ವಿಷಯಕ್ಕೆ ಹೋಗು

ಐಫೆಲ್ ಗೋಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐಫೆಲ್ ಗೋಪುರ
ಐಫೆಲ್ ಗೋಪುರ

ಐಫೆಲ್ ಗೋಪುರ (ಫ್ರೆಂಚ್: Tour Eiffel) ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿರುವ ಕಬ್ಬಿಣದ ಗೋಪುರ. ಇದು ಪ್ಯಾರಿಸ್ ನಗರದ ಸಂಕೇತವಾಗಿದ್ದು ಪ್ರಪಂಚದ ಅತ್ಯಂತ ಪ್ರಸಿದ್ದ ಕಟ್ಟಡಗಳಲ್ಲಿ ಒಂದಾಗಿದೆ.

ಗುಸ್ತಾವ್ ಐಫೆಲ್ ಎಂಬ ವಾಸ್ತುಶಿಲ್ಪಿ ಈ ಗೋಪುರ ನಿರ್ಮಾಣದ ನಿರ್ವಹಣೆ ಹೊತ್ತಿದ್ದರಿಂದ ಆತನ ಹೆಸರನ್ನೇ ಈ ಗೋಪುರಕ್ಕೆ ಇಡಲಾಗಿದೆ. ೧೮೮೭-೧೮೮೯ರ ಮಧ್ಯೆ ನಿರ್ಮಿಸಲಾದ ಐಫೆಲ್ ಗೋಪುರಕ್ಕೆ ಕೇವಲ ಶ್ರೇಷ್ಟಮಟ್ಟದ ಕಬ್ಬಿಣವನ್ನು ಉಪಯೋಗಿಸಲಾಗಿದೆ.

ಇಂದಿಗೆ ನೂರು ವರ್ಷ ದಾಟಿದರೂ ಇನ್ನೂ ಇದರ ಆಕರ್ಷಣಿ ಕುಂದಿಲ್ಲ ! ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್ ಗೆ ಹೋದೋಡನೆ ಿದು ಎಲ್ಲಿದ್ದರೂ ಕಂಡುಬಿಡುತ್ತದೆ ಅಷ್ಟು ಎತ್ತರ ಇದು ೯೮೪ ಅಡಿಗೂ ಎತ್ತರವಾಗಿ ಇದು ಎದ್ದು ನಿಂತಿದೆ ೧೮೮೯ ರ ಮಾರ್ಚಿ ತಿಂಗಳಲ್ಲಿ ಇದರ ನಿರ್ಮಾಪಕ ಅಲೆಕ್ಸಾಂಡರ್ ಗಸ್ಟಾವ್ ಐಫೆಲ್ ಇದನ್ನು ಕಟ್ಟಿ ಪೂರ್ಣಗೊಳಿಸಿದ. ಇದು ಪರಿಪೂರ್ಣ ಕಬ್ಬಿಣದಿಂದ ಕಟ್ಟಲ್ಪಟ್ಟಿದೆ ಅಂದಿನ ಕಾಲದಲ್ಲಿ ನಿಜಕ್ಕೂ ಕಬ್ಬಿಣದಿಂದ ಇಂತಹ ನಿರ್ಮಾಣವನ್ನು ರಚಿಸುವುದಿರಲಿ , ಸೇತುವೆಗಳನ್ನು ಕಟ್ಟುವುದೂ ಕಷ್ಠ ಎಂದು ಮೇಧಾವಿಗಳೇ ಅಂದು ಕೊಳ್ಳುತ್ತಿದ್ದರು . ಇಂತಹ ಪ್ರತಿರೋಧ ಮಾತುಗಳಿಗೆಲ್ಲಾ ಕಿವಿಕೊಡದೆ ಐಫೆಲ್ ಇದನ್ನು ಕಬ್ಬಿಣದಿಂದಲೇ ಕಟ್ಟಿದ . ಈತನೇ ಪ್ರಥಮವಾಗಿ ರೈಲ್ವೆ ಸೇತುವೆಗಳನ್ನು ಕಬ್ಬಿಣದಿದಂದ ಕಟ್ಟುವುದನ್ನು ತೋರಿಸಿಕೊಟ್ಟ . ಈತ ಅಂದಿನ ಕಾಲಕ್ಕೆ ಅತಿ ಮೇಧಾವಿ ಎಂಜೀನೇರ್ ಎಂದು ಅನ್ನಿಸಿಕೊಡಿದ್ದರೂ , ಪಾಲಿಟೆಕ್ನಿಕ್ ಪರೀಕ್ಷೆಯಲ್ಲಿ ಈತ ಒಮ್ಮೆ ಫೇಲೂ ಆಗಿ ಬಿಟ್ಟಿದ್ದ . ಈ ಐಫೆಲ್ಲನೇ ಪ್ರೆಂಚ್ ನವರ ಕೊಡುಗೆಯಾದ ಅಮೇರಿಕಾದ ನ್ಯೂಯಾರ್ಕ್ ನಲ್ಲಿರುವ ತಾಮ್ರದ ಸ್ವತಂತ್ರ್ಯ ದೇವತೆಯ ಆಸ್ತಿಗಳ ನಿರ್ಮಾಪಕ ೧೫೦ ಅಡಿ ಎತ್ತರದ ಈ ಲೋಹದ ಮೂರ್ತಿಗಳಿಗೆ ಬೀಳದಿರಲು ಅದರ ಮೈಯೊಳಗೆ ಕಬ್ಬಿಣದ ಚೌಕಟ್ಟುಗಳನ್ನು ಈತನೇ ರಚಿಸಿದ ಆ ಸಮಯದಲ್ಲೆ ಈತನಿಗೆ ಈ ಗೋಪುರದ ಕನಸು ಬಿದ್ದಿದ್ದು ಈ ಗೋಪುರಕ್ಕೆ ೭೦೦೦ ಟನ್ ಗಿಂತಲೂ ಹೆಚ್ಚಿನ ಕಬ್ಬಿಣ ಉಪಯೋಗಿಸಲ್ಪಟ್ಟಿದೆ . ಇಲ್ಲಿ ಉಪಯೋಗಿಸಿದ ಕಬ್ಬಿಣದ ತೊಲೆಗಳು ೧೫೦೦೦ ಇನ್ನು ಈ ತೊಲೆಗಳನ್ನು ಕೂಡಿಸಲು ೨೫ ಲಕ್ಷ ಬೋಲ್ಟ್ ಗಳನ್ನು ಜೋಡಿಸಲಾಗಿದೆ . ಈ ಇಡೀ ಭಾರವನ್ನು ನಾಲ್ಕು ೩೧ ಚದರ ಗಜದ ಕಲ್ಲು ಕಂಬಗಳ ಮೇಲೆ ನಿಲ್ಲಿಸಲಾಗಿದೆ . ಈ ಗೋಪುರದ ನಾಲ್ಕು ಪ್ರಚಂಡ ಕಾಲುಗಳ ಉದ್ದ ಒಂದೊಂದು ೩೩೬ ಅಡಿಗಳು ಈ ಕಬ್ಬಿಣದ ಕಾಲುಗಳು ಆಧಾರವಾದ ಕಲ್ಲು ಕಂಬಗಳ ತಳಕ್ಕೂ ಇಳಿದಿವೆ . ಈ ಕಾಲುಗಳು ೫೯೦ ಅಡಿ ಮೇಲ್ಭಾಗದಲ್ಲಿ ಒಂದಕ್ಕೊಂದು ಕೂಡಿಕೊಂಡಿದೆ . ಈ ಗೋಪುರದದಲ್ಲಿ ಮೂರು ಬೇರೆಬೇರೆ ಹಂತದ ವೀಕ್ಷಕ ಮಾಳಿಗೆಗಳಿವೆ . ಇದರ ತುತ್ತ ತುದಿ ತನಕ ಆರಲು ಲಿಪ್ಟ್ ಗಳಿವೆ ಇದು ೧೮೮೭ ರಲ್ಲಿ ಕಟ್ಟಲು ಪ್ರಾರಂಭವಾಗಿ ಎರಡು ವರ್ಷಗಳಲ್ಲಿ ಮುಗಿಸಲ್ಪಟ್ಟಿತ್ತು . ಇದರ ನಿರ್ಮಾಣ ್ಂದಿನ ಖರ್ಚು ೨ ಲಕ್ಷ ಪೌಂಡುಗಳು . ಈ ಬಾಬ್ತುನಲ್ಲಿ ೬೦ ಸಾವಿರ ಪೌಂಡುನ್ನು ಸರ್ಕಾರ ಕೊಟ್ಟಿತ್ತು . ಮಿಕ್ಕ ೧ ಲಕ್ಷ ೪೦ ಸಾವಿರ ಪೌಂಡು ಐಫೆಲ್ ನೇ ಸಾಲ ಮಾಡಿ ಸಂಗ್ರಹಿಸಿದ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]