ಏಂಜೆಲಾ ಮರ್ಕೆಲ್
ಏಂಜೆಲಾ ಮರ್ಕೆಲ್
ಜನನ
[ಬದಲಾಯಿಸಿ]ಏಂಜೆಲಾ ಮರ್ಕೆಲ್, ಜನನ ೧೭ ಜುಲೈ ೧೯೫೪.
ವೃತ್ತಿ
[ಬದಲಾಯಿಸಿ]ಇವರು ಜರ್ಮನ್ ರಾಜಕಾರಣಿ ಹಾಗೂ ಮಾಜಿ ಸಂಶೋಧನಾ ವಿಜ್ಞಾನಿ.ಮರ್ಕೆಲ್ ೨೦೦೫ರಿಂದ ಜರ್ಮನಿಯ ಚಾನ್ಸಿಲರ್, ಮತ್ತು ೩೦೦೦ ರಿಂದ ಕ್ರಿಶ್ಛಿಯನ್ ಡೆಮೊಕ್ರಟಿಕ್ ಯೂನಿಯನ್ ನಾಯಕಿಯಾಗಿದ್ದರು. ಮರ್ಕೆಲ್ ೧೯೯೪ರಲ್ಲಿ ಪರಿಸರ ಸಚಿವರಾಗಿದ್ದರು. ೨೦೦೫ರ ಚುನಾವಣೆಯಲ್ಲಿ ಮರ್ಕೆಲ್ ಗೆರ್ಹಾರ್ಡ್ ಶ್ರೋಲ್ದರ್ ರವರನ್ನು ಸೋಲಿಸಿ ಕೇವಲ ಮೂರು ಸ್ಥಾನಗಳಲ್ಲಿ ಗೆದ್ದಿದರು. ಅವರು ಅಕ್ಟೋಬರ್ ೨೦೧೩ರಲ್ಲಿ ತನ್ನ ಸೆಲ್ ಪೋನ್ ಟ್ಯಾಪಿಂಗ್ ವಿಚಾರದಲ್ಲಿ ಅಮೇರಿಕಾದ ನ್ಯಾಷನಲ್ ಸೆಕ್ಯುರಿಟಿ ಏಜನ್ಸಿ ಆರೋಪದಿಂದ ಸುದ್ದಿ ಮಾಡಿದ್ದರು. ೨೦೦೭ರಲ್ಲಿ ಮರ್ಕೆಲ್ ಯೂರೋಪಿಯನ್ ಅಧ್ಯಕ್ಷ ಮತ್ತು ಎರಡನೇ ಮಹಿಳಾ ಅಧ್ಯಕ್ಷರಾಗಿದ್ದರು.
ರಾಜಕೀಯ ವೃತ್ತಿ
[ಬದಲಾಯಿಸಿ]ಇವರು ಲಿಸ್ಬನ್ಸ್ ಒಪ್ಪಂದದಲ್ಲಿ ಮತ್ತು ಬರ್ಲಿನ್ ಘೋಷಣೆಯ ಸಮಾಲೋಚನಾ ಕೇಂದ್ರದಲ್ಲಿ ಮುಖ್ಯಪಾತ್ರ ವಹಿಸಿದ್ದರು. ಏಪ್ರಿಲ್ ೨೦೦೭ರಲ್ಲಿ ಮರ್ಕೆಲ್ ೩೦ ಅಟ್ಲಾಂಟಿಕ್ ಆರ್ಥಿಕ ಕೌನ್ಸಿಲ್ ಒಪ್ಪಂದಕ್ಕೆ ಸಹಿ ಆಕಿದ್ದರು ಆಗು ಯೂರೋಪಿಯನ್ ಮತ್ತು ಅಂತರಾಶ್ಟ್ರಿಯ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ಎಂದು ಹೇಳಲಾಗಿದೆ.ಮರ್ಕೆಲ್ ಯುರೋಪಿಯನ್ ಒಕ್ಕೂಟದ ಪ್ರಸ್ತುತಃ ನಾಯಕಿ ಎಂದು ವಿವರಿಸಲಾಗಿದೆ. ಮರ್ಕೆಲ್ ಸರ್ಕಾರದ ಸುದೀರ್ಘ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದರು. ಈಗ ಇವರು ಪ್ರಸ್ತುತಃ ಹಿರಿಯ ಜಿ೭ ನಾಯಕಿ. ಆಗು ವಿಶ್ವದಾಖಲೆಯಲ್ಲಿ ಒಂಬತ್ತನೇ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಹೆಸರಿಸಲಾಯಿತು.ಮರ್ಕೆಲ್ ಜರ್ಮನಿಗೆ ಹೋಗಲು ಮುಖ್ಯಕಾರಣ ಅವರ ತಂದೆ ಕ್ಯಾಥೊಲಿಕ್ ಆಗಿದ್ದರು. ಆದರೆ ಕುಟುಂಬ ಅಂತಿಮವಾಗಿ, ಲೂಥರ್ ತತ್ವಕ್ಕೆ ಪರಿವರ್ತಿಸಿದ್ದರು. ಮರ್ಕೆಲ್ ಪ್ರೀ ಜರ್ಮನ್ ನ ಯುವ ಆಡಳಿತರಾಗಿದ್ದರು. ಶಾಲೆಯಲ್ಲಿ ಅವರು ಸರಾಗವಾಗಿ ರಷ್ಯಾನ್ ಮತ್ತು ಅವರ ನಿಪುಣತೆಯ ಗಣಿತಕ್ಕೆ ಅವರಿಗೆ ಬಹುಮಾನಗಳನ್ನು ನೀಡಲಾಯಿತು.೧೯೭೩ರಿಂದ ಭೌತಶಾಸ್ತ್ರ ಅಧ್ಯಯನದಲ್ಲಿ ಉನ್ನತಿಯನ್ನು ಪಡೆದರು. ಮರ್ಕೆಲ್ ಅವರು ೧೯೭೮-೧೯೯೦ ಅಕಾಡೆಮಿ ಆಫ಼್ ಸೈನ್ಸ್ ಬರ್ಲಿನ್ ರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರಿಗೆ ಕ್ವಾಂಟಂ ರಾಸಾಯನಿಕ ತನ್ನ ಸಿದ್ದಾಂತಕ್ಕೆ ಡಾಕ್ಟರೇಟ್ ನೀಡಲಾಯಿತು. ಆವರು ಒಂದು ಸಂಶೋಧಕರಾಗಿ ಕೆಲಸ ಮಾಡುತ್ತ ಹಲವಾರು ಲೇಖನಗಳನ್ನು ಪ್ರಕಟಿಸಿದ್ದರು.೧೯೮೯ರಲ್ಲಿ ಮರ್ಕೆಲ್ ಬೆಳೆಯುತ್ತಿರುವ ಪ್ರಜಾಪ್ರಭುತ್ವ ಚಳುವಳಿಯಲ್ಲಿ ಬರ್ಲಿನ್ ಗೋಡೆಯ ಪತನದ ನಂತರ ಹೊಸ ಪಕ್ಷ ಡೆಮೊಕ್ರಟಿಕ್ ಅವೇಕನಿಂಗ್ ಸೇರುವುದರಲ್ಲಿ ತೊಡಗಿಸಿಕೊಂಡರು. ಪೂರ್ವ ಜರ್ಮನ್ ರಾಜ್ಯದ ಮೊದಲ ಬಹುಪಕ್ಷ ಚುನಾವಣೆಯ ನಂತರ, ಆವರ ಲೋಥರ್ ಅಡಿಯಲ್ಲಿ ಹೊಸ ಪೂರ್ವ ಏಕೀಕರಣ ಸರ್ಕರದ ಉಸ್ತುವಾರಿಯಾಗಿದ್ದರು. ಏಪ್ರಿಲ್ ೧೯೯೦ರಲ್ಲಿ ಡೆಮಾಕ್ರಟಿಕ್ ಅವೇಕನಿಂಗ್ ಪೂರ್ವ ಜರ್ಮನ್ ವಿಲೀನಗೋಂಡಿತು. ಮರ್ಕೆಲ್ ೧೯೯೦ ರಿಂದ ಫ಼ೆಡರಲ್ ಚುನಾವಣೆಯ ನಂತರ ಅವರು ತಕ್ಷಣವೇ ಚಾನ್ಸಲರ್ ಮತ್ತು ಯೂತ್ ಸೇವೆಗೆ ನೇಮಿಸಲಾಯಿತು. ೧೦ ಏಪ್ರಿಲ್ ೨೦೦೦ ರಂದು ಜರ್ಮನ್ ಪಕ್ಷದ ಮೊದಲ ಮಹಿಳಾ ನಾಯಕಿಯಾದರು. ಸೆಪ್ಟೆಂಬರ್ ೨೦೧೩ರ ಚುನಾವಣೆಯಲ್ಲಿ ಸಿಡಿಯು ಪಕ್ಷ ವಿಜೇತರಾದವರು. ವಲಸೆಗಾರರು ಜರ್ಮನಿಯ ಮೌಲ್ಯ ಮತ್ತು ಸಂಸ್ಕ್ರಿತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಈ ವಲಸೆ, ಜರ್ಮನಿ ಮೇಲೆ ಪರಿಣಾಮಬೀರಿತು. ೨೫ ಸೆಪ್ಟೆಂಬರ್ ೨೦೦೭ರಲ್ಲಿ ಮರ್ಕೆಲ್ ದಲೈಲಾಮರವರನ್ನು ಬೇಟಿಯಾಗಿ ಖಾಸಗಿ ಮತ್ತು ಅತಾಪಚಾರಿಕ ಮಾತುಕತೆ ನಡಿಸಿದ್ದರು. ನಂತರ ಚೈನಾ ಮಾತುಕತೆ ಸೇರಿದಂತೆ ಜರ್ಮನ್ ಅಧಿಕಾರಿಗಳು ಪ್ರತ್ಯೇಕ ಮಾತುಕತೆ ರದ್ದುಗೊಳಿಸಿದ್ದರು.[೧]
ವಿದೇಶಿ ವ್ಯವಹಾರಗಳು
[ಬದಲಾಯಿಸಿ]ಮರ್ಕೆಲ್ ಮತ್ತು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ೨೦೦೬ರಲ್ಲಿ ಬೇಟಿಯಾಗಿ ವಿಜ್ನನ, ತಂತ್ರಗಳ ರಕ್ಷಣಾ ಜಂಟಿ ಘೋಷಣೆ ಮಾಡಿದರು.೨೦೦೭ರಲ್ಲಿ ಭಾರತಕ್ಕೆ ಮರ್ಕೆಲ್ ಭೇಟಿ ನೀಡಿ ಜರ್ಮನಿ ಸಂಬಂಧಗಳು ತಯಾರಿಸಿ ಭವಿಷ್ಯದಲ್ಲಿ ತಮ್ಮ ಅಭಿವೃಧಿಗೆ ಮಹತ್ವಾಂಕಾಂಕ್ಷೆಯ ಉದ್ದೇಶಗಳನ್ನು ಗಣನೀಯ ಪ್ರಗತಿ ಗಮನಿಸಿದರು. ಪಾಲುದಾರಿಕೆಯ ಆಧಾರದ ಮೇಲೆ ಭಾರತದಲ್ಲಿ ಸಂಬಂಧ ಮತ್ತಷ್ಟು ಆಗಿತ್ತು. ೨೦೧೧ರಲ್ಲಿ ಭಾರತಕ್ಕೆ ಮರ್ಕೆಲ್ ಭೇಟಿ ಬಲಪಡಿಸಿ ಎರಡು ದೇಶಗಳ ಮೊದಲ ಆಂತರಿಕ ಸರ್ಕರದ ಸಮಾಲೋಚನೆಗಳು ನಡೆಸಿದರು. ಭಾರತ ಜಂಟಿ ಸಂಪುಟ ಸಭೆಯಲ್ಲಿ ಮೊಟ್ಟ ಮೊದಲ ಏಷ್ಯನ್ ರಾಷ್ಟ್ರವಾಯಿತು. ಜ್ಭಾರತ ಸರ್ಕಾರವು ೨೦೦೯ ಮರ್ಕೆಲ್ ಫ಼ಾರ್ ಅಂತರಾಷ್ಟ್ರೀಯ ಜವಹರಲಾಲ್ ನೆಹರು ಪ್ರಶಸ್ತಿ ಮಂಡಿಸಿದರು. ಭಾರತ ಸರ್ಕರವು ಹೊರಡಿಸಿದ ಹೇಳಿಕೆ "ತನ್ನ ವೈಯಕ್ತಿಕ ಭಕ್ತಿ ಮತ್ತು ಉತ್ತಮ ಆಡಳಿತ ಮತ್ತು ತಿಳುವಳಿಕೆ ಮತ್ತು ವಿಶ್ವದ ಉತ್ತಮವಾದ ೨೧ನೇ ಶತಮಾನದ ಉದಯೋನ್ಮುಖ ಸವಾಲುಗಳನ್ನು ನಿರ್ವಹಿಸಲು ಸ್ಥಾನದಲ್ಲಿದೆ ಸಮರ್ಥನೀಯ ಮತ್ತು ನ್ಯಾಯಸಮ್ಮತ ಅಭಿವೃದ್ಧಿಗೆ ಅಗಾಧ ಪ್ರಯತ್ನಗಳು ಗುರುತಿಸುತ್ತದೆ ಎಂದು ಹೇಳಿದ್ದಾರೆ. ೨೦೧೪ ಮರ್ಕೆಲ್ ಚೀನಾ ಏಳು ವ್ಯಾಪಾರ ನಿಯೋಗಗಳು ಕಾರಣವಾಯಿತು ಅದೇ ವರ್ಷ, ೨೦೦೫ರಲ್ಲಿ ಅಧಿಕಾರ ವಹಿಸಿಕೊಂಡ ಮಾರ್ಚ್ನಲ್ಲಿ, ಚೀನಾ ಅಧ್ಯಕ್ಷ ಜರ್ಮನಿಗೆ ಭೇಟಿ ನೀಡಿ ಚೀನಾ ಪ್ರಾಮುಖ್ಯತೆಯನ್ನು ಜರ್ಮನ್ ವಿಶ್ವಾಸಾರ್ಹ ಗುರುತಿಸಿದ್ದರು.೨೦೧೩ರ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅವರು ಯುರೋಪ್ ಇತೀಚಿನ ದಿನಗಳಲ್ಲಿ ಜಾಗತಿಕ ಜನಸಂಖ್ಯೆಯು ಕೇವಲ ೭% ಮತ್ತು ಜಾಗತಿಕ ಜಿಡಿಪಿ ಕೇವಲ ೨೫% ಆದರೆ ಜಾಗತಿಕ ಸಮಾಜಿಕ ವೆಚ್ಚ ಸುಮಾರು ೫೦% ಎಂದು ಹೇಳಿದ್ದರು. ಈ ಹೋಲಿಕೆಗಳು ಪ್ರಮುಖ ಭಾಷಣದಲ್ಲಿ ಕೇಂದ್ರ ಅಂಶವೆಂದು ಹೇಳಲಾಗಿತ್ತು. ಅಂತರರಾಶ್ಟ್ರಿಯ ಹಣಕಾಸು ಪತ್ರಿಕಾ ವ್ಯಾಪಕವಾಗಿ ತನ್ನ ಪ್ರಭಂದದಮೇಲೆ ಒಬ್ಬ ಅರ್ಥಶಾಸ್ತ್ರರೊಂದಿಗೆ ಈಗೆ ಹೇಳಿದರು: ಈಗ ಮರ್ಕೆಲ್ ದೃಷ್ಟಿಯಲ್ಲಿ ಮೂರು ಅಂಕಿ ಅಂಶಗಳು ಇವೆ, ಅವುಗಳು ೭%, ೨೫%, ಮತ್ತು ೫೦%. ಮರ್ಕೆಲ್ ಯೂರೋಪ್ ನಲ್ಲಿ ೭% ಜನಸಂಖ್ಯೆ ಇರುವುದನ್ನು, ಆಗು ೨೫% ಜಿಡಿಪಿ ಮತ್ತು ೫೦% ಸಾಮಾಜಿಕ ಖರ್ಚಿನದ್ದು ಎಂದು ಹೇಳುವವರಲ್ಲ. ಈಗೆ ಅಲವಾರು ಪ್ರದೇಶಗಳಲ್ಲಿ ಸ್ಪರ್ಧೆಯಿದ್ದರೆ ಅದು ಉದಾರ ಎಂದು ಮುಂದುವರೆಯಲು ಸಾಧ್ಯವಿಲ್ಲ.
ವೈಯಕ್ತಿಕ ಜೀವನ
[ಬದಲಾಯಿಸಿ]೧೯೯೭ರಲ್ಲಿ ಮರ್ಕೆಲ್ ಒಬ್ಬ ಭೌತಶಾಸ್ತ್ರ ವಿದ್ಯಾರ್ಥಿ ಅಲ್ರಿಚ್ ಮರ್ಕೆಲ್ ಅವರನ್ನು ಮದುವೆಯಾದರು ಆದರೆ ೧೯೮೨ರಲ್ಲಿ ಆ ಮದುವೆ ವಿಚ್ಚೇದನದಲ್ಲಿ ಕೊನೆಗೊಂಡಿತು. ಆಕೆಯ ಎರಡನೇ ಗಂಡ ರಸಾಯನ ಶಾಸ್ತ್ರ ಮತ್ತು ಪ್ರಾಧ್ಯಾಪಕ ಜೋಕಿಮ್ ಸಾಯರ್. ಅವರು ಮೋದಲು ೧೯೮೧ರಲ್ಲಿ ಭೇಟಿಯಾಗಿ ಮತ್ತು ೩೦ ಡಿಸೆಂಬರ್ ೧೯೯೮ರಲ್ಲಿ ಯಾರಿಗೂ ಹೇಳದೆ ಮದುವೆಯಾದರು. ಮರ್ಕೆಲ್ ರವರಿಗೆ ಮಕ್ಕಳು ಇರಲಿಲ್ಲ ಆದರೆ ಸಾಯರ್ಗೆ ಹಿಂದಿನ ವಿವಾಹದಿಂದ ಎರಡು ಗಂಡು ಮಕ್ಕಳಿದ್ದವು. ಅವರು ಕಟ್ಟಾ ಫ಼ುಟ್ಬಾಲ್ ಅಭಿಮಾನಿ. ಆದರೆ ೬ ಜನವರಿ ೨೦೧೪ರಲ್ಲಿ ಮರ್ಕೆಲ್ ಸ್ವಿಜರ್ಲ್ಯಾಂಡ್ ಒಂದು ಹಳ್ಳಿಗಾಡಿನ ಸ್ಕೀಯಿಂಗ್ ಅಪಘಾತದಲ್ಲಿ ಅವರ ಸೊಂಟದಲ್ಲಿ ಒಂದು ಮೂಳೆ ಮುರಿಯಿತು.[೨]
ಉಲ್ಲೇಖಗಳು
[ಬದಲಾಯಿಸಿ]- ↑ http://www.dailymail.co.uk/news/article-2175734/The-shades-Angela-Merkel-Graphic-designer-takes-50-pictures-German-Chancellor-stepping-world-stage-uses-recreate-famous-Pantone-colour-chart.html
- ↑ http://www.forbes.com/forbes/welcome/?toURL=http://www.forbes.com/profile/angela-merkel/&refURL=https://en.wikipedia.org/&referrer=https://en.wikipedia.org/