂದು ವಿಧದ ಸಾಮಾಜಿಕ ಆತಂಕ ವ್ಯತಿಕ್ರಮವಾಗಿರಬಹುದು ಮತ್ತು ಇದನ್ನು ಕೆಲವೊಮ್ಮೆ "ಸಾಮಾಜಿಕ ಫೋಬಿಯಾ" ಎಂದೂ ಕರೆಯಲಾಗುತ್ತದೆ.ಎಲ್ಲಾ ಅಗೋರಾಫೋಬಿಯಾಗಳೂ ಸಾಮಾಜಿಕ ಸ್ಥಳಗಳಿಗೆ ಸೀಮಿತವಾದುದೇನಲ್ಲ. ಕೆಲವು ಅಗೋರಾಫೋಬಿಯಾದ ರೋಗಿಗಳಿಗೆ ತೆರೆದ ಜಾಗಗಳನ್ನು (ಮುಕ್ತಸ್ಥಳಗಳು) ಕಂಡರೆ ಭಯ. ಅಗೋರಾಫೋಬಿಯಾವನ್ನು "ಒಂದು ಅಥವಾ ಅದಕ್ಕೂ ಹೆಚ್ಚಿನ ಬಾರಿ ತಲ್ಲಣದ ಆಕ್ರಮಣಕ್ಕೆ ಒಳಗಾದವರಿಗೆ, ಕೆಲವೊಮ್ಮೆ ಅತೀವ ಭೀತಿ ಹುಟ್ಟಿಸುವ, ಒಂದು ಭಯ" ಎಂದೂ ವರ್ಣಿಸಲಾಗುತ್ತದೆ. ಈ ಪರಿಸ್ಥಿತಿಗಳಲ್ಲಿ, ರೋಗಿಯು ಹಿಂದೊಮ್ಮೆ ಯಾವ ಜಾಗದಲ್ಲಿ ಭೀತಿಯ ಹಿಡಿತಕ್ಕೆ ಸಿಲುಕಿರುತ್ತಾನೋ ಆ ಜಾಗದ ಬಗ್ಗೆ ಭೀತಿಯನ್ನು ಹೊಂದಿರುತ್ತನೆ. ಎಲ್ಲಿ ಮತ್ತೊಮ್ಮೆ ಆ ರೀತಿಯ ಭೀತಿಯ ಹಿಡಿತಕ್ಕೆ ಒಳಗಾಗಿಬಿಡುವೆನೋ ಎಂಬ ಭೀತಿಯಿಂದಲೇ ವ್ಯಕ್ತಿಯು ಆ ಜಾಗಕ್ಕೆ ಬರುವುದನ್ನೇ ತಪ್ಪಿಸುತ್ತಾನೆ.ಹೀಗೆ ಭೀತಿಗೊಳಗಾದ ವ್ಯಕ್ತಿಯು ಅಗೋರಾಫೋಬಿಯಾಗೆ ಒಳಗಾಗಿದ್ದಾನೆನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳು ಅಂತಹ (ಭೀತಿಯ ಹಿಡಿತಕ್ಕೆ ಸಿಲುಕಿದಂತಹ)ಜಾಗಗಳಿಗೆ ಹೋಗುವುದನ್ನು ತಪ್ಪಿಸಲು ಶತಪ್ರಯತ್ನಗಳನ್ನು ಮಾಡುತ್ತಾರೆ. ತಲ್ಲಣ ಈ ವಿಧದ ಅಗೋರಾಫೋಬಿಯಾವನ್ನೇ ವಾಸ್ತವವಾಗಿ ವೃತ್ತಿಪರ ವೈದ್ಯರು ಮೊದಲಿಗೆ ತಲ್ಲಣದ ವ್ಯತಿಕ್ರಮದ ತಪಾಸಣೆಯನ್ನು ಮಾಡಲು ತೊಡಗುವಾಗ ಕಾಣಲು ಯತ್ನಿಸುತ್ತಾರೆ. ಇತರ ರೋಗಲಕ್ಷಣಗಳಾದ ಭ್ರಾಮಕ ನಿರ್ಬಂಧಕ ವ್ಯತಿಕ್ರಮ ಅಥವಾ ಕ್ಷೋಭೋತ್ತರ ಒತ್ತಡ ವ್ಯತಿಕ್ರಮ(/೧) ಸಹ ಅಗೋರಾಫೋಬಿಯಾವನ್ನು ಉಂಟುಮಾಡಬಹುದು; ಮೂಲತಃ ವ್ಯಕ್ತಿಯು ಹೊರಹೋಗಲಾಗದಂತೆ ನಿರ್ಬಂಧಿಸುವ ಯಾವುದೇ ಅಕಾರಣವಾದ ಭೀತಿಯಿಂದ ಈ ಲಕ್ಷಣಗಳು ಸಂಭವಿಸಬಹುದು.[೫] ಕ್ರಮಿಸುವ ದೂರವನ್ನು ಆಧರಿಸಿ ಮೂರು ಹಂತಗಳಲ್ಲಿ ಅಗೋರಾಫೋಬಿಯಾದ ತೀವ್ರತೆಗಳನ್ನು ಗುರುತಿಸುವ ಕ್ರಮವಿದ್ದರೂ ಇದನ್ನು ಮಾನಸಿಕ ವ್ಯತಿಕ್ರಮದ ರೂಗಲಕ್ಷಣಗಳನ್ನು ಪತ್ತೆಹಚ್ಚುವ ಅಂಕಿಅಂಶಗಳನ್ನು ಹೊಂದಿದ ಕೈಪಿಡಿಯಲ್ಲಿ ಈ ಹಂತಗಳ ಉಲ್ಲೇಖವಿಲ್ಲ. ಅಗೋರಾಫೋಬಿಯಾದ ಮೊದಲನೆಯ ಹಂತದಲ್ಲಿ ತಾವು ವಾಸಿಸುವ ನಗರ ಅಥವಾ ಹಳ್ಳಿಯ ಪರಿಮಿತಿಗಳನ್ನು ದಾಟಿ ದೂರಕ್ಕೆ ಪ್ರಯಾಣ ಬೆಳೆಸಿದ ಪರಿಣಾಮವಾಗಿ ವಾಸ್ತವವಾಗಿ ತಲ್ಲಣದ ಆಕ್ರಮಣ ಅಥವಾ ಕಲ್ಪನಾಪ್ರೇರಿತ ಭಯ ಇರುತ್ತದೆ. ಅಗೋರಾಫೋಬಿಯಾದ ಎರಡನೆಯ ಹಂತದಲ್ಲಿ ತಾವು ವಾಸಿಸುವ ಬಡಾವಣೆ ಅಥವಾ ವಸತಿ ಜಿಲ್ಲೆಯ ಪರಿಮಿತಿಗಳನ್ನು ದಾಟಿ ದೂರಕ್ಕೆ ಪ್ರಯಾಣ ಬೆಳೆಸಿದ ಪರಿಣಾಮವಾಗಿ ವಾಸ್ತವಿಕ ತಲ್ಲಣದ ಆಕ್ರಮಣ ಅಥವಾ ಕಲ್ಪನಾಪ್ರೇರಿತ ಭಯ ಇರುತ್ತದೆ. ಅಗೋರಾಫೋಬಿಯಾದ ಮೂರನೆಯ ಹಂತದಲ್ಲಿ ತಾವು ವಾಸಿಸುವ ಮನೆಯ ಪರಿಮಿತಿಗಳನ್ನು ದಾಟಿ ಹೊರಕ್ಕೆ ಬರುವುದರ ಪರಿಣಾಮವಾಗಿ ವಾಸ್ತವಿಕ ತಲ್ಲಣದ ಆಕ್ರಮಣ ಅಥವಾ ಕಲ್ಪನಾಪ್ರೇರಿತ ಭಯ ಇರುತ್ತದೆ ಈ ಹಂತದ ಮಟ್ಟಕ್ಕೆ ಪೀಡಿತರಾದವರು ಪೋರ್ಟಿಕೋ, ಬಾಲ್ಕನಿ, ಮೇಲ್ಮಹಡಿ, ಅಂಗಳ ಅಥವಾ ಜಗಲಿಯವರೆಗೂ ಬರಬಲ್ಲರು; ಆದರೆ ಕೆಲವು ಮೂರನೆಯ ಹಂತದ ರೋಗಿಗಳು ಬಾಗಿಲಿನಿಂದ ಆಚೆಗೆ ಹೆಜ್ಜೆ ಇಡಲೂ ಭಯಪಡುವರು. ಎರಡನೆಯ ಮತ್ತು ಮೂರನೆಯ ಹಂತದ ಅಗೋರಾಫೋಬಿಯಾ ಪೀಡಿತರು ತಾತ್ಕಾಲಿಕ ಬೇರ್ಪಡುವ ಆತಂಕ ವ್ಯತಿಕ್ರಮಕ್ಕೆ ಒಳಗಾಗುವುದು ಅಪರೂಪವೇನಲ್ಲ; ಪೋಷಕರೋ ಅಥಾ ಜೊತೆಗಾರ/ತಿಯೋ ಮನೆಯಿಂದ ತಾತ್ಕಾಲಿಕವಾಗಿ ಹೊರಗೆ ಹೋದಾಗ, ಅಥವಾ ಆಗೋರಾಫೋಬಿಯಾ ಪೀಡಿತನು ಮನೆಯಲ್ಲಿ ಒಂಟಿ ಇರುವಾಗ ಈ ವಿಧದ ಪೀಡನೆಗೆ ಗುರಿಯಾಗುವುದು ಸಾಮಾನ್ಯ. ಈ ತಾತ್ಕಾಲಿಕ ಪರಿಸ್ಥಿತಿಗಳ ಪರಿಣಾಮವಾಗಿ ಆತಂಕ ಹೆಚ್ಚಾಗಬಹುದು ಅಥವಾ ತಲ್ಲಣದ ಆಕ್ರಮಣಕ್ಕೂ ಗುರಿಯಾಗಬಹುದು. ಅಗೋರಾಫೋಬಿಯಾ ಸಂಬಂಧಿತ ಮತ್ತೊಂದು ವ್ಯತಿಕ್ರಮವೆಂದರೆ ಥನಾಟೋಫೋಬಿಯಾ—ಸಾವಿನ ಭಯ. ಕಡೆಗೊಮ್ಮೆ ಸಾಯಲೇಬೇಕು ಎಂಬ ಚಿಂತೆ ಮನದಲ್ಲಿ ಮೂಡಿದಾಗ ಅಗೋರಾಫೋಬಿಯಾ ಪೀಡಿತರ ಆತಂಕದ ಮಟ್ಟ ಮತ್ತೂ ಏರುತ್ತದೆ; ಮಾನವನಿರ್ಮಿತ ಭಾವನಾತ್ಮಕ ಸುಖಗಳು ಹಾಗೂ ಸುರಕ್ಷಿತ ತಾಣಗಳಿಂದ ಮತ್ತು ಪ್ರೀತಿಪಾತ್ರರಿಂದ ಕೈಗೊಳ್ಳುವ ಅಂತಿಮ ಬೇರ್ಪಡೆಗೆ ಈ ಭಯವನ್ನು ಅವರು ಅರಿತೋ, ಅರಿಯದೆಯೋ, ತಳುಕುಹಾಕಿ ಅವಸ್ಥೆ ಪಡುತ್ತಾರೆ; ಸಾವಿನ ನಂತರ ಪುನರ್ಜನ್ಮವಿದೆಯೆಂಬ ಆಧ್ಯಾತ್ಮಿಕ ಮನೋಭಾವ ಹೊಂದಿರುವವರೂ ಈ ಪರಿಸ್ಥಿತಿಗೆ ಒಳಗಾಗುತ್ತಾರೆ.
ಲಿಂಗಬೇಧಗಳು
[ಬದಲಾಯಿಸಿ]ಅಗೋರಾಫೋಬಿಯಾ ಪುರುಷರಿಗಿಂತಲೂ ಎರಡರಷ್ಟು ಪ್ರಮಾಣದಲ್ಲಿ ಸ್ತ್ರೀಯರಲ್ಲಿ ಕಂಡುಬರುತ್ತದೆ.[೬] ಈ ಲಿಂಗಬೇಧಕ್ಕೆ ಕಾರಣಗಳು ಸಾಮಾಜಿಕ-ಸಾಂಸ್ಕೃತಿಕ ಯಾವುದನ್ನು ತಪ್ಪಿಸಿಕೊಳ್ಳಬೇಕೋ ಅದನ್ನು ಗಂಡಿಗಿಂತಲೂ ಹೆಚ್ಚಾಗಿ ಮಾತು, ಕೃತಿಗಳಿಂದ ಬಹಿರಂಗಗೊಳಿಸುವ ಹೆಣ್ಣಿನ ಗುಣಕ್ಕೆ ಪರವಾನಗಿ ನೀಡುವುದು ಮತ್ತು ಅದನ್ನು ಪ್ರೋತ್ಸಾಹಿಸುವುದು ನಮ್ಮ ಸಾಮಾಜಿಕ-ಸಾಂಸ್ಕೃತಿಕ ಅಂಶಗಳಲ್ಲಿ ಒಂದಾಗಿದ್ದು, ಈ ಅಂಶವು ಅಗೋರಾಫೋಬಿಯಾದ ಲಿಂಗತಾರತಮ್ಯಕ್ಕೆ ಕಾರಣವೆನ್ನಬಹುದು.(ಗಂಡು ತನ್ನ ಭೀತಿಯನ್ನು ಹೊರಗೆಡುವುವುದು ವಿರಳ). ಅಲ್ಲದೆ ಹೆಂಗಸರು ಸಹಾಯ ಕೇಳುವ ಸಾಧ್ಯತೆಗಳು ಹೆಚ್ಚಾದ್ದರಿಂದ ರೋಗಪರೀಕ್ಷೆಯ ಸಾಧ್ಯತೆಗಳೂ ಹೆಚ್ಚು, ಗಂಡರು ಆತಂಕವನ್ನು ಹೊರಗೆ ಹೇಳಿಕೊಳ್ಳುವ ಬದಲು ಕುಡಿತಕ್ಕೆ ಮಾರುಹೋಗುವರು ಹಾಗೂ ಕುಡುಕನೆನಿಸಿಕೊಳ್ಳುವರು, ಮತ್ತು ಸಾಂಪ್ರದಾಯಿಕ ಸ್ತ್ರೀಪಾತ್ರಗಳು ಹೆಣ್ಣು ಆತಂಕದಲ್ಲಿದ್ದಾಗ ಅವಲಂಬನ ಮತ್ತು ಸಹಾಯ ಯಾಚಿಸುವುದನ್ನು ಪ್ರೋತ್ಸಾಹಿಸುವುದು ಸಹ ಹೆಣ್ಣು ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ಒಳಗಾದಳೆಂದು ತೋರಿಸುವ ಮಾಹಿತಿಗೆ ಪೂರಕವಾಗಿದೆ ಎಂಬುದಕ್ಕೆ ನೀಡಿದ ಸಿದ್ಧಾಂತಗಳಾಗಿವೆ.[೭] ಅಗೋರಾಫೋಬಿಯಾ ಹೆಣ್ಣು-ಗಂಡುಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಇಷ್ಟೊಂದು ಪ್ರಮಾಣದಲ್ಲಿರುವ ವ್ಯತ್ಯಾಸಕ್ಕೆ[ಸೂಕ್ತ ಉಲ್ಲೇಖನ ಬೇಕು] ಕಾರಣವನ್ನು ನೀಡುವಲ್ಲಿ ಯಾವ ಸಂಶೋಧನೆಯೂ ಇದುವರೆಗೂ ಸಮರ್ಪಕ ವಿವರಣೆ ನೀಡಲಾಗಿಲ್ಲ.==ಕಾರಣಗಳು ಮತ್ತು ಒತ್ತುನೀಡುವ ಅಂಶಗಳು==ಅಗೋರಾಫೋಬಿಯಾ ಏಕೆ ಸಂಭವಿಸುತ್ತದೆ ಎಂಬುದಕ್ಕೆ ನಿಖರವಾದ ಕಾರಣಗಳು ಇನ್ನೂ ಬೆಳಕಿಗೆ ಬಂದಿಲ್ಲವಾದರೂ ಅಗೋರಾಫೋಬಿಯಾಕ್ಕೆ ಚಿಕಿತ್ಸೆ ನೀಡಿದ ಅಥವಾ ನೀಡಲು ಪ್ರಯತ್ನಿಸಿದ ಹಲವಾರು ವೈದ್ಯರು ಕೆಲವು ಸಂಭಾವ್ಯ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಇತರ ಆತಂಕ ವ್ಯತಿಕ್ರಮಗಳು, ಒತ್ತಡಭರಿತ ವಾತಾವರಣ ಹಾಗೂ ಚಟಗಳಿಗೆ ಈ ಪರಿಸ್ಥಿತಿಯನ್ನೂ ಕೊಂಡಿಹಾಕಲಾಗಿದೆ. ಉಪಶಮನಕಾರಕಗಳು ಮತ್ತು ಬೆನ್ಝೋಡಯಾಝಿಪೈನ್ ಗಳಂತಹ ನಿದ್ರೆಗುಳಿಗೆಗಳನ್ನು ದೀರ್ಘಕಾಲ ಸೇವಿಸುವುದರಿಂದ ಅಗೋರಾಫೋಬಿಯಾ ಉಂಟಾಗುತ್ತದೆಂದು ಹೇಳಲಾಗುತ್ತದೆ.[೮] ಬೆನ್ಝೋಡಯಾಝಿಪೈನ್ ಅವಲಂಬನೆಗೆ ಚಿಕಿತ್ಸೆ ನೀಡಿದಾಗ ಹಾಗೂ ಅದರಿಂದ ಕೆಲವು ಕಾಲ ದೂರ ಉಳಿದ ನಂತರ, ಅಗೋರಾಫೋಬಿಯಾದ ಲಕ್ಷಣಗಳು ನಿಧಾನವಾಗಿ ತಗ್ಗುತ್ತವೆ.[೯] ಅಗೋರಾಫೋಬಿಯಾ ಮತ್ತು ಸ್ಥಳಗಳ ದಿಕ್ಕುಗಳನ್ನು ಕಂಡುಹಿಡಿಯುವುದರಲ್ಲಿ ತೊಡಕನ್ನು ಕಾಣುವುದಕ್ಕೆ ಸಂಬಂಧವಿದೆ ಎಂದು ಸಂಶೋಧನೆಗಳು ಸಾಬೀತು ಪಡಿಸಿವೆ.[೧೦][೧೧] ಅಗೋರಾಫೋಬಿಯಾ ಇಲ್ಲದ ಜನರು ತಮ್ಮ ನಿವಸಿತ ಕ್ರಮ, ನೋಟದ ಕ್ರಮ ಮತ್ತು ಆಂತರಿಕವವಾಗಿ ದಿಕ್ಕು ಅರಿಯುವ ಗುಣದ ಕ್ರಮಗಳಿಂದ ಸಂಗ್ರಹಿತವಾದ ಮಾಹಿತಿಗಳನ್ನು ಒಟ್ಟುಗೂಡಿಸಿ ತಮ್ಮ ಸಮತೋಲತೆಯನ್ನು ಸಂರಕ್ಷಿಸಿಕೊಳ್ಳುತ್ತಾರೆ. ಅಗೋರಾಫೋಬಿಯಾ ಹೊಂದಿದ ಬಹಳಷ್ಟು ಜನರಲ್ಲಿ ನಿವಸಿತ ಕ್ರಮ(ತಾವೆಲ್ಲಿದ್ದೇವೆಂಬ ಅರಿವು) ದುರ್ಬಲವಾಗಿರುವುದರಿಂದ ಅವರು ನೋಟ ಮತ್ತು ಸ್ಪರ್ಷನೀಯ ಸನ್ನೆಗಳ ಮೇಲೆ/ಕುರುಹುಗಳ ಮೇಲೆ ಅವಲಂಬಿತರಾಗಿರುತ್ತಾರೆ. ದೊಡ್ಡದಾದ ಮುಕ್ತ ಸ್ಥಳಗಳಲ್ಲಿ ಸನ್ನೆಗಳು ದೊರೆಯದಾದಾಗ ಅಥವಾ ಗುಂಪುಗಳಲ್ಲಿ ಬಹಳವೇ ಸನ್ನೆಗಳಿದ್ದಾಗ - ದೃಶ್ಯವನ್ನವಲಂಬಿಸಿದ (ಸನ್ನೆಗಳನ್ನವಲಂಬಿಸಿದ) ಇವರು ದಿಕ್ಕುಗಾಣದಂತಾಗುತ್ತಾರೆ. ಅಂತೆಯೇ, ಇಳಿಜಾರಿನ ಅಥವಾ ಉಬ್ಬುತಗ್ಗಿನ ಪ್ರದೇಶಗಳು ಸಹ ಇವರನ್ನು ತಬ್ಬಿಬ್ಬುಗೊಳಿಸಬಹುದು.[೧೨] ಹತೋಟಿಗಳಿಗೆ ಹೋಲಿಸಿದಾಗ, ವರ್ಚುಯಲ್ ರಿಯಾಲಿಟಿ ಅಧ್ಯಯನಗಳಲ್ಲಿ, ಶಬ್ದ ಮತ್ತು ದೃಶ್ಯಗಳಿಂದ ದೊರೆತ ಮಾಹಿತಿಗಳನ್ನು ಸಂಸ್ಕರಣಗೊಳಿಸಿ ಅರಿಯುವಲ್ಲಿ ಅಗೋರಾಫೋಬಿಯಾ ಪೀಡಿತರು ಸಾಮಾನ್ಯವಾಗಿ ವಿಫಲರಾಗುವುದು ಸ್ಪಷ್ಟವಾಗಿದೆ.[೧೩]
ಬದಲೀ ಸಿದ್ಧಾಂತಗಳು
[ಬದಲಾಯಿಸಿ]ಬಾಂಧವ್ಯ ಸಿದ್ದಾಂತ
[ಬದಲಾಯಿಸಿ]ಕೆಲವು ಪಂಡಿತರು [೧೪][೧೫] ಅಗೋರಾಫೋಬಿಯಾ ಒಂದು ಬಾಂಧವ್ಯದ ಕೊರತೆ ಎಂದು ವರ್ಣಿಸಿದ್ದಾರೆ, ಎಂದರೆ., ಸುರಕ್ಷಿತ ತಾಣದಿಂದ ಬೇರೆಯ ಸ್ಥಳಗಳಿಗೆ ಹೋಗುವುದನ್ನು ತಡೆಯಲು ಆಗದಂತಹ ತಾತ್ಕಾಲಿಕ ದುರ್ಬಲತೆ.[೧೬] ಇತ್ತೀಚಿನ ಜಾಗತಿಕ ಸಂಶೋಧನೆಯೂ ಸಹ ಸ್ಥಾನಿಕ ಸಿದ್ಧಾಂತಗಳು ಮತ್ತು ಅಗೋರಾಫೋಬಿಯಾಗಳ ನಡುವೆ ಕೊಂಡಿಯಿರುವುದನ್ನು ಒಪ್ಪಿಕೊಂಡಿವೆ.[೧೭]
ಸ್ಥಾನಿಕ ಸಿದ್ಧಾಂತ
[ಬದಲಾಯಿಸಿ]ಸಾಮಾಜಿಕವಿಜ್ಞಾನದಲ್ಲಿ ಅಗೋರಾಫೋಬಿಯಾದ ಸಂಶೋಧನೆಯಲ್ಲಿ ಒಂದು ಗ್ರಹಿತ ಚಿಕಿತ್ಸಾ ಪಕ್ಷಪಾತ[೧೮] ವಿದೆ. ಸಾಮಾಜಿಕ ವಿಜ್ಞಾನದ ಶಾಖೆಗಳು, ವಿಶೇಷತಃ ಭೂಗೋಳ, ಸ್ಥಾನಿಕ ಅದ್ಭುತವೆಂದೇ ತಿಳಿಯಲ್ಪಟ್ಟ ಈ ಅಂಶದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುತ್ತಿವೆ. ಅಂತಹ ಒಂದು ಮಾರ್ಗವು ಅಗೋರಾಫೋಬಿಯಾದ ವೃದ್ಧಿಯಾಗುವಿಕೆಗೆ ಆಧುನಿಕತೆಯು ಕಾರಣವೆಂಬ ಕೊಂಡಿಯನ್ನೂ ತಳುಕುಹಾಕಿದೆ.[೧೯]
ರೋಗನಿರ್ಣಯ
[ಬದಲಾಯಿಸಿ]ಮಾನಸಿಕ ಆರೋಗ್ಯ ವಿಶೇಷಜ್ಞರ ಬಳಿ ಬರುವ ಹಲವಾರು ಜನರು ತಲ್ಲಣದ ಆಕ್ರಮಣದ ನಂತರವೇ ಅಗೋರೋಫೋಬಿಯಾಕ್ಕೆ ಒಳಗಾಗುವ ವಿಷಯವನ್ನು ಮಂಡಿಸಿದ್ದಾರೆ(ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್, ೧೯೯೮).ಪದೇ ಪದೇ ತಲ್ಲಣದ ಆಕ್ರಮಣಕ್ಕೆ ಒಳಗಾದುದರಿಂದ ಮತ್ತು ತದನಂತರದ ಆತಂಕ ಹಾಗೂ ಈ ಆಕ್ರಮಣಗಳ ಬಗ್ಗೆಯೇ ಚಿಂತಿಸುವುದರಿಂದ ಆ ಆಕ್ರಮಣಗಳಿಗೊಳಗಾದ ಪರಿಸ್ಥಿತಿಗಳನ್ನು ಮತ್ತು ಸ್ಥಳಗಳನ್ನು ತಪ್ಪಿಸಿ ಓಡಾಡಲು ಅಥವಾ ವಾಸಿಸಲು ಬಯಸುವ ಪ್ರತಿಕೂಲಾತ್ಮಕ/ನಕಾರಾತ್ಮಕ ನಡವಳಿಕೆಯೇ ಅಗೋರಾಫೋಬಿಯಾ ಎಂದು ತಿಳಿಯಬಹುದು.[೨೦] ತಲ್ಲಣ ವ್ಯತಿಕ್ರಮದ ಶುಶ್ರೂಷೆಗೆ ಒಳಗಾಗಬೇಕಾದರೆ ಇರಬೇಕಾದಂತಹ ಲಕ್ಷಣಗಳು ಇರದಂತಹ ಅಪರೂಪದ ಸಂದರ್ಭಗಳಲ್ಲಿ ಅಗೋರಾಫೋಬಿಯಾ ಪೀಡಿತರನ್ನು ಔಪಚಾರಿಕವಾದ ತಲ್ಲಣ ವ್ಯತಿಕ್ರಮದ ಇತಿಹಾಸರಹಿತ ಅಗೋರಾಫೋಬಿಯಾ ಚಿಕಿತ್ಸೆಯ ಕ್ರಮಗಳನ್ನು ಅನುಸರಿಸಲಾಗುವುದು(ಪ್ರಾಥಮಿಕ ಅಗೋರಾಫೋಬಿಯಾ).
ತಲ್ಲಣದ ಆಕ್ರಮಣಗಳೊಡನೆ ತಳುಕು
[ಬದಲಾಯಿಸಿ]ಅಗೋರಾಫೋಬಿಯಾ ರೋಗಿಗಳು ತಾವು ತಮ್ಮ ಹತೋಟಿಯಲ್ಲಿರುವುದಿಲ್ಲವೆಂದೆನಿಸುವ ಕಡೆಗೆ ಪ್ರಯಾಣ ಮಾಡುವಾಗ, ತಮಗೆ ಸಹಾಯ ದುರ್ಲಭವೆನಿಸಿದಾಗ, ಅಥವಾ ಅವರಿಗೆ ಮುಜುಗರವಾಗುವ ಪ್ರಸಂಗಗಳು ಎದುರಾಗಬಹುದು ಎನಿಸಿದಾಗ ಹಠಾತ್ ತಲ್ಲಣದ ಆಕ್ರಮಣಗಳಿಗೆ ಒಳಗಾಗುತ್ತಾರೆ. ತಲ್ಲಣದ ಆಕ್ರಮಣದ ಸಂದರ್ಭಗಳಲ್ಲಿ, ಎಪಿನೆಫ್ರೈನ್ ಎಂಬ ವಸ್ತುವು ಹೆಚ್ಚಿನ ಪ್ರಮಾಣದಲ್ಲಿ ಹೊಮ್ಮುವುದರಿಂದ ದೇಹದ ಸ್ವಾಭಾವಿಕ ಕ್ರಿಯೆಯಾದ ಹೋರಾಡು-ಅಥವಾ-ಓಡು ಗುಣವನ್ನು ಪ್ರಚೋದಿಸುತ್ತದೆ. ತಲ್ಲಣದ ಆಕ್ರಮಣವು ಸಂಭವಿಸುವುದು ಸಾಮಾನ್ಯವಾಗಿ ಹಠಾತ್ತಾಗಿಯೇ; ಆಕ್ರಮಣದ ಪರಾಕಾಷ್ಠಯು ೧೦ರಿಂದ ೧೫ ನಿಮಿಷಗಳಲ್ಲಿ ತಲುಪಲಾಗುತ್ತದೆ ಹಾಗೂ ಆಕ್ರಮಣದ ಅವಧಿಯು ೩೦ ನಿಮಿಷಗಳಿಗಿಂತಲೂ ಹೆಚ್ಚು ಇರುವುದು ಬಹಳ ಅಪರೂಪ.[೨೧] ತಲ್ಲಣದ ಆಕ್ರಮಣದ ಲಕ್ಷಣಗಳಲ್ಲಿ ಹೃದಯಕಂಪನ, ತೀವ್ರಗೊಂಡ ಹೃದಯಬಡಿತ, ಬೆವರುವಿಕೆ, ನಡುಕ, ವಮನ, ತಲೆತಿರುಗುವಿಕೆ, ಗಂಟಲಿನಲ್ಲಿ ಹಿಡಿದಂತಾಗುವುದು ಮತ್ತು ಉಸಿರಾಟದ ತೊಂದರೆಗಳು ಪ್ರಮುಖವಾದವು. ಹಲವಾರು ರೋಗಿಗಳು ಸಾವಿನ ಭಯ ಹಾಗೂ ಭಾವನೆಗಳ ಮತ್ತು/ಅಥವಾ ನಡವಳಿಕೆಗಳ ಮೇಲೆ ತಮ್ಮ ಹತೋಟಿ ತಪ್ಪುವುದನ್ನು ಸಹ ವರದಿ ಮಾಡಿದ್ದಾರೆ.[೨೧]
ಚಿಕಿತ್ಸೆಗಳು
[ಬದಲಾಯಿಸಿ]ಜ್ಞಾನವರ್ಧಕ ನಡವಳಿಕೆಗಳ ಚಿಕಿತ್ಸಾಕ್ರಮ
[ಬದಲಾಯಿಸಿ]ಎಕ್ಸ್ ಪೋಷರ್ ಟ್ರೀಟ್ಮೆಂಟ್ (ಒಡ್ಡುವಿಕೆಯ ಚಿಕಿತ್ಸಾಕ್ರಮ) ಅಗೋರಾಫೋಬಿಯಾ ಮತ್ತು ತಲ್ಲಣದ ಆಕ್ರಮಣದಿಂದ ನರಳುವ ಬಹಳಷ್ಟು ರೋಗಿಗಳಿಗೆ ದೀರ್ಘಕಾಲಿಕ ಉಪಶಮನವನ್ನು ನೀಡುತ್ತದೆ.ಉಳಿದಿರುವ ಹಾಗೂ ಚಿಕಿತ್ಸಾಕ್ರಮಕ್ಕಳವಡಿಸಿರುವ ಅಗೋರೋಫೋಬಿಯಾವನ್ನು ಇಲ್ಲವಾಗಿಸುವುದು ಎಕ್ಸ್ ಪೋಷರ್ ಚಿಕಿತ್ಸೆಯ ಗುರಿಯಾಗಿರಬೇಕೆ ವಿನಹ ಕೇವಲ ತಲ್ಲಣದ ಆಕ್ರಮಣಗಳನ್ನು ಹೋಗಲಾಡಿಸುವುದಲ್ಲ.[೨೨] ಅಂತೆಯೇ, ಕ್ರಮಬದ್ಧ ನಿಃಸೂಕ್ಷ್ಮಕರಣವನ್ನು ಕೂಡ ಉಪಯೋಗಿಸಬಹುದು.ಜ್ಞಾನವರ್ಧಕ (ಅರಿವು ಬೆಳೆಸುವ) ಮರುನಿರ್ಮಾಣ ಸಹ ಅಗೋರಾಫೋಬಿಯಾವನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿದೆ. ಈ ಚಿಕಿತ್ಸಾಕ್ರಮದಲ್ಲಿ ಭಾಗವಹಿಸಿದ ರೋಗಿಯನ್ನು ತರ್ಕಬದ್ಧವಾದ ಚರ್ಚೆಯಲ್ಲಿ ತೊಡಗಿಸಿಕೊಂಡು, ಅಪ್ರಬುದ್ಧವಾದ, ಅಸಂಗತವಾದ, ನಕಾರಾತ್ಮಕವಾದ ಚಿಂತನೆಗಳನ್ನು ತೊಡೆದು, ಅದರ ಬದಲಿಗೆ ಸಕಾರಾತ್ಮಕವಾದ, ಪ್ರಯೋಜಕರವಾದ ಮತ್ತು ನಿಜಾಂಶಗಳಿಂದ ಕೂಡಿದ ಚಿಂತನೆಗಳನ್ನು ಬೆಳೆಸಿಕೊಳ್ಳುವ ಮಾರ್ಗಗಳನ್ನು ಹೇಳಿಕೊಡಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]ಆರಾಮ ಹೊಂದುವ ವಿಧಾನಗಳು ಅಗೋರಾಫೋಬಿಯಾ ಪೀಡಿತರಿಗೆ ಸಾಮಾನ್ಯವಾಗಿ ಪ್ರಯೋಜನವಾಗುತ್ತವೆ; ಏಕೆಂದರೆ ಈ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ರೋಗಿಯು ಆತಂಕ ಮತ್ತು ಭೀತಿಯ ಲಕ್ಷಣಗಳನ್ನು ಹತೋಟಿಗೆ ತಂದುಕೊಳ್ಳಲು ಅನುಕೂಲವಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಮಾನಸಿಕ-ಔಷಧೀಯ ಚಿಕಿತ್ಸೆಗಳು
[ಬದಲಾಯಿಸಿ]ಆತಂಕ ವ್ಯತಿಕ್ರಮಗಳನ್ನು ಗುಣಪಡಿಸಲು ಅಥವಾ ಹತೋಟಿಗೆ ತರಲು ಬಳಸುವ ಕ್ಷೋಭಾ-ವಿರೋಧಿ ಔಷಧಿಗಳಲ್ಲಿ ಪ್ರಮುಖವಾಗಿ ಹಾಗೂ ಸಾಮಾನ್ಯವಾಗಿ ಬಳಕೆಯಲ್ಲಿರುವುದು SSRI (ಸೆಲೆಕ್ಟಿವ್ ಸೆರೋಟೋನಿನ್ ರಿಅಪ್ಟೇಕ್ ಇಂಹಿಬಿಟರ್) ವರ್ಗದಲ್ಲಿನವು ಮತ್ತು ಇವುಗಳಲ್ಲಿ ಸೆರ್ಟಾಲೈನ್, ಪೆರಾಕ್ಸಿಟೈನ್ ಮತ್ತು ಫ್ಲುಆಕ್ಸಿಟೇನ್ ಗಳು ಇರುತ್ತವೆ. ಬೆಂಝೋದಯಾಝಿಪೈನ್ ಶಮನಕಾರಕಗಳು, MAO ಇಂಇಬಿಟರ್ ಗಳು ಮತ್ತು ಟ್ರೈಸೈಕ್ಲಿಕ್ ಕ್ಷೋಭೆನಿರೋಧಕಗಳನ್ನು ಸಹ ಸಾಮಾನ್ಯವಾಗಿ ಅಗೋರಾಫೋಬಿಯಾದ ಚಿಕಿತ್ಸೆಗಾಗಿ ಬಳಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಪರ್ಯಾಯ ಚಿಕಿತ್ಸೆಗಳು
[ಬದಲಾಯಿಸಿ]ಐ ಮೂವ್ ಮೆಂಟ್ ಡಿಸೆಂಸಿಟೈಝೇಷನ್ ಎಂಡ್ ರಿಪ್ರೋಗ್ರ್ಯಾಮಿಂಗ್ (EMDR) ಎಂಬ ಕಣ್ಣಾಲಿಗಳ ಆಡಿಸುವಿಕೆಯ ಕುರಿತಾದ ಚಿಕಿತ್ಸೆಯು ಅಗೋರಾಫೋಬಿಯಾಕ್ಕೆ ಸೂಕ್ತವೆಂದು ಬಗೆದು ಸಂಶೋಧಿಸಿದಾಗ, ಅದು ವಿರಳವಾಗಿ ಫಲಕಾರಿಯಾಯಿತು.[೨೩] ಹಾಗೆ ನೋಡಿದರೆ, EMDRಅನ್ನು ಜ್ಞಾನವರ್ಧಕ-ನಡವಳಿಕೆಯ ಚಿಕಿತ್ಸಾ ರೀತಿಯೂ ಫಲಕಾರಿಯಾಗದಿದ್ದಾಗ ಅಥವಾ ಕ್ಷೋಭೆಯ ಕಾರಣದಿಂದ ಅಗೋರಾಫೋಬಿಯಾ ಸಂಭವಿಸಿದ್ದಾಗ ಮಾತ್ರ ಕೈಗೊಳ್ಳಲು ಸೂಚಿಸಲಾಗುತ್ತದೆ.[೨೪] ಆತಂಕದ ವ್ಯತಿಕ್ರಮಕ್ಕೆ ಒಳಗಾಗಿರುವ ಹಲವಾರು ಜನರು ಸ್ವ-ಸಹಾಯ ಅಥವಾ ಬೆಂಬಲ ಪಡೆಯನ್ನು ಸೇರಿ, ತನ್ಮೂಲಕ ಪ್ರಯೋಜನಗಳನ್ನು ಕಂಡಿದ್ದಾರೆ(ದೂರವಾಣಿ ಸಮಾವೇಶ ಕರೆಯ ಬೆಂಬಲ ಪಡೆಗಳು ಅಥವಾ ಆನ್ ಲೈನ್ ಬೆಂಬಲ ಪಡೆಗಳು ಸಂಪೂರ್ಣವಾಗಿ ಗೃಹಸೀಮಿತವಾಗಿರುವ ವ್ಯಕ್ತಿಗಳಿಗೆ ವಿಶೇಷವಾಗಿ ಸಹಾಯಕವಾಗಿವೆ). ಇತರರೊಡನೆ ತೊಂದರೆಗಳನ್ನು ಹಾಗೂ ಸಾಧನೆಗಳನ್ನು ಹಂಚಿಕೊಳ್ಳುವುದು ಹಾಗೂ ವಿವಿಧ ಸ್ವ-ಸಹಾಯ ಸಲಕರಣೆಗಳನ್ನು ಹಂಚಿಕೊಳ್ಳುವುದು ಈ ಪಡೆಗಳಲ್ಲಿ ಕಂಡುಬರುವ ಸಾಮಾನ್ಯ ಚಟುವಟಿಕೆಗಳು. ಪ್ರಮುಖವಾಗಿ ಮಾನಸಿಕ ಒತ್ತಡವನ್ನು ನಿಭಾಯಿಸುವ ವಿಧಾನಗಳು ಮತ್ತು ವಿವಿಧ ಧ್ಯಾನ ವಿಧಾನಗಳು ಹಾಗೂ ದೃಗ್ಗೋಚರ ವಿಧಾನಗಳು ಆತಂಕ ವ್ಯತಿಕ್ರಮದಿಂದ ಪೀಡಿತರಾದವರು ಶಾಂತಗೊಳ್ಳಲು ಅನುವಾಗುತ್ತವೆ ಹಾಗೂ ಔಷಧೀಯ ಅಂಶಗಳು ಹೆಚ್ಚು ಪರಿಣಾಮಕಾರಿಯಾಗಲು ಸಹಾಯಕವಾಗುತ್ತವೆ. ಆತಂಕದ ತೊಂದರೆಗಳಿಂದ ಹೊರಬರಲು ಇತರರ ಸೇವೆಯಲ್ಲಿ ತೊಡಗಿಕೊಂಡು ಮನವನ್ನು ಬೇರೆಡೆಗೆ ಬದಲಾಯಿಸಿಕೊಳ್ಳುವುದೂ ಒಂದು ವಿಧ. ಶ್ವಾಸೋಚ್ಛ್ವಾಸದ ವ್ಯಾಯಾಮಗಳು ಸಹ ಮನವನ್ನು ಶಾಂತಗೊಳಿಸುತ್ತವೆ ಎಂಬುದಕ್ಕೆ ಪ್ರಾಥಮಿಕ ಕುರುಹುಗಳು ದೊರೆತಿವೆ. ಕೆಫೀನ್, ಕೆಲವು ಕಾನೂನುಬಾಹಿರ ಮಾದಕವಸ್ತುಗಳು ಹಾಗೂ ಮುಕ್ತವಾಗಿ ಕಾನೂನುಬದ್ಧವಾಗಿ ದೊರೆಯುವ ಕೆಲವು ಔಷಧಿಗಳು ಸಹ ಈ ಲಕ್ಷಣಗಳು ಉಲ್ಪಣಿಸಲು ಕಾರಣವಾಗುವುದರಿಂದ ಅವುಗಳನ್ನು ವರ್ಜಿಸುವುದು ಅತ್ಯಗತ್ಯ.[೨೫]
ಹೆಸರಾಂತ ಅಗೋರೋಫೋಬಿಯಾ ಪೀಡಿತರು
[ಬದಲಾಯಿಸಿ]==ಇವನ್ನೂ ವೀಕ್ಷಿಸಿ==* ಮಾನಸಿಕ ಅಸ್ವಸ್ಥತೆ#ಅಗೋರಾಫೋಬಿಯಾ ಬಿಂಬಿಸುವ ಚಲನಚಿತ್ರಗಳ ಪಟ್ಟಿ* ಅಗೈರೋಫೋಬಿಯಾ, ರಸ್ತೆಗಳನ್ನು ದಾಟುವುದಕ್ಕೆ ಪಡುವ ಭೀತಿ* ಎನೋಕ್ಲೋಫೋಬಿಯಾ, ಗುಂಪನ್ನು ಕಂಡರೆ ಭೀತಿ* ಸಾಧಾರಣವಾದ ಆತಂಕ ವ್ಯತಿಕ್ರಮ* ಹಿಕಿಕೋಮೋರಿ* ಭ್ರಾಮಕ ನಿರ್ಬಂಧಕ ವ್ಯತಿಕ್ರಮ, ಇದರಲ್ಲಿ ವಿವಿಧ ನಿರ್ದಿಷ್ಟ ಭಯಗಳು ಸೇರಿದ್ದು ಅವುಗಳ ಕಾರಣದಿಂದ ವ್ಯಕ್ತಿಯು ಮನೆಯಲ್ಲೇ ಇರುವಂತಹ ಪರಿಸ್ಥಿತಿ ಉದ್ಭವವಾಗುತ್ತದೆ.* ಕ್ಷೋಭೋತ್ತರ ಒತ್ತಡ ವ್ಯತಿಕ್ರಮ* ಸಾಮಾಜಿಕ ಆತಂಕ* ಸಾಮಾಜಿಕ ಭೀತಿ* ಝೀನೋಫೋಬಿಯಾ, ಅಪರಿಚಿತರನ್ನು ಕಂಡರೆ ಭೀತಿ
ಉಲ್ಲೇಖಗಳು
[ಬದಲಾಯಿಸಿ]- ↑
Agoraphobia Classification and external resources ICD-10 F40
F೪೦.೦೦ Without panic disorder, F೪೦.೦೧ With panic disorderMeSH D೦೦೦೩೭೯ - ↑ [permanent dead link][permanent dead link]
- ↑ ಬಿಆರ್ ಜೆ ಸೈಕಿಯಾಟ್ರಿ. ೨೦೦೬ ಮೇ;೧೮೮:೪೩೨-೮.
- ↑ Phobia Fear Release. "Percentage Of Americans With Phobias". Archived from the original on 2010-06-28. Retrieved 2010-4-7.
{{cite web}}
: Check date values in:|accessdate=
(help) - ↑ ಸೈಕ್ ಸೆಂಟ್ರಲ್: ಅಗೋರಾಫೋಬಿಯಾ ಸಿಂಪ್ಟಮ್ಸ್
- ↑ ಮ್ಯಾಗೀ, ಡಬ್ಲ್ಯೂ. ಜೆ., ಈಟನ್, ಡಬ್ಲ್ಯೂ. ಡಬ್ಲ್ಯೂ. , ವಿಟ್ಚೆನ್, ಹೆಚ್. ಯು., ಮೆಕ್ ಗೊನ್ಯಾಗಲ್, ಕೆ. ಎ., & ಕೆಸ್ಲರ್, ಆರ್. ಸಿ. (೧೯೯೬). ಅಗೋರಾಫೋಬಿಯಾ, ಸಿಂಪಲ್ ಫೋಬಿಯಾ, ಎಂಡ್ ಸೋಷಿಯಲ್ ಫೋಬಿಯಾ ಇನ್ ದ ನ್ಯಾಷನಲ್ ಕೋಮಾರ್ಬಿಡಿಟಿ ಸರ್ವೇ , ಆರ್ಕೈವ್ಸ್ ಆಫ್ ಜನರಲ್ ಸೈಕಿಯಾಟ್ರಿ, ೫೩, ೧೫೯–೧೬೮.
- ↑ Agoraphobia Research Center. "Is agoraphobia more common in men or women?". Archived from the original on 2007-12-02. Retrieved 2007-11-15.
- ↑ Hammersley D, Beeley L (1996). "The effects of medication on counselling". In Palmer S, Dainow S, Milner P (eds.) (ed.). Counselling: The BACP Counselling Reader. Vol. 1. Sage. pp. 211–4. ISBN 978-0803974777.
{{cite book}}
:|editor=
has generic name (help)CS1 maint: multiple names: editors list (link) - ↑ Professor C Heather Ashton (1987). "Benzodiazepine Withdrawal: Outcome in 50 Patients". British Journal of Addiction. 82: 655–671.
- ↑ Yardley, L; Britton, J; Lear, S; Bird, J; Luxon, LM (1995 May). "Relationship between balance system function and agoraphobic avoidance". Behav Res Ther. 33 (4): 435–9. doi:10.1016/0005-7967(94)00060-W. PMID 7755529.
{{cite journal}}
: Check date values in:|date=
(help) - ↑ Jacob, RG; Furman, JM; Durrant, JD; Turner, SM (1996). "Panic, agoraphobia, and vestibular dysfunction". Am J Psychiatry. 153 (4): 503–512. doi:10.1176/ajp.153.4.503. PMID 8599398.
- ↑ Jacob, RG; Furman, JM; Durrant, JD; Turner, SM (1997 May-June). "Surface dependence: a balance control strategy in panic disorder with agoraphobia". Psychosom Med. 59 (3): 323–30. doi:10.1097/00006842-199705000-00016. PMID 9178344. S2CID 9789982.
{{cite journal}}
: Check date values in:|date=
(help) - ↑ Viauddelmon, I; Warusfel, O; Seguelas, A; Rio, E; Jouvent, R (2006 October). "High sensitivity to multisensory conflicts in agoraphobia exhibited by virtual reality" (PDF). Eur Psychiatry. 21 (7): 501–8. doi:10.1016/j.eurpsy.2004.10.004. PMID 17055951. S2CID 6932961.
{{cite journal}}
: Check date values in:|date=
(help) - ↑ ಜಿ. ಲಿಯೋಟ್ಟಿ, (೧೯೯೬). ಇನ್ಸೆಕ್ಯೂರ್ ಅಟ್ಯಾಚ್ಮೆಂಟ್ ಎಂಡ್ ಅಗೋರಾಫೋಬಿಯಾ , : ಸಿ. ಮರ್ರೆ-ಪಾರ್ಕ್ಸ್, ಜೆ.ಸ್ಟೀವನ್ಸನ್-ಹೈಂಡ್, & ಪಿ. ಮ್ಯಾರಿಸ್ (ಸಂಪಾದಕರು.)ನಲ್ಲಿ. ಅಟ್ಯಾಚ್ಮೆಂಟ್ ಅಕ್ರಾಸ್ ದ ಲೈಫ್ ಸೈಕಲ್.
- ↑ ಜೆ. ಬೋಲ್ಬೈ, (೧೯೯೮). ಅಟ್ಯಾಚ್ಮೆಂಟ್ ಎಂಡ್ ಲಾಸ್ (ಸಂಪುಟ. ೨: ಸೆಪೆರೇಷನ್).
- ↑ ಕೆ. ಜೇಕಬ್ಸನ್, (೨೦೦೪). "ಅಗೋರಾಫೋಬಿಯಾ ಎಂಡ್ ಹೈಪೋಕಾಂಡ್ರಿಯಾ ಆಸ್ ಡಿಸಾರ್ಡರ್ಸ್ ಆಫ್ ಡ್ವೆಲಿಂಗ್." ಇಂಟರ್ನ್ಯಾಷನಲ್ ಸ್ಟಡೀಸ್ ಇನ್ ಫಿಲಾಸಫಿ ೩೬, ೩೧-೪೪.
- ↑ ಜೆ. ಹೋಮ್ಸ್, (೨೦೦೮). "ಸ್ಪೇಸ್ ಎಂಡ್ ದ ಸೆಕ್ಯೂರ್ ಬೇಸ್ ಇನ್ ಅಗೋರಾಫೋಬಿಯಾ: ಎ ಕ್ವಾಲಿಟೇಟಿವ್ ಸರ್ವೇ", ಏರಿಯಾ, ೪೦, ೩, ೩೫೭ - ೩೮೨.
- ↑ ಜೆ. ಡೇವಿಡ್ಸನ್, (೨೦೦೩). ಫೋಬಿಕ್ ಜಿಯಾಗ್ರಫೀಸ್
- ↑ ಜೆ. ಹೋಮ್ಸ್, (೨೦೦೬). "ಬ್ಯುಲ್ಡಿಂಗ್ ಬ್ರಿಡ್ಜಸ್ ಎಂಡ್ ಬ್ರೇಕಿಂಗ್ ಬೌಂಡರೀಸ್: ಮಾಡ್ರನಿಟಿ ಎಂಡ್ ಅಗೋರಾಫೋಬಿಯಾ", ಆಪ್ಟಿಕಾನ್೧೮೨೬, ೧, ೧, http://www.ucl.ac.uk/ಆಪ್ಟಿಕಾನ್೧೮೨೬/ಕಡತಸಂಗ್ರಹಾಲಯ/ಸಂಚಿಕೆ೧[permanent dead link]
- ↑ Barlow, D. H. (1988). Anxiety and its disorders: The nature and treatment of anxiety and panic. Guilford Press.
- ↑ ೨೧.೦ ೨೧.೧ David Satcher; et al. (1999). "Chapter 4.2". Mental Health: A Report of the Surgeon General.
{{cite book}}
: Explicit use of et al. in:|author=
(help) - ↑ Fava, G.A.; Rafanelli, C.; Grandi, S.; Cinto, S.; Ruini, C.; Mangelli, L; Belluardo, P (2001). "Long-term outcome of panic disorder with agoraphobia treated by exposure". Psychological Medicine. 31 (5). Cambridge University Press: 891–898. doi:10.1017/S0033291701003592. PMID 11459386. S2CID 5652068.
{{cite journal}}
: More than one of|author=
and|last1=
specified (help) - ↑ Goldstein, Alan J.; De Beurs, Edwin; Chambless, Dianne L.; Wilson, Kimberly A. (2000). "EMDR for Panic Disorder With Agoraphobia : Comparison With Waiting List and Credible Attention-Placebo Control Conditions". Journal of Consulting & Clinical Psychology. 68 (6): 947–957. doi:10.1037/0022-006X.68.6.947.
- ↑ Agoraphobia Resource Center. "Agoraphobia treatments - Eye movement desensitization and reprogramming". Archived from the original on 2008-04-05. Retrieved 2008-04-18.
- ↑ National Institute of Mental Health. "How to get help for anxiety disorders". Retrieved 2008-04-18.
- ↑ ಸ್ಟ್ಯಾನಿಸ್ಲಾ ಫಿಟಾ, ಸಂಪಾದಕ., ವ್ಸ್ಪೋಮ್ನೀಯೆನಿಯಾ ಒ ಬೋಲೆಸ್ಲಾವೀ ಪ್ರುಸೀ (ರೆಮಿನಿಸೀನ್ಸಸ್ ಅಬೌಟ್ ಬೋಲ್ಸ್ಲಾ ಪ್ರುಸ್), ವಾರ್ಸಾ,ಪ್ಯಾಂಸ್ಟ್ವೋವಿ ಇಂಸ್ಟಿಟಟ್ ವೈಡಾನಿಕ್ಸ್ಝಿ(ರಾಜ್ಯ ಪ್ರಕಾಶನ ಸಂಸ್ಥೆ), ೧೯೬೨, ಪುಟ. ೧೧೩.
- ↑ "ಸೈಕಲಾಜಿಕಲ್ ಆಟೋಪ್ಸಿ ಕ್ಯಾನ್ ಹೆಲ್ಪ್ ಅಂಡರ್ಸ್ಟ್ಯಾಂಡ್ ಕಾಂಟ್ರೊವರ್ಸಿಯಲ್ ಡೆತ್ಸ್ -- ದ ಕ್ರೈಂ ಲೈಬ್ರರಿ truTV.comನಲ್ಲಿ". Archived from the original on 2015-02-14. Retrieved 2010-09-06.
- ↑ "Editing H. L. Gold (section) - Wikipedia, the free encyclopedia". En.wikipedia.org. 2009-02-05. Retrieved 2009-08-19.
- ↑ "ರಿಕಂಸ್ಟ್ರಕ್ಟಿಂಗ್ ವುಡಿ"
- ↑ ಪ್ರೊಫೈಲ್ ಆಫ್ ಬ್ರಿಯಾನ್ ವಿಲ್ಸನ್. ದಿ ಇಂಡಿಪೆಂಡೆಂಟ್. ಸೆಪ್ಟೆಂಬರ್ ೯ ೨೦೦೭ರಂದು ಪರಿಷ್ಕರಿಸಲಾಗಿದೆ.
- ↑ Moskin, Julia (2007-02-28). "From Phobia to Fame: A Southern Cook's Memoir". The New York Times. Retrieved 2010-03-27.
- ↑ "ಒಲಿವಿಯಾ ಹಸಿ - ಪೀಪಲ್ ಮ್ಯಾಗಝೀನ್ – ಮಾರ್ಚ್ 16, 1992". Archived from the original on 2012-03-18. Retrieved 2010-09-06.
- ↑ ಒಲಿವಿಯಾ ಹಸಿ ಜೀವನಚರಿತ್ರೆ - ಅಂತರ್ಜಾಲತಾಣ ಚಲನಚಿತ್ರ ಮಾಹಿತಿಸಂಚಯ
- ↑ "Kim Basinger". Nndb.com. Retrieved 2009-08-19.
- ↑ ಬಯಾಗ್ರಫಿ ಫಾರ್ ಡ್ಯಾರಿಲ್ ಹನ್ನಾ. ಅಂತರ್ಜಾಲತಾಣ ಚಲನಚಿತ್ರ ಮಾಹಿತಿಸಂಚಯ. ನವೆಂಬರ್ ೧೦ರ ೨೦೦೬ರಂದು ಪುನಃಪಡೆಯಲಾಗಿದೆ.
- ↑ ವಾಟೆವರ್ ಹ್ಯಾಪನ್ಡ್ ಟು ದ ಜೆಂಡರ್ ಬೆಂಡರ್ಸ್? , ಚಾನೆಲ್ ೪ ಸಾಕ್ಷ್ಯಚಿತ್ರ, ಸಂಯುಕ್ತ ಸಂಸ್ಥಾನ.
This article incorporates public domain material from websites or documents of the National Institute of Mental Health.
ಸೂಚಿತ ಕೊಂಡಿಗಳು
[ಬದಲಾಯಿಸಿ]- Support Group Providers for ಅಗೋರಾಫೋಬಿಯಾ ಓಪನ್ ಡೈರೆಕ್ಟರಿ ಪ್ರಾಜೆಕ್ಟ್ ಮೆನಗೇ ಸೀಮಿತವಾಗಿರುವ ಅಗೋರಾಫೋಬಿಯಾದ ರೋಗಿಗಳಿಗೆ ದೂರವಾಣಿಯ ಮೂಲಕ ಬೆಂಬಲ ನೀಡುವ ಪಡೆಗಳನ್ನು ನೀಡುವವರನ್ನು ಒಳಗೊಂಡಿದೆ
- Pages using the JsonConfig extension
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- Articles with dead external links from ಜುಲೈ 2023
- CS1 errors: dates
- CS1 errors: generic name
- CS1 maint: multiple names: editors list
- CS1 errors: explicit use of et al.
- CS1 errors: redundant parameter
- Articles with unsourced statements from November 2009
- Articles with hatnote templates targeting a nonexistent page
- Articles with unsourced statements from January 2008
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Wikipedia articles incorporating text from public domain works of the United States Government
- Articles that show a Medicine navs template
- Articles with Open Directory Project links
- ಫೋಬಿಯಾ(ಭೀತಿ)ಗಳು
- ನರಸಂಬಂಧಿತ, ಒತ್ತಡ-ಸಂಬಂಧಿತ ಮತ್ತು ಸೋಮಾಟೋಫರ್ಮ್ ವ್ಯತಿಕ್ರಮಗಳು