ವಿಷಯಕ್ಕೆ ಹೋಗು

ಕೃತಜ್ಞತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೃತಜ್ಞತೆ , ಧನ್ಯವಾದ , ಅಥವಾ ಹೊಗಳುವಿಕೆ /ಮೆಚ್ಚುಗೆ ಒಂದು ಧನಾತ್ಮಕ ಭಾವ ಅಥವಾ ಗುಣ;ಒಬ್ಬ ವ್ಯಕ್ತಿಯು ತನಗೆ ಲಭಿಸಿದ ಅಥವಾ ಲಭಿಸುವ ಸೌಲಭ್ಯಕ್ಕೆ ಪ್ರತಿಯಾಗಿ ನೀಡುವ ಒಂದು ತರದ ರಸೀದಿ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕ -ಡೇವಿಸ್, ರಾಬರ್ಟ್ ಡೇವಿಸ್ ಪ್ರಕಾರ ,ಕೃತಜ್ಞತೆ ಮೂರು ಷರತ್ತುಗಳನ್ನು ಒಳಗೊಂಡಿದೆ.ವೈಯಕ್ತಿಕವಾಗಿ ಆನಂದದಾಯಕನಾದಾಗ ನಡೆದುಕೊಳ್ಳುವ ಬಗ್ಗೆ ೧)ಅವನಿಗೆ ಅಥವಾ ಅವಳಿಗೆ ಬೆಲೆಯುಳ್ಳ ರೀತಿ, ೨) ಪಡೆದುಕೊಳ್ಳುವವನಿಗೆ ನೀಡುವ ಬೆಲೆ , ಮತ್ತು ೩)ಉದ್ದೇಶಪೂರ್ವಕವಾಗಿ ಒಪ್ಪಿಸುವುದು.[] 'ಗ್ರ್ಯಾಟಿಟ್ಯೂಡ್' ಎನ್ನುವ ಶಬ್ದ ,ಲ್ಯಾಟಿನ್ ಭಾಷೆಯ 'ಗ್ರ್ಯಾಶಿಯ' ಶಬ್ದದ ಗ್ರೇಸ್, ಗ್ರೇಟ್ ಫುಲ್ ನೆಸ್ , ಮತ್ತು ಗ್ರೇಶಿಯಸ್ ನೆಸ್ ಗಳ ಜೊತೆಗೂಡಿದೆ.[] ಈ ಲ್ಯಾಟಿನ್ ಬೇರು ನೀಡುವ ಅರ್ಥವೆಂದರೆ , “ಕರುಣೆ ,ಉದಾರತೆ ಮತ್ತು ಕಾಣಿಕೆಯು,ಕೊಡುವ ಮತ್ತು ತೆಗೆದುಕೊಳ್ಳುವ ಆನಂದವೇ ಆಗಿದೆ".[] ಕೃತಜ್ಞತೆಯ ಅನುಭವದ ಬಗ್ಗೆ ಚಾರಿತ್ರಿಕವಾಗಿ ಪ್ರಪಂಚದ ಹಲವು ಧರ್ಮಗಳು[] ಗುರುತಿಸಿವೆ. ಹಾಗು ಬಹುವಾಗಿ ನೀತಿವಂತ ತತ್ವಜ್ಞಾನಿಗಳು ಆಡಂ ಸ್ಮಿತ್ ನಂತೆಇಷ್ಟ ಪಡುತ್ತಾರೆ.[] 'ಕೃತಜ್ಞತೆ'ಯ ಬಗ್ಗೆ ವ್ಯವಸ್ಥಿತವಾದ ಅಧ್ಯಯನ ,ಮನಃ ಶಾಸ್ತ್ರದನ್ವಯ ಆರಂಭವಾದದ್ದು ೨೦೦೦ ದ ವರ್ಷಗಳಲ್ಲಿ.ಯಾಕೆಂದರೆ, ನಿಶ್ಚಿತವಾಗಿ ಸಂಪ್ರದಾಯಬದ್ಧ ಮನಃ ಶಾಸ್ತ್ರವನ್ನು ಧನಾತ್ಮಕ ಭಾವನೆಗಳನ್ನು ಗುರುತಿಸುವುದಕ್ಕಿಂತ ಹೆಚ್ಚಾಗಿ ಮಾನಸಿಕ ದುಃಖದ ಬಗ್ಗೆ ತಿಳಿಯಲು ಉಪಯೋಗಿಸಲ್ಪಟ್ಟಿದೆ. ಆದರೂ ,ತಿಳುವಳಿಕೆಯ ಧನಾತ್ಮಕ ಮನಃಶಾಸ್ತ್ರದ ಚಲನೆ ,[] ಮನಃ ಶಾಸ್ತ್ರದ ಸಂಶೋಧನೆಯಲ್ಲಿ 'ಕೃತಜ್ಞತೆ'ಯು ಮುಖ್ಯ ವಾಹಿನಿಗೆ ಬಂದು ಗುರುತಿಸಲ್ಪಟ್ಟಿದೆ.[] ಮನಃಶಾಸ್ತ್ರದ ಮಿತಿಯೊಳಗೆಕೃತಜ್ಞತೆಯ ಬಗೆಗಿನ ಅಧ್ಯಯನ,ಭಾವನೆಯ ಸಣ್ಣ ಪ್ರಮಾಣದ ಅನುಭವವಾಗಿ ಕಂಡಿದ್ದು, (ಕೃತಜ್ಞತೆಯ ಮಟ್ಟ/ಸ್ಥಿತಿ ),ವೈಯಕ್ತಿಕ ಮಟ್ಟದಲ್ಲಿ ಕೃತಜ್ಞತೆಯ ಭಾವಗಳಲ್ಲಿನ ವ್ಯತ್ಯಾಸ (ವಿಶೇಷ ಗುಣಲಕ್ಷಣ - ಕೃತಜ್ಞತೆ ), ಮತ್ತು ಇವೆರಡೂ ಗುಣಗಳ ನಡುವಿನ ಸಂಬಂಧ .[][]

ಭಾವನಾತೀತವಾಗಿ ಕೃತಜ್ಞತೆ

[ಬದಲಾಯಿಸಿ]

ಪರಿಸ್ಥಿತಿಯನ್ನು ಯಾವ ರೀತಿ ಎದುರಿಸುತ್ತಾರೆ ಎಂದು ಮನಗಂಡ ವ್ಯಕ್ತಿಯು ತಾನು ಪಡೆದ ಸಹಾಯಕ್ಕೆ ಸಲ್ಲಿಸುವ ಭಾವನೆಯೇ 'ಕೃತಜ್ಞತೆ'. ನಿರ್ಧಿಷ್ಟವಾಗಿ,ಕೃತಜ್ಞತೆಯನ್ನು ಅನುಭವಿಸುವ ವ್ಯಕ್ತಿ,ಸಹಾಯವನ್ನು ಗ್ರಹಿಸುವ ರೀತಿಯ ಮೇಲೆ : (a) ಅವರಿಗೆ ಬೆಲೆಯುಳ್ಳದ್ದಾಗಿದೆಯೇ , (b)ದಾನಿಗೆ ತುಂಬಾ ಬೆಲೆಯುಳ್ಳದ್ದೇ, ಮತ್ತು (c)ಪರೋಪಕಾರದ ಉದ್ದೇಶದಿಂದ ಮಾಡಿದ ದಾನ (ನಿಜವಾದ ಅಂತಿಮ ಪ್ರೇರಣೆ ).[][] ಒಂದೇ ರೀತಿಯ ಸಂದರ್ಭಗಳು ಎದುರಾದಾಗ, ನೀಡುವ ಸಹಾಯ,ಬೇರೆ ಬೇರೆ ಜನ ಸಂದರ್ಭಗಳನ್ನು ,ಬೇರೆ ಬೇರೆಯಾಗಿ ನೋಡಿ, ಬೆಲೆ ಕಟ್ಟಿ ಹಾಗು ಪರೋಪಕಾರಿ ಉದ್ದೇಶ ಹೊಂದಿದ್ದು,ಇದರಿಂದಾಗಿ ವಿವಿಧ ರೀತಿಯ ಕೃತಜ್ಞತೆಯ ಮಟ್ಟ,ಜನರು ಸಹಾಯ ಪಡೆದ ನಂತರ ಕಾಣುತ್ತದೆ ಎಂಬುದು ಗೊತ್ತಾಗುತ್ತದೆ.[][೧೦] ಸಾಮಾನ್ಯವಾಗಿ ಜನರು ಹೆಚ್ಚಿನ ಕೃತಜ್ಞತೆ ಹೊಂದಿದವರು ತಮ್ಮ ಜೀವನದಲ್ಲಿ ಸಂಪ್ರದಾಯವಾಗಿ ಸಹಾಯವನ್ನು ಅರ್ಥ ವಿವರಣೆ ಮಾಡಿಕೊಂಡು,ಹೆಚ್ಚು ಬೆಲೆಯುಳ್ಳದ್ದೆಂದು, ಹೆಚ್ಚು ಉಪಯೋಗಕಾರಿಯೆಂದು,ಹೆಚ್ಚು ಉಪಕೃತ ಉದ್ದೇಶದಿಂದ ಕೂಡಿದ್ದೆಂದು ;ಈ ಸಂಪ್ರದಾಯ ಬದ್ಧ ಒಲವು ಇರುವುದರಿಂದ, ಕೆಲವು ಜನರು ಬೇರೆಯವರಿಗಿಂತ ಹೆಚ್ಚು ಕ್ರುತಗ್ನರಾಗಿರುತ್ತಾರೆ.[]

ಕೃತಜ್ಞತೆ ಮತ್ತು ಋಣತ್ವ /ಋಣಗಾರಿಕೆ

[ಬದಲಾಯಿಸಿ]

ಕೃತಜ್ಞತೆಯು, 'ಋಣ' ಅಲ್ಲ,ಬೇರೆ ಬೇರೆಯೇ ಆಗಿದೆ. ಸಹಾಯವನ್ನು ಪಡೆದ ನಂತರ ಎರಡೂ ರೀತಿಯ ಭಾವನೆಗಳು ಉಂಟಾಗುತ್ತವೆ.ವ್ಯಕ್ತಿಯೊಬ್ಬನು ತಾನು ಪಡೆದ ಸಹಾಯಕ್ಕೆ ಪ್ರತಿಯಾಗಿ ಏನನ್ನಾದರೂ ನೀಡಬೇಕು ಎಂಬ ಭಾವನೆಯ ಸಮಯದಲ್ಲಿ ಋಣದ ಭಾವ ಹುಟ್ಟುತ್ತದೆ.[೧೧] ಭಾವನೆಗಳು ಬೇರೆ ಬೇರೆ ಕ್ರಿಯೆಗೆ ಅವಕಾಶ ಮಾಡಿಕೊಡುತ್ತದೆ;ಸಹಾಯವನ್ನು ಪಡೆದ ವ್ಯಕ್ತಿಯ ಋಣ ಭಾವ ಕ್ರಿಯೆಯಾಗಿ ,ಸಹಾಯ ಮಾಡಿದ ವ್ಯಕ್ತಿಯ ಸಹಾಯಕ್ಕೆ ಹೋಗುತ್ತಾನೆ,ಆದರೆ ಕೃತಜ್ಞತಾಭಾವ, ಸಹಾಯ ಪಡೆದ ವ್ಯಕ್ತಿಯ ಜೊತೆ ಸಂಬಂಧ ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಿರತನಾಗುತ್ತಾನೆ.[೧೨][೧೩]

ನಡತೆಯ ಕ್ರಿಯೆ 'ಕೃತಜ್ಞತೆ'

[ಬದಲಾಯಿಸಿ]

ದಾನ ಮಾಡಿದವನ ನಡತೆಯಲ್ಲಿ ಸಾಮಾಜಿಕ ಕ್ರಿಯೆಗೆ ,ಮುಂದಿನ ಭವಿಷ್ಯಕ್ಕೆ ಶಕ್ತಿಯನ್ನು ಕೃತಜ್ಞತೆಯು ನೀಡುತ್ತದೆ. ಉದಾಹರಣೆಗೆ ,ಚಿನ್ನದ ಅಂಗಡಿಯ ಖರೀದಿದಾರರನ್ನು ಕರೆಯಿಸಿ,ಧನ್ಯವಾದ ಹೇಳಿದ ನಂತರ ,ಖರೀದಿಯಲ್ಲಿ, ಶೇಕಡಾ ೭೦ ರಷ್ಟು ವ್ಯಾಪಾರದ ಹೆಚ್ಚಳವು ಕಂಡು ಬಂದಿದೆ. ಹೋಲಿಕೆಯಂತೆ ,ಖರೀದಿದಾರರನ್ನು ಕರೆದು ಧನ್ಯವಾದ ಹೇಳಿ,ಮಾರಾಟದ ವಿವರ ನೀಡಿದ ಮೇಲೆ ಕೇವಲ ಶೇಕಡಾ ೩೦ ರಷ್ಟು ಖರೀದಿಯ ಹೆಚ್ಚಳವಾಗಿದೆ. ಖರೀದಿದಾರರನ್ನು ಕರೆಯದೆ ಇದ್ದ ಸಂದರ್ಭದಲ್ಲಿ ,ವ್ಯಾಪಾರದಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿರುವುದಿಲ್ಲ.[೧೪] ಮತ್ತೊಂದು ಅಧ್ಯಯನದನ್ವಯ , ಹೋಟೆಲ್ಲಿನ ನಿಯಮಿತ ಆಶ್ರಯದಾತ ಹೆಚ್ಚು ದೊಡ್ಡ ಕಾಣಿಕೆಯನ್ನು ನೀಡಿದ್ದು, ಸರ್ವರ್ಸ್ “ಧನ್ಯವಾದ ” ಅವರ ಚೆಕ್ ನಲ್ಲಿ ಬರೆದಾಗ ಮಾತ್ರ.[೧೫]

ಕೃತಜ್ಞತೆಗೆ ಪ್ರಧಾನ ತಾತ್ವಿಕ ಅನುಸಂಧಾನ

[ಬದಲಾಯಿಸಿ]

ಧರ್ಮ ಮತ್ತು ಕೃತಜ್ಞತೆಯ ನಡುವಿನ ಕೊಂಡಿ ಇತ್ತೀಚಿನ ದಿನಗಳಲ್ಲಿ ಅಧ್ಯಯನಕ್ಕೆ ಜನಪ್ರಿಯ ವಿಷಯವಾಗಿದೆ. ಈ ಎರಡೂ ಗುಣಗಳು ನಿಜವಾಗಿಯೂ ಒಂದಕ್ಕೊಂದು ಬೆಸೆದುಕೊಂಡಿರುವುದಿಲ್ಲ,ಒಂದು ಅಧ್ಯಯನದ ಅನ್ವಯ ಮನುಷ್ಯರಲ್ಲಿರುವ ಧಾರ್ಮಿಕತೆಯು ಆ ವ್ಯಕ್ತಿಯ ಧನ್ಯತಾಭಾವ ಹೆಚ್ಚಾಗಲು ಕಾರಣವಾಗುತ್ತದೆ.ಯಾರು ಹೆಚ್ಚು ಹೆಚ್ಚು ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸುತ್ತಾರೋ,ಅವರು ತಮ್ಮ ಜೀವನದ ಎಲ್ಲಾ ದಿನಗಳಲ್ಲಿ, ಹೆಚ್ಚು ಹೆಚ್ಚು ಕೃತಜ್ಞತಾ ಭಾವಕ್ಕೆ ಒಳಗಾಗುತ್ತಾರೆ.[][೧೬] 'ಕೃತಜ್ಞತೆಯ' ಭಾವವನ್ನು ಕ್ರಿಶ್ಚಿಯನ್ ,ಮತ್ತು ಬುದ್ಧ ಧರ್ಮದಲ್ಲಿ ಮನುಷ್ಯರ ಒಲವಿನ ಕಾಣಿಕೆ ಎಂದು ಕಾಣಬಹುದಾಗಿದೆ. ಮುಸ್ಲಿಂ , ಜುಯಿಷ್ , ಮತ್ತು ಹಿಂದೂ ಸಂಪ್ರದಾಯದಲ್ಲಿಯೂ ಕಾಣಬಹುದಾಗಿದೆ.[೧೭] ಪ್ರಾರ್ಥನೆಯ ಜೊತೆಗೆ 'ಕೃತಜ್ಞತೆ'ಯನ್ನು ದೇವರಿಗೆ ಅರ್ಪಿಸುವುದು ಸಾಮಾನ್ಯ ನಿಲುವು ಆಗಿರುವುದು, ಈ ಧರ್ಮಗಳಲ್ಲಿದೆ.ಈ ಕೃತಜ್ಞತೆಯ ವಿಷಯ ಧಾರ್ಮಿಕ ಪುಸ್ತಕಗಳಲ್ಲಿ,ಉಪನ್ಯಾಸಗಳಲ್ಲಿ,ಮತ್ತು ಸಂಪ್ರದಾಯಗಳಲ್ಲಿ ಹರಡಿಕೊಂಡಿದೆ. ಈ ಕಾರಣದಿಂದ ,ಇದು ಒಂದು ಅತ್ಯಂತ ಸಾಮಾನ್ಯ ಭಾವದಿಂದ ಧರ್ಮವು ತನ್ನ ಹಿಂಬಾಲಕರ ಮನಸ್ಸನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿ 'ಸಾರ್ವರ್ತ್ರಿಕ ಧಾರ್ಮಿಕ ಭಾವನೆ 'ಎಂದು ತಿಳಿಯಲ್ಪಟ್ಟಿದೆ.[೧೮]

ಯಹೂದ್ಯರ ವಿಷಯದಲ್ಲಿ ಕೃತಜ್ಞತೆ

[ಬದಲಾಯಿಸಿ]

ಜುಡಾಯಿಸಮ್ ನಲ್ಲಿ ,ಕೃತಜ್ಞತೆಯ ಭಾವ ಪ್ರಾರ್ಥನೆಯ ಒಂದು ಅಗತ್ಯ ಅಂಗವೇ ಆಗಿದೆ ಹಾಗು ಪ್ರಾರ್ಥಿಸುವವನ ಜೀವನದ ಅಂದವೆ ಆಗಿದೆ. 'ಹೆಬ್ರ್ಯೂ' ವಿಶ್ವದೃಷ್ಟಿಯ ಪ್ರಕಾರ ,ಎಲ್ಲವೂ ದೇವರಿಂದ ಬರಲ್ಪಟ್ಟಿದ್ದು,ಇದರಿಂದಾಗಿ 'ಕೃತಜ್ಞತೆ ಯ' ಭಾವ ಜುಡಾಯಿಸಮ್ ನಲ್ಲಿಅತಂತ ಮುಖ್ಯವಾದ ವಿಷಯವೇ ಆಗಿದೆ. 'ಹೆಬ್ರ್ಯೂ' ಧರ್ಮ ಗ್ರಂಥಗಳಲ್ಲಿ 'ಕೃತಜ್ಞತೆಯ' ಬಗ್ಗೆ ಸಾಕಷ್ಟು ಉಪಾಯಗಳಿವೆ. ಎರಡು ಉದಾಹರಣೆಗಳೆಂದರೆ, ಅದರಲ್ಲಿ ಬರುವ ಕೀರ್ತನೆಗಳಲ್ಲಿ " ಓ ಜಗದೊಡೆಯ ನನ್ನ ದೇವರೇ,ನಾನು ನಿನಗೆ ಯಾವಾಗಲೂ ಧನ್ಯನಾಗಿರುತ್ತೇನೆ," ಮತ್ತು"ನಾನು ನನ್ನ ಕೃತಜ್ಞತೆಯನ್ನು ನನ್ನ ತುಂಬು ಹೃದಯದಿಂದ ನಿನಗೆ ಸಲ್ಲಿಸುತ್ತೇನೆ." (ಪಿಎಸ್ . ೩೦:೧೨; ಪಿ ಎಸ್ . ೯:೧). ಜ್ಯುಯಿಷ್ ಪ್ರಾರ್ಥನೆಗಳಲ್ಲಿಯೂ ಕೃತಜ್ಞತೆಯ ಭಾವವನ್ನು ಶೀಮಾದಲ್ಲಿ ಅಳವಡಿಸಿ ಕೊಳ್ಳಲಾಗಿದ್ದು ,ಪ್ರಾರ್ಥಕನು ಪ್ರಾರ್ಥಿಸುತ್ತಾ,"ನೀನು ಅನಂತವನ್ನು ಪ್ರೀತಿಸುತ್ತೀ,ನಿನ್ನ ದೇವರನ್ನು ಹೃದಯ ತುಂಬಿ ಪ್ರೀತಿಸುತ್ತೀ,ಆತ್ಮದೊಂದಿಗೆ ಹಾಗೂ ನಿನ್ನ ಎಲ್ಲಾ ಶಕ್ತಿಯೊಂದಿಗೆ." (ದ್ಯುತ್ . ೬:೫). ಪ್ರಾರ್ಥನೆಯನ್ನು ಮುಗಿಸುತ್ತಾ, 'ಅಲೇನು',ಕೃತಜ್ಞತೆಯ ಬಗ್ಗೆ ಮಾತನಾಡುತ್ತಾ,ದೇವರಿಗೆ ಧನ್ಯವಾದ ಹೇಳಿ ಜ್ಯುಯಿಷ್ ಜನಾಂಗದ ನಿರ್ಧಿಷ್ಟ ಗುರಿಗೆ ವಂದಿಸುತ್ತಾರೆ. ಈ ಪ್ರಾರ್ಥನೆಗಳೊಂದಿಗೆ , ನಂಬಿಕೆಯ ಭಕ್ತರು ಹಾಡುತ್ತಾ ,ನೂರಕ್ಕಿಂತ ಹೆಚ್ಚು ಆಶೀರ್ವಚನ ಕೇಳುತ್ತಾ,ದಿನ ಕಳೆಯುತ್ತಾರೆ.[೧೯]

ಕ್ರಿಶ್ಚಿಯನ್ನರಲ್ಲಿ ಕೃತಜ್ಞತೆಯ ಪರಿಕಲ್ಪನೆ

[ಬದಲಾಯಿಸಿ]

ಕ್ರಿಶ್ಚಿಯನ್ನರ ಇಡೀ ಜೀವನ ಕೃತಜ್ಞತೆಯ ಭಾವದಿಂದ ಅಚ್ಚು ಮತ್ತು ಭಾವವನ್ನು ಹೊಂದಿದೆ. ಕ್ರಿಶ್ಚಿಯನ್ ಪರಿವರ್ತನೆ ಪ್ರಕಾರ , ಮಾರ್ಟಿನ್ ಲೂಥರ್ ,ಕೃತಜ್ಞತೆಯನ್ನು “ಕ್ರಿಶ್ಚಿಯನ್ನರ ಮೂಲಭೂತ ಗುಣ "ಎಂದಿದ್ದು,ಇತ್ತೀಚಿನ ದಿನಗಳಲ್ಲಿ ಅದನ್ನು "ಏಸುಕ್ರಿಸ್ತನ ಸುವಾರ್ತೆಯ ಹೃದಯ" ಎಂದಿದ್ದಾನೆ.[೧೮] ಪ್ರತಿಯೊಬ್ಬ ಕ್ರಿಶ್ಚಿಯನ್ನನು ನಂಬುವಂತೆ ,ಅವನ ಸೃಷ್ಟಿ ವೈಯಕ್ತಿಕವಾಗಿ ದೇವರಿಂದ ಆಗಿದ್ದು,ಕ್ರಿಶ್ಚಿಯನ್ನರು ಧನ್ಯತಾಭಾವದಿಂದ ತನ್ನನ್ನು ಸೃಷ್ಟಿಸಿದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಪ್ರೋತ್ಸಾಹಿಸುತ್ತಾರೆ. ಕ್ರಿಶ್ಚಿಯನ್ನರ ಕೃತಜ್ಞತೆಯಲ್ಲಿ ,ದೇವರು ನಿಸ್ವಾರ್ಥದಿಂದ ಎಲ್ಲಾ ರೀತಿಯ ಒಳ್ಳೆಯ ವಿಷಯವನ್ನು ಕೊಡುವವನಾಗಿದ್ದು,ಹೆಚ್ಚಿನ ಭಾವದಲ್ಲಿ ಉಪಕೃತನಾಗಿದ್ದು,ಇದರಿಂದಾಗಿ ಕ್ರಿಶ್ಚಿಯನ್ನರು ಒಂದು ಸಾಮಾನ್ಯ ಬಂಧನಕ್ಕೊಳಗಾಗಿ,ಭಕ್ತರ ಜೀವನ ಎಲ್ಲಾ ರೀತಿಯಲ್ಲಿ ರೂಪಿತವಾಗುತ್ತಾ ಹೋಗುತ್ತದೆ. ಕ್ರಿಶ್ಚಿಯನ್ನರಲ್ಲಿ ಕೃತಜ್ಞತೆಯು ದೇವರು ನೀಡಿದ ಉದಾರತೆಯ ರಸೀದಿಯಾಗಿದ್ದು,ಇದರಿಂದ ಸ್ಪೂರ್ತಿಗೊಂಡ ಕ್ರಿಶ್ಚಿಯನ್ನರು ತಮ್ಮದೇ ಭಾವಗಳನ್ನು ರೂಪಿಸಿಕೊಳ್ಳುತ್ತಾ,ಕ್ರಿಯೆಗಳನ್ನು ಹೊಮ್ಮಿಕೊಳ್ಳುತ್ತಾ,ಜೀವನವನ್ನು ಕಂಡುಕೊಳ್ಳುತ್ತಾರೆ.[೨೦] ಕೃತಜ್ಞತೆಯ ಭಾವನೆಯು ಒಂದು ಸಾಮಾನ್ಯ ಭಾವನೆಯಾಗದೆ,ಕ್ರಿಶ್ಚಿಯನ್ನರಲ್ಲಿ ಅದು ಪಾವಿತ್ರ್ಯವಾಗಿದ್ದು,ಅದು ಕೇವಲ ಭಾವನೆಯಾಗಿ ಉಳಿಯದೆ ಕ್ರಿಯೆ ಮತ್ತು ಗುರಿಯನ್ನು ತೋರಿಸುವ ಹಾದಿಯೇ ಆಗಿದೆ.[೧೮] ೧೭ ನೇ ಶತಮಾನದ ಪುನರುಜ್ಜೀವಿತ ಧರ್ಮಬೋಧಕ ಮತ್ತು ವೇದಾಂತಿ, ಜೋಹ್ನಾಥನ್ ಎಡ್ವರ್ಡ್ಸ್ ,ತನ್ನ ಗ್ರಂಥದಲ್ಲಿ,ಧಾರ್ಮಿಕ ಆಕರ್ಷಣೆ,ಪ್ರೀತಿ,ಕೃತಜ್ಞತೆ,ಮತ್ತು ಧನ್ಯವಾದ -ಇವು ದೇವರಿಗೆ ಸಲ್ಲಿಸುವ ನಿಜವಾದ ಧರ್ಮವಾಗಿದೆ ಎಂದು ಹೇಳುತ್ತಾನೆ. ಈ ಒಂದು ಅರ್ಥವಿವರಣೆಯಿಂದಾಗಿ,ಈ ಅಧುನಿಕ ಜೀವನದ ಧರ್ಮ ದೈವತ್ವದಲ್ಲಿ, ಧನ್ಯವಾದ ಮತ್ತು ಕೃತಜ್ಞತೆ ದೇವರಿಗೆ ತೋರಿಸುವ ಜಮಾಬಂದಿಯಾಗಿದೆ. 'ಆಲ್ ಪೋರ್ಟ್'(೧೯೫೦)ರ ಪ್ರಕಾರ ಮಾಗಿದ ಧರ್ಮದ ಉದ್ದೇಶಗಳು ಗಾಢ ಕೃತಜ್ಞತೆಯ ಭಾವದಿಂದ ಬಂದವುಗಳಾಗಿದ್ದು,ಮತ್ತು ಎಡ್ವರ್ಡ್ಸ್ (೧೭೪೬/೧೯೫೯)ಹೇಳುವಂತೆ, ಒಬ್ಬ ವ್ಯಕ್ತಿಯ ಜೀವನದಲ್ಲಿ ನಿಜವಾಗಿ ದೇವರನ್ನು ಕಾಣುವ ರೀತಿಯೇ "ಪ್ರೀತಿಯಿಂದ ಕೃತಜ್ಞತೆಯನ್ನು" ಕಾಣುವುದಾಗಿದೆ. ಸಾಮುಯಲ್ಸ್ ಮತ್ತು ಲೆಸ್ಟರ್(೧೯೮೫)ಅಧ್ಯಯನದ ಪ್ರಕಾರ, ಕ್ಯಾಥೊಲಿಕ್ 'ನನ್ಸ್ ಮತ್ತು ಪೂಜಾರಿಗಳಲ್ಲಿ 'ರುವ , ೫೦ ಭಾವಗಳಲ್ಲಿ , ಪ್ರೀತಿ ಮತ್ತು ಕೃತಜ್ಞತೆಯೇ ಹೆಚ್ಚಾಗಿದ್ದು,ದೇವರ ಹತ್ತಿರಕ್ಕೆ ಹೋಗುವ ಭಾವವಾಗಿದೆ.[೧೯]

ಇಸ್ಲಾಂನಲ್ಲಿ ಕೃತಜ್ಞತೆಯ ಪರಿಕಲ್ಪನೆ

[ಬದಲಾಯಿಸಿ]

ಇಸ್ಲಾಮಿಕ್ ಧರ್ಮಗ್ರಂಥ, 'ಕುರಾನ್' ನಲ್ಲಿ ,ಕೃತಜ್ಞತೆಯ ಭಾವದ ಬಗ್ಗೆ ತಿಳಿಸಲಾಗಿದ್ದು, ಜುಡಾಯಿಸಮ್ ಮತ್ತು ಕ್ರಿಶ್ಚಿಯಾನಿಸಂ ನಂತೆಯೇ ಇವೆ. ಇಸ್ಲಾಂ ತನ್ನ ಹಿಂಬಾಲಕರಿಗೆ ಕೃತಜ್ಞತೆಯಿಂದ ಇರಲು ಹೇಳಿ,ಎಲ್ಲ ಸಂದರ್ಭಗಳಲ್ಲಿಯೂ,ದೇವರಿಗೆ ಧನ್ಯವಾದ ಹೇಳಲು ತಿಳಿಸಿದೆ. ಇಸ್ಲಾಮಿಕ್ ಉಪದೇಶದಲ್ಲಿ ,ಯಾರು ಹೆಚ್ಚು ಕೃತಜ್ಞತಾ ಭಾವ ಹೊಂದಿರುತ್ತಾರೋ ಅವರಿಗೆ ಕಾಣಿಕೆ ಸಿಗುವುದಾಗಿ ಒತ್ತಿ ಹೇಳಿದೆ. ಸಾಂಪ್ರದಾಯಿಕ ಮುಸ್ಲಿಂ ಹೇಳುವಂತೆ:"ಯಾರು ಮೊದಲು ಸ್ವರ್ಗಕ್ಕೆ ಹೋಗುತ್ತಾರೋ ಅವರು ಹೆಚ್ಚಾಗಿ ದೇವರನ್ನು ಎಲಾ ಸಂದರ್ಭಗಳಲ್ಲಿಯೂ ಹೊಗಳಿರುತ್ತಾರೆ."[೨೧]'ಕುರಾನಿನ' ಸುರ ೧೪ ರಲ್ಲಿ ಹೇಳಿರುವಂತೆ ಯಾರು ಹೆಚ್ಚು ಕೃತಜ್ಞರಾಗಿರುತ್ತಾರೋ ಅವರಿಗೆ ದೇವರು ಹೆಚ್ಚು ಕೊಡುತ್ತಾನೆ. ಪ್ರವಾದಿ ಮೊಹಮ್ಮದ್ ಹೇಳುವಂತೆ ,“ಸಮೃದ್ಧಿಯನ್ನು ಹೊಂದಿದ್ದಕ್ಕೆ ಹೆಚ್ಚು ಕೃತಜ್ಞರಾಗುತ್ತಿದ್ದಂತೆ,ಇದು ಜೀವವಿಮೆಯಂತೆ ಕಾರ್ಯ ನಿರ್ವಹಿಸಿ,ಇನ್ನೂ ಹೆಚ್ಚಿನ ಸಮೃದ್ಧಿ ತಂದುಕೊಡುತ್ತದೆ." ಇಸ್ಲಾಮಿಕ್ ನಮ್ಬಿಕೆಯಲ್ಲಿನ ಹಲವು ಅಗತ್ಯ ಅಭ್ಯಾಸಗಳು ಕೃತಜ್ಞತೆಯನ್ನು ಪ್ರೋತ್ಸಾಹಿಸುತ್ತವೆ. ಇಸ್ಲಾಮಿಕ್ ನ ಆಧಾರ ಸ್ಥಂಭ,ಒಂದು ದಿನದಲ್ಲಿ ೫ ಸಾರ್ತಿಯ ಪ್ರಾರ್ಥನೆಯಲ್ಲಿನ ನಂಬಿಕೆಯೂ ,ಅವನು ನಮಗೆ ತೋರಿದ ಕರುಣೆಗೆ ,ನಾವು ನೀಡುವ ಕೃತಜ್ಞತೆಯಾಗಿದೆ. 'ರಂಜಾನ್'ಸಮಯದಲ್ಲಿ ಮಾಡುವ ಉಪವಾಸ ಹಾಗು ಅದರ ಉದ್ದೇಶವೇ, ಭಕ್ತನು ನಂಬಿಕಸ್ಥನು ದೇವರಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ.[೧೯]

ಕೃತಜ್ಞತೆಯಲ್ಲಿನ ವೈಯಕ್ತಿಕ ವ್ಯತ್ಯಾಸಗಳು.

[ಬದಲಾಯಿಸಿ]

ಕೃತಜ್ಞತೆಯ ಬಗ್ಗೆ ಇತ್ತೀಚಿಗೆ ನಡೆದ ಸಂಶೋಧನೆಗಳಿಂದ, ಮನಃಶಾಸ್ತ್ರಜ್ಞರ ಪ್ರಕಾರ ಕೃತಜ್ಞತೆಯು ವೈಯಕ್ತಿಕವಾಗಿ ಬೇರೆ ಬೇರೆ ಎಂದು ನಿರೂಪಿಸಲಾಗಿದೆ. ಇದರ ತತ್ಫಲವಾಗಿಯೇ ಹೆಚ್ಚೂ ಕಡಿಮೆ ಹೆಸರಾಂತ ವ್ಯಕ್ತಿಗಳ ಆಗಮನವಾಗುತ್ತದೆ.[] ವೈಯಕ್ತಿಕ ಮಟ್ಟದಲ್ಲಿ ಕೃತಜ್ಞತೆಯ ಭಾವವನ್ನು ಅಳೆಯಲು ಮೂರು ರೀತಿಯ ಮಾಪಕಗಳನ್ನು ಗುರುತಿಸಲಾಗಿದ್ದು,ಪ್ರತಿಯೊಂದೂ ಮಾಪನದಲ್ಲಿಯೂ ಕೃತಜ್ಞತೆಯ ಭಾವದಲ್ಲಿ ವೈಯಕ್ತಿಕ ವ್ಯತ್ಯಯವಿದೆ.[೨೨] ಜಿಕ್ಯು ೬[೨೩] ಮಾಪನದನ್ವಯ ಕೃತಜ್ಞತೆಯನ್ನು ಹೇಗೆ ಸತತವಾಗಿ ಮತ್ತು ಉದ್ದೇಶಪೂರ್ವಕವಾಗಿ ಅನುಭವಿಸುತ್ತಾರೆ ಎಂದು ಹೇಳಿದೆ. ಗುಣಗ್ರಹಣ ಮಾಪನ [೨೪] ೮ ವಿವಿಧ ವಿಷಯಗಳ ಕೃತಜ್ಞತೆಯ ಬಗ್ಗೆ ಹೇಳುತ್ತಾ: ಜನರ ಗುಣ ವಿವೇಚನೆ,ಒಡೆತನ,ವಾಸ್ತವ ಚಲನೆ,ಧರ್ಮಾಚರಣೆ,ಭಯದ ಭಾವನೆ,ಸಾಮಾಜಿಕ ಹೋಲಿಕೆ,ವಾಸ್ತವಿಕ ಕಾಳಜಿ ಮಾತ್ತು ನಡತೆ -ಇವುಗಳು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತವೆ. ಗ್ರತ್/ಜಿಆರ್ಎಟಿ [೨೫] ಲೆಕ್ಕಾಚಾರದ ಪ್ರಕಾರ, ಬೇರೆಯವರಿಗೆ ಕೃತಜ್ಞತೆ,ಸಾಮಾನ್ಯವಾಗಿ ವಿಶ್ವದೆಡೆಗೆ ಕೃತಜ್ಞತೆ,ನಿನ್ನಲ್ಲಿ ಏನಿಲ್ಲವೋ ಅದರ ಬಗ್ಗೆ ಅಸಮಾನದ ಕೊರತೆ - ಈ ಪ್ರತಿಯೊಂದೂ ಮಾಪನದ ಬಗ್ಗೆ ಇತ್ತೀಚೆಗೆ ನಡೆದ ಅಧ್ಯಯನದ ಅನ್ವಯ ಜೀವನವನ್ನು ಒಂದೇ ರೀತಿಯಾಗಿ ಕಾಣುವುದೇ ಆಗಿದೆ;ಇದರಿಂದಾಗಿ, ವೈಯಕ್ತಿಕ ವ್ಯತ್ಯಾಸಗಳಿದ್ದರೂ,ಕೃತಜ್ಞತೆಯ ಭಾವದಲ್ಲಿ ಇದೆಲ್ಲವೂ ಅಡಕವಾಗಿದೆ.[೨೨]

ಅನುಭವಸಿದ್ಧ ನಿರ್ಣಯ

[ಬದಲಾಯಿಸಿ]

ಕೃತಜ್ಞತೆ ಮತ್ತು ಚೆನ್ನಾಗಿರುವುದು

[ಬದಲಾಯಿಸಿ]

ಇತ್ತೀಚಿನ ದಿನಗಳಲ್ಲಿ ನಡೆದ ಹಲವು ಅಧ್ಯಯನಗಳಿಂದ ತಿಳಿಯುವುದೇನೆಂದರೆ, ಯಾರು ಹೆಚ್ಚು ಕೃತಜ್ಞರಾಗಿರುತ್ತಾರೋ,ಅವರು ಹೆಚ್ಚಿನ ಮಟ್ಟದಲ್ಲಿ ಚೆನ್ನಾಗಿರುತ್ತಾರೆ. ಮಹಾನ್ ವ್ಯಕ್ತಿಗಳು ,ಹೆಚ್ಚು ಖುಷಿಯಾಗಿದ್ದು,ಕಡಿಮೆ ದುಃಖಿತರಾಗಿರುತ್ತಾರೆ, ಕಡಿಮೆ ಒತ್ತಡಕ್ಕೆ ಒಳಗಾಗುತ್ತಾರೆ,ಜೀವನದಲ್ಲಿ ಹೆಚ್ಚು ತೃಪ್ತರಾಗಿರುತ್ತಾರೆ ಮತ್ತು ಸಾಮಾಜಿಕ ಸಂಬಂಧ ಗಳಲ್ಲಿ [೨೩][೨೬][೨೭] ಸಂತೃಪ್ತರಾಗಿರುತ್ತಾರೆ.ಮಹಾನ್ ವ್ಯಕ್ತಿಗಳು ತಮ್ಮ ಸುತ್ತಲಿನ ಪರಿಸರದ ಬಗ್ಗೆ ಹೆಚ್ಚಿನ ಹಿಡಿತ ಹೊಂದಿರುತ್ತಾರೆ,ವೈಕ್ತಿಕ ಬೆಳವಣಿಗೆ,ಜೀವನದಲ್ಲಿನ ಗುರಿ ಮತ್ತು ಸ್ವಾರ್ಥದ ಒಪ್ಪಿಗೆಯಲ್ಲಿ ಹಿಡಿತವಿಟ್ಟುಕೊಂಡಿರುತ್ತಾರೆ.[೨೮] ಮಹಾನ್ ವ್ಯಕ್ತಿಗಳು ಹೆಚ್ಚಿನ ಧನಾತ್ಮಕ ಭಾವದಿಂದ ತಮ್ಮ ಜೀವನದ ಕಷ್ಟಗಳನ್ನು ಎದುರಿಸುತ್ತಾರೆ,ಬೇರೆ ಜನರಿಂದ ಹೆಚ್ಚಿನ ನಿರೀಕ್ಷೆಯನ್ನು ನಿರೀಕ್ಷಿಸದೆ ಇರುವವರಾಗಿರುತ್ತಾರೆ.ಅನುಭವದ ಪಾಠವನ್ನು ಕಲಿತು ಜೀವನದಲ್ಲಿ ಬೆಳೆಯುತ್ತಾರೆ,ಹೆಚ್ಚಿನ ಸಮಯವನ್ನು ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಯೋಚಿಸುತ್ತಾರೆ.[೨೯] ಮಹಾನ್ ವ್ಯಕ್ತಿಗಳು ಋಣಾತ್ಮಕ ಭಾವನೆಯಿಂದ ದೂರಾಗಿ,ಸಮಸ್ಯೆಗಳನ್ನು ಆದಷ್ಟೂ ಕಡಿಮೆ ಮಾಡಿ,ಅದರಿಂದ ದೂರ ಉಳಿಯಲು ಯತ್ನಿಸುತ್ತಾರೆ,ಸಮಸ್ಯೆಯನ್ನು ಅಲ್ಲಗೆಳೆಯುತ್ತಾರೆ,ತಮ್ಮನ್ನು ನಿಂದಿಸಿಕೊಲ್ಲುತ್ತಾರೆ,ಅಥವಾ ತತ್ವದ ಬಗ್ಗೆ ಹೊಂದುಕೊಳ್ಳುತ್ತಾರೆ.[೨೯] ಮಹಾನ್ ವ್ಯಕ್ತಿಗಳು ಚೆನ್ನಾಗಿ ನಿದ್ರೆ ಮಾಡುತ್ತಾರೆ,ಕಾರಣವೆಂದರೆ,ಅವರು ಮಲಗುವುದಕ್ಕೆ ಮುಂಚೆ ಋಣಾತ್ಮಕವಾಗಿ ಕಡಿಮೆ,ಧನಾತ್ಮಕವಾಗಿ ಹೆಚ್ಚು ಚಿಂತಿಸುವ ಸ್ವಭಾವದವರಾಗಿರುತ್ತಾರೆ.[೩೦]. ಮಾನಸಿಕ ಆರೋಗ್ಯದ ಯಾವುದೇ ಗುಣಲಕ್ಷಣದೊಂದಿಗೆ ಕೃತಜ್ಞತೆಯು ಹೆಚ್ಚಿನ ಸಂಬಂಧ ಹೊಂದಿರುತ್ತದೆ. ಅಂಕಿ-ಅಂಶಗಳ ಅಧ್ಯಯನವು ಹೇಳುವುದೇನೆಂದರೆ,ಮಹಾನ್ ವ್ಯಕ್ತಿಗಳು ಉನ್ನತ ಮಟ್ಟದ ಸಂತೋಷ ಹೊಂದಿದವರಾಗಿದ್ದು,ಕಡಿಮೆ ಮಟ್ಟದ ಒತ್ತಡಕ್ಕೆ ,ಆಯಾಸಕ್ಕೆ ಒಳಗಾಗುತ್ತಾರೆ.[೩೧][೩೨] ಕೃತಜ್ಞತೆಗೆ ಸಂಬಂಧಿಸಿದಂತೆ ನಡೆಸಿದ ಒಂದು ಅಧ್ಯಯನದಲ್ಲಿ,ಭಾಗವಹಿಸಿದವರನ್ನು ಗೊತ್ತು ಗುರಿಯಿಲ್ಲದ ೬ ರೀತಿಯಚಿಕಿತ್ಸಾ ತಂತ್ರಕ್ಕೆ ಒಳಪಡಿಸಿ,ಜೀವನದ ಸಮಗ್ರ ಗುಣಮಟ್ಟ ಹೆಚ್ಚಿಸಲು (ಸೇಲಿಗ್ ಮ್ಯಾನ್ ಇಟಿ.ಆಲ್., ೨೦೦೫).[೩೩] ಈ ಪರಿಸ್ಥಿತಿಯಲ್ಲಿ ,ಅತಿ ದೊಡ್ಡ,ಕಡಿಮೆ-ಅವಧಿಯ ಪ್ರಭಾವವು 'ಕೃತಜ್ಞತಾ-ಭೇಟಿ'ಯಿಂದ ಬಂದುದಾಗಿದ್ದು,ಮತ್ತು ಹಾಗು ತಮಗೆ ಜೀವನದಲ್ಲಿ ಸಹಾಯ ಮಾಡಿದವರಿಗೆ ಭಾಗವಹಿಸಿದವರು ಬರೆದ 'ಕೃತಜ್ಞತಾ ಪತ್ರ'ವನ್ನು ವಿತರಿಸಿರುವುದು ಕಂಡು ಬಂದಿದೆ. ಈ ಸ್ಥಿತಿಯಲ್ಲಿ ಶೇಕಡಾ ೧೦ ರಷ್ಟು ಜನರು ಖುಷಿಯಾಗಿದ್ದುದಷ್ಟೇ ಅಲ್ಲದೆ,ಚಿಂತೆಯ ಮನೋಭಾವವು ಸಹ ಕಡಿಮೆಯಾಗಿದ್ದು,ಫಲಿತಾಂಶವು ಒಂದು ತಿಂಗಳ ಭೇಟಿಯ ನಂತರ ಫಲಿಸಿತು. ಒಟ್ಟು ೬ ಷರತ್ತುಗಳಲ್ಲಿ ,ತುಂಬಾ ದೀರ್ಘಕಾಲದ ಪ್ರಭಾವವು ಉಂಟಾಗಲು ಕಾರಣ ಯಾವುದೆಂದರೆ 'ಕೃತಜ್ಞತೆಯ ಪತ್ರಿಕೆ' ಬರೆದವರಾಗಿದ್ದು ,ಭಾಗಿಯಾದವರನ್ನು ,ಪ್ರತಿದಿನ ಯಾವ ಕಾರಣಕ್ಕೆ ಮೂರು ಸಲ ಕೃತಜ್ಞರಾದರು ಎಂಬ ಕಾರಣ ಕೇಳಿ ಬರೆಯಲು ತಿಳಿಸಲಾಯಿತು. ಈ ಪ್ರಯೋಗದಲ್ಲಿ ಭಾಗಿಯಾದವರು ’ಹೆಚ್ಚು ಖುಷಿಯಾಗಿದ್ದು,ಪ್ರತಿಯೊಂದು ಸರ್ತಿಯಲ್ಲೂ ಖುಷಿಯ ಮಟ್ಟ ಜಾಸ್ತಿಯಾಗುತ್ತಲೇ ಹೋಗಿದ್ದು ದಾಖಲಾಯಿತು. ನಿಜವೆಂದರೆ ,ಚಿಕಿತ್ಸೆಯನ್ನು ನೀಡಿದ ಆರು ತಿಂಗಳ ನಂತರ ಸಾಮಾನ್ಯವಾಗಿ ಹೆಚ್ಚಿನ ಉಪಯೋಗ ಕಾಣಲಾರಂಭಿಸಿತು. ಈ ಪ್ರಯೋಗ ಹೆಚ್ಚು ಯಶಸ್ವಿಯಾಗಿದ್ದು,ಭಾಗಿಯಾದವರಿಗೆ ಪತ್ರಿಕೆ ಬರಹದಲ್ಲಿ ಕೇವಲ ಭಾಗಿಯಾಗಲು ಹೇಳಿ,ಚಿಕಿತ್ಸೆ ಮುಗಿದ ನಂತರವೂಭಾಗೀದಾರರು ಅದೇ ಹವ್ಯಾಸವನ್ನು ಮುಂದುವರಿಸಿದ್ದು ಕಂಡು ಬಂದಿತು. ಇದೆ ರೀತಿಯ ಫಲಿತಾಂಶವನ್ನು ಎಮ್ಮೊಂಸ್ ಮತ್ತು ಮಕ್ ಕುಲ್ಲೌಗ್ಹ್ (೨೦೦೩)[೩೪] ಹಾಗೂ ಲ್ಯುಬೋಮಿರ್ಸ್ಕ್ಯ್ ಇಟಿ . ಆಲ್ .ನಡೆಸಿದ ಅಧ್ಯಯನದಿಂದಲೂ ಕಂಡು ಬಂದಿದೆ. (೨೦೦೫)[೩೨] ಹಲವು ಭಾವನೆಗಳು ಹಾಗು ಗುಣ-ಲಕ್ಷಣಗಳು ವೈಯಕ್ತಿಕವಾಗಿ ಮುಖ್ಯವಾಗಿದ್ದು,ಕೃತಜ್ಞತೆಯು ಸಹ ಅಷ್ಟೇ ಮುಖ್ಯ ಎಂಬುದಕ್ಕೆ ಸಾಕ್ಷಿಯಾಗಿದೆ. ಮೊದಲನೇ ಸರ್ತಿ ,ರೇಖಾಂಶ ಅಧ್ಯಯನದಲ್ಲಿ ಜನರು ಯಾರು ಹೆಚ್ಚು ಕೃತಜ್ಞರಾಗಿರುತ್ತಾರೋ ಅವರು ತಮ್ಮ ಜೀವನದಲ್ಲಿ ಸ್ಥಿತ್ಯಂತರದಲ್ಲಿ ಉತ್ತಮರಾಗಿರುತ್ತಾರೆ. ನಿರ್ಧಿಷ್ಟವಾಗಿ,ಯಾರು ಸ್ಥಿತ್ಯಂತರಕ್ಕೆ ಮುಂಚಿತವಾಗಿ ಕೃತಜ್ಞರಾಗಿರುತ್ತಾರೋ ಅವರು ಕಡಿಮೆ ಒತ್ತಡಕೆ ಒಳಗಾಗಿದ್ದು,ಕಡಿಮೆ ದುಃಖಿತರಾಗುತ್ತಾರೆ,ಹಾಗು ಮೂರು ತಿಂಗಳ ನಂತರ ಹೆಚ್ಚು ತಮ್ಮ ಸಂಬಂಧಗಳಲ್ಲಿ ಸಂತೃಪ್ತರಾಗಿರುತ್ತಾರೆ.[೩೫] ಎರಡನೆಯದಾಗಿ ,ಇತ್ತೀಚಿನ ಎರಡು ಅಧ್ಯಯನಗಳ ಪ್ರಕಾರ ಕೃತಜ್ಞತೆಯಲ್ಲಿಒಂದೇ ರೀತಿಯ ಸಂಬಂಧಗಳು ಒಳ್ಳೆ-ರೀತಿಯಲ್ಲಿ ಇದ್ದು,ಒಳ್ಳೆ-ರೀತಿಯಲ್ಲಿ ಇರಲು ಕಾರಣವೇನೆಂದು ವಿವರಿಸಲು,ಬೇರೆಯವರಲ್ಲಿ ಆ ಗುಣಲಕ್ಷಣ ಸಾಧ್ಯವಿರುವುದಿಲ್ಲ. ಎರಡೂ ಅಧ್ಯಯನಗಳ ಹೇಳಿಕೆಯಂತೆ ,'ಕೃತಜ್ಞತೆ'ಯು , ದೊಡ್ಡ ಐದು ಮತ್ತು ತುಂಬಾ ಸಾಮಾನ್ಯವಾದ ಗುಣಲಕ್ಷಣದ ಅಧ್ಯಯನದ ೩೦ ಒಳ್ಳೆ-ರೀತಿಗಳನ್ನು ವಿವರಿಸುವ ಸಾಮರ್ಥ್ಯವನ್ನು ಹೊಂದಿದೆ.[೨೬][೨೮]

ಕೃತಜ್ಞತೆ ಮತ್ತು ಪರಹಿತಾಸಕ್ತಿ

[ಬದಲಾಯಿಸಿ]

ಕೃತಜ್ಞತೆಯ ಭಾವದ ಕಾರಣದಿಂದ ಒಬ್ಬ ವ್ಯಕ್ತಿಯ ಪರಹಿತಾಸಕ್ತಿಯ ಭಾವ ಹೆಚ್ಚುತ್ತಾ ಹೋಗುತ್ತದೆ. ಡೇವಿಡ್ ಡೇಸ್ಟೆನೋ ಮತ್ತು ಮೋನಿಕಾ ಬಾರ್ಟ್ಲೆಟ್ (೨೦೧೦)ರವರು ನಡೆಸಿದ ಒಂದು ಅಧ್ಯಯನದಿಂದ ಕೃತಜ್ಞತೆಯು ಆರ್ಥಿಕ ಉದಾರತೆಯೊಂದಿಗೆ ಸಂಬಂಧವನ್ನು ಹೊಂದಿದೆ. ಈ ಒಂದು ಅಧ್ಯಯನದಲ್ಲಿ ,ಅರ್ಥ ಶಾಸ್ತ್ರದ ಆಟದೊಂದಿಗೆ,ಹೆಚ್ಚಿನ ಕೃತಜ್ಞತಾ ಭಾವ ಕಂಡಿದ್ದು,ಇದರಿಂದಾಗಿ ಹೆಚ್ಚಿನ ಆರ್ಥಿಕ ಸೌಲಭ್ಯ ಕಂಡು ಬಂದಿತು. ಈ ಫಲಿತಾಂಶಗಳಿಂದ ,ಈ ಅಧ್ಯಯನಗಳಿಂದ ,ಆನಂದದಾಯಕ ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಗಳನ್ನು ತ್ಯಾಗ ಮಾಡಿ ಜನಾಂಗದ ಲಾಭಕ್ಕೆ ನೆರವಾಗುತ್ತಾರೆ. (ಡೇಸ್ಟೆನೋ ಮತ್ತು ಬಾರ್ಟ್ಲೆಟ್ , ೨೦೧೦). ಮಕ್ ಕುಲ್ಲೌಗ್ಹ್ , ಎಮ್ಮೊಂಸ್ ,ಮತ್ತು ತ್ಸಾಂಗ್ ,(೨೦೦೨) ಇವರು ನಡೆಸಿದ ಅಧ್ಯಯನದಿಂದ,ಒಂದೇ ರೀತಿಯ ಸಂಬಂಧಗಳನ್ನು, ಕೃತಜ್ಞತೆ ಮತ್ತು ಅನುಭೂತಿ ಶಕ್ತಿ/ಸ್ಪಷ್ಟ ಪಡಿಸುವಿಕೆ,ಉದಾರತೆ ಮತ್ತು ಸಹಾಯಗಳನ್ನು ಕಾಣಬಹುದಾಗಿದೆ.[೩೬][೩೭]

ಕೃತಜ್ಞತೆಯ ಭಾವವನ್ನು ಹೆಚ್ಚಿಸಲು ಮಧ್ಯಸ್ಥಿಕೆ

[ಬದಲಾಯಿಸಿ]

ಕೃತಜ್ಞತೆಯ ಭಾವದಿಂದ ಜನರು ಚೆನ್ನಾಗಿರಲು, ನಿಶ್ಚಯಿಸುವ ಶಕ್ತಿ ಕಾರಣವಾಗುತ್ತದೆ.ಹಲವಾರು ಮನಃಶಾಸ್ತ್ರದ ಮಧ್ಯಸ್ಥಿಕೆಯನ್ನು ಅಭಿವೃದ್ಧಿ ಪಡಿಸಿದ್ದು,ಕೃತಜ್ಞತಾ ಭಾವನೆ ಹೆಚ್ಚಿಸಲು ಕಾರಣವಾಗಿದೆ.[][೩೮] ಉದಾಹರಣೆಗೆ , ವಾಟ್ ಕಿನ್ಸ್ ಮತ್ತು ಜೊತೆಗಾರರು [೩೯] ಭಾಗಿಯಾದ ವಿವಿಧ ರೀತಿಯ ಕೃತಜ್ಞತೆಯ ಪರೀಕ್ಷೆಯ ಅಭ್ಯಾಸಗಳಲ್ಲಿ,ಜೀವಂತ ವ್ಯಕ್ತಿಯ ಬಗ್ಗೆ ಯೋಚಿಸುತ್ತಾ,ಯಾರಿಗೆ ಕೃತಜ್ಞ ರಾಗಿರುತ್ತಾರೋ ಅವರಿಗೆ,ಪತ್ರವನ್ನು ಬರೆಯುತ್ತಾರೆ. ಭಾಗಿಯಾದವರಿಗೆ ಪರೀಕ್ಷೆಯ ಹಿಡಿತದ ಷರತ್ತಿನೊಂದಿಗೆ ಅವರ ವಾಸದ ಕೊಠಡಿಯ ಬಗ್ಗೆ ವಿವರಿಸಲು ಕೇಳಲಾಯಿತು. ಯಾವ ಭಾಗೀದಾರರು ,ಯಾರು ಕೃತಜ್ಞತೆಯ ಅಭ್ಯಾಸದಲ್ಲಿರುತ್ತಾರೋಅವರು ಧನಾತ್ಮಕ ಭಾವದಲ್ಲಿ ಹೆಚ್ಚಿನ ಅನುಭವ ತೋರಿದ್ದು,ಈ ನಿಟ್ಟಿನಲ್ಲಿ ಸದೃಢ ಭಾಗೀದಾರರಾಗಿದ್ದು,ಅವರು ಯಾರ ಬಗ್ಗೆ ಹೆಚ್ಚು ಕೃತಜ್ಞರಾಗಿರುತ್ತಾರೋ ಅವರ ಬಗ್ಗೆ ಯೋಚಿಸಲು ಹೇಳಿದ್ದಾರೆ. ಭಾಗೀದಾರರು ಹೆಚ್ಚಿನ ಕೃತಜ್ಞತೆಯುಳ್ಳವರು ಆರಂಭದಲ್ಲಿ,ಹೆಚ್ಚಿನ ಸೌಲಭ್ಯವನ್ನು ಹೊಂದಿರುತ್ತಾರೆ.

ಮುಕ್ತಾಯ

[ಬದಲಾಯಿಸಿ]

ಸಿಸೆರೋ ಪ್ರಕಾರ , “ಕೃತಜ್ಞತೆಯು ಕೇವಲ ಹೆಚ್ಚಿನ ಸದ್ಗುಣವಷ್ಟೇ ಆಗದೆ,ಎಲ್ಲಾ ರೀತಿಯವರಿಗೆ ತಾಯಿಯಾಗಿದೆ." ಹಲವಾರು ರೀತಿಯಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಕೃತಜ್ಞತೆ ಮತ್ತು ಹೆಚ್ಚಿನ ಚೆನ್ನಾಗಿರುವದರ ಸಂಬಂಧಗಳು ಕೇವಲ ವೈಯಕ್ತಿಕ ಮಟ್ಟವಷ್ಟೇ ಆಗಿರದೆ, ಯಾರು ಭಾಗಿಯಾಗಿರುತ್ತಾರೋ ಅವರೆಲ್ಲರಿಗೂ ಆಗುತ್ತದೆ.[೪೦][೪೧] ಧನಾತ್ಮಕ ಮನಃಶಾಸ್ತ್ರದ ಅಭಿಪ್ರಾಯದ ಅನ್ವಯ,ಎಲ್ಲಾ ರೀತಿಯಲೂ ಚೆನ್ನಾಗಿರಲು ಈ ಭಾವ ಸಹಾಯಕವಾಗಿದೆ.ಇದರಿಂದಾಗಿ ಈ ಅಭ್ಯಾಸಗಳನ್ನು ಉಪಯೋಗಿಸಿಕೊಂಡು, ಕೃತಜ್ಞತೆಯ ಭಾವಗಳನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಆದರೂ,ಹಳೆಯ ಕಾಲದಲ್ಲಿ ಮನಃಶಾಸ್ತ್ರಜ್ಞರು ಈ ಕೃತಜ್ಞತೆಯ ಭಾವವನ್ನು ತಿರಸ್ಕರಿಸಿದ್ದು,ಇತ್ತೀಚಿನ ವರ್ಷಗಳಲ್ಲಿ ಕೃತಜ್ಞತೆಯ ಬಗ್ಗೆಅಧ್ಯಯನ ನಡೆದು, ಅದರ ಧನಾತ್ಮಕ ಅಭಿಪ್ರಾಯದ ಬಗ್ಗೆ ಸಂಶೋಧನೆ ಆಗುತ್ತಿದೆ.

ಆಕರಗಳು

[ಬದಲಾಯಿಸಿ]
  1. ೧.೦ ೧.೧ ೨/ ೬.ಸ್ನಯ್ದರ್ , ಸಿ . ಆರ್ ., ಅಂಡ್ ಶಾನೆ ಜೆ . ಲೋಪೆಜ್ . ಹ್ಯಾಂಡ್ ಬುಕ್ ಆಫ್ ಪಾಸಿಟಿವ್ ಸೈಕಾಲಜಿ./ಧನಾತ್ಮಕ ಮನಃ ಶಾಸ್ತ್ರದ ಕೈಪಿಡಿ. ಆಕ್ಸ್‌ಫರ್ಡ್ [ಇಂಗ್ಲೆಂಡ್ ]: ಆಕ್ಸ್ಫರ್ಡ್ ಯು ಪಿ , ೨೦೦೨. ಮುದ್ರಣ
  2. ೨.೦ ೨.೧ ೯. ಎಮ್ ಸಿ ಕುಲ್ಲೌಗ್ಹ್ , ಎಮ್ .ಇ ., ಎಮ್ಮೊಂಸ್ , ಆರ್ .ಎ ., ಅಂಡ್ ತ್ಸಾಂಗ್ , ಜೆ . (೨೦೦೨). ದಿ ಗ್ರೇಟ್ ಫುಲ್ ಡಿಸ್ ಪೊಸಿಷನ್ : ಎ ಕಾಂಸೆಪ್ಚುಯಲ್ ಅಂಡ್ ಎಂಪಿರಿಕಾಲ್ ಟೋಪೋಗ್ರಫಿ . ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ , ೮೩, ೧೧೨-೧೨೭
  3. ಎಮ್ಮೊಂಸ್ , ಆರ್ . ಎ ., ಅಂಡ್ ಕ್ರಂಪ್ಲರ್ , ಸಿ . ಎ . (೨೦೦೦). ಗ್ರ್ಯಾಟಿಟ್ಯೂಡ್ ಆಸ್ ಎ ಹ್ಯುಮನ್ ಸ್ತ್ರೆನ್ಗ್ಥ್ : ಅಪ್ಪ್ರಿಸಿಂಗ್ ದಿ ಎವಿಡೆನ್ಸ್ . ಜರ್ನಲ್ ಆಫ್ ಸೋಶಿಯಲ್ ಅಂಡ್ ಕ್ಲಿನಿಕಲ್ ಸೈಕಾಲಜಿ , ೧೯ , ೫೬-೬೯
  4. [1] ^ ಸ್ಮಿತ್,ಎ. (೧೭೯೦/೧೯೭೬). ದಿ ಥಿಯರಿ ಆಫ್ ಮಾರಲ್ ಸೆಂಟಿಮೆಂಟ್ಸ್ (೬ ನೇ ಆವೃತ್ತಿ .). ಇಂಡಿಯಾನಪೊಲಿಸ್ , ಇನ್ : ಲಿಬರ್ಟಿ ಕ್ಲಾಸಿಕ್ಸ್ . (ಒರಿಜಿನಲ್ ವರ್ಕ್ ಪಬ್ಲಿಶ್ಡ್ ೧೭೯೦).
  5. ಲಿನ್ಲೆಯ್ , ಪಿ . ಎ ., ಜೋಸೆಫ್ , ಎಸ್ ., ಹ್ಯಾರಿಂಗ್ ಟನ್ , ಎಸ್ .,ಅಂಡ್ ವುಡ್ , ಎ . ಎಮ್ . (೨೦೦೬). ಪಾಸಿಟಿವ್ ಸೈಕಾಲಜಿ : ಪಾಸ್ಟ್ , ಪ್ರೆಸೆಂಟ್ , ಅಂಡ್ (ಪಾಸಿಬಲ್ ) ಫ್ಯೂಚರ್ . Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.ದಿ ಜರ್ನಲ್ ಆಫ್ ಪಾಸಿಟಿವ್ ಸೈಕಾಲಜಿ , ೧ , ೩-೧೬.
  6. ೬.೦ ೬.೧ ೬.೨ ವುಡ್ , ಎ . ಎಮ್ ., ಜೋಸೆಫ್ , ಎಸ್ ., ಅಂಡ್ ಲಿನ್ಲೆಯ್ , ಪಿ ಎ . (೨೦೦೭). ಗ್ರ್ಯಾಟಿಟ್ಯೂಡ್: ದಿ ಪೇರೆಂಟ್ ಆಫ್ ಆಲ್ ವರ್ಚ್ಯೂಸ್ . Archived 2015-07-31 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಸೈಕಾಲಜಿಸ್ಟ್ , ೨೦ , ೧೮-೨೧
  7. ೭.೦ ೭.೧ ೭.೨ ೭.೩ ವುಡ್ , ಎ . ಎಮ್ ., ಮಾಲ್ಟ್ಬಯ್ , ಜೆ ., ಸ್ತೆವರ್ತ್ , ಏನ್ ., ಲಿನ್ಲೆಯ್ , ಪಿ . ಎ ., ಅಂಡ್ ಜೋಸೆಫ್ , ಎಸ್ . (೨೦೦೮). ಎ ಸೋಶಿಯಲ್ -ಕಾಗ್ನಿಟಿವ್ ಮಾಡೆಲ್ ಆಫ್ ತ್ರೈಟ್ ಅಂಡ್ ಸ್ಟೇಟ್ ಲೆವೆಲ್ಸ್ ಆಫ್ ಗ್ರ್ಯಾಟಿಟ್ಯೂಡ್ Archived 2011-07-17 ವೇಬ್ಯಾಕ್ ಮೆಷಿನ್ ನಲ್ಲಿ..ಭಾವನೆ, ೮, ೨೩೨-೨೪೯.
  8. ಮ್ಚ್ಚುಲ್ಲೌಗ್ಹ್ , ಎಮ್ . ಇ ., ತ್ಸಾಂಗ್ , ಜೆ .ಅಂಡ್ ಎಮ್ಮೊಂಸ್ , ಆರ್ . ಎ . (೨೦೦೪). ಗ್ರ್ಯಾಟಿಟ್ಯೂಡ್ ಇನ್ ಇಂಟರ್ಮೀಡಿಯೇಟ್ ಎಫ್ಫೆಕ್ಟಿವ್ ತೆರ್ರೈನ್ : ಲಿಂಕ್ಸ್ ಆಫ್ ಗ್ರೇಟ್ ಫುಲ್ ಮೂಡ್ಸ್ ಟು ಇಂಡಿವಿಶುಯಲ್ ಡಿಫ್ಫೆರೆನ್ಸೆಸ್ ಅಂಡ್ ಡೈಲಿ ಎಮೋಷನಲ್ ಎಕ್ಸ್ಪೀರಿಯನ್ಸ್ . ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ , ೮೬ ,೨೯೫-೩೦೯. (ಎಲೆಕ್ಟ್ರಾನಿಕ್ ಕಾಪಿ ) Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ.
  9. ಲೇನ್ , ಜೆ .,ಅಂಡ್ ಅಂಡರ್ಸನ್ , ಎನ್ . ಹೆಚ್ . (೧೯೭೬). ಇಂಟಿಗ್ರೇಶನ್ ಆಫ್ ಇಂಟೆನ್ಶನ್ ಅಂಡ್ ಔಟ್ ಕಂ ಇನ್ ಮಾರಲ್ ಜಡ್ಜ್ಮೆಂಟ್ . ಮೆಮೊರಿ ಅಂಡ್ ಕಾಗ್ನಿಶಿಯನ್ , ೪ , ೧-೫.
  10. ತೆಸ್ಸರ್ , ಎ ., ಗೇಟ್ ವುಡ್ , ಆರ್ ., ಅಂಡ್ ಡ್ರೈವರ್ , ಎಂ . (೧೯೬೮). ಸಮ್ ಡಿಟರ್ಮಿನಂಟ್ಸ್ ಆಫ್ ಗ್ರ್ಯಾಟಿಟ್ಯೂಡ್. ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ , ೯ , ೨೩೩-೨೩೬.
  11. ಗ್ರೀನ್ ಬರ್ಗ್ , ಎಂ . ಎಸ್ . (೧೯೮೦). ಎ ಥಿಯರಿ ಆಫ್ ಇನ್ದೆಬೆಟ್ನೆಸ್ . ಇನ್ ಕೆ . ಜೆ . ಗೆರ್ಗೆನ್ , ಎಂ . ಎಸ್ . ಗ್ರೀನ್ಬೇರ್ಗ್ ಅಂಡ್ ಆರ್ . ಹೆಚ್ . ವಿಲ್ಲ್ಸ್(ಎಡ್ಸ್ .), ಸೋಶಿಯಲ್ ಎಕ್ಸ್ಚೇಂಜ್ : ಅದ್ವನ್ಸೆಸ್ ಇನ್ ಥಿಯರಿ ಅಂಡ್ ರಿಸರ್ಚ್ : ನ್ಯೂಯಾರ್ಕ್ : ಪ್ಲೆನುಮ್ .
  12. ವಾಟ್ ಕಿನ್ಸ್ , ಪಿ . ಸಿ ., ಸ್ಚೀರ್ , ಜೆ ., ಒವ್ನಿಸೆಕ್ , ಎಂ ., ಅಂಡ್ ಕೊಲ್ತ್ಸ್ , ಆರ್ . (೨೦೦೬). ದಿ ದೆಬ್ತ್ ಆಫ್ ಗ್ರ್ಯಾಟಿಟ್ಯೂಡ್  : ದಿಸೋಸಿಯೇಟಿಂಗ್ ಗ್ರ್ಯಾಟಿಟ್ಯೂಡ್ ಅಂಡ್ ಇನ್ದೆಬ್ತೆದ್ನೆಸ್ಸ್ . ಕಾಗ್ನಿಶಿಯನ್ ಅಂಡ್ ಎಮೋಶನ್ , ೨೦ , ೨೧೭-೨೪೧.
  13. ತ್ಸಾಂಗ್ , ಜೆ . ಎ . (೨೦೦೬). ದಿ ಎಫ್ಫೆಕ್ಟ್ಸ್ ಆಫ್ ಹೆಲ್ಪರ್ ಇಂಟೆನ್ಶನ್ ಆನ್ ಗ್ರ್ಯಾಟಿಟ್ಯೂಡ್ ಅಂಡ್ ಇನ್ದೆಬ್ತೆದ್ನೆಸ್ಸ್ . ಮೋಟಿವೇಶನ್ ಅಂಡ್ ಎಮೋಶನ್ , ೩೦ , ೧೯೯-೨೦೫.
  14. ಕಾರೆಯ್ , ಜೆ . ಆರ್ ., ಕ್ಲಿಕ್ಕ್ಯು , ಎಸ್ . ಹೆಚ್ ., ಲಇಗ್ಹ್ಟನ್ , ಬಿ . ಎ ., ಅಂಡ್ ಮಿಲ್ಟನ್ , ಎಫ್ . (೧೯೭೬). ಎ ಟೆಸ್ಟ್ ಆಫ್ ಪಾಸಿಟಿವ್ ರಿ ಇನ್ಫೋರ್ಸ್ ಮೆಂಟ್ ಆಫ್ ಕಸ್ಟಮರ್ಸ್ . ಜರ್ನಲ್ ಆಫ್ ಮಾರ್ಕೆಟಿಂಗ್ , ೪೦ , ೯೮-೧೦೦.
  15. ರಿಂಡ್ , ಬಿ .,ಅಂಡ್ ಬೋರ್ದಿಯ , ಪಿ . (೧೯೯೫). ಎಫೆಕ್ಟ್ ಆಫ್ ಸರ್ವರ್ಸ್ "ಥ್ಯಾಂಕ್ ಯು " ಅಂಡ್ ಪೆರ್ಸನಲೈಜೇಶನ್ ಆನ್ ರೆಸ್ಟೋರೆಂಟ್ ಟಿಪ್ಪಿಂಗ್ . ಜರ್ನಲ್ ಆಫ್ ಅಪ್ಪ್ಲೈಡ್ ಸೋಶಿಯಲ್ ಸೈಕಾಲಜಿ , ೨೫ , ೭೪೫-೭೫೧.
  16. ೫. ಎಮ್ಮೊಂಸ್ , ರಾಬರ್ಟ್ ಎ ., ಅಂಡ್ ಮೈಕೇಲ್ ಇ . ಮಕ್ ಕುಲ್ಲೌಗ್ಹ್ . "ಹೈಲೈಟ್ಸ್ ಫ್ರಾಂ ದಿ ರಿಸರ್ಚ್ ಪ್ರಾಜೆಕ್ಟ್ ಆಫ್ ಗ್ರ್ಯಾಟಿಟ್ಯೂಡ್ ಅಂಡ್ ಥ್ಯಾಂಕ್ ಫುಲ್ ನೆಸ್ಸ್ ." ಜಾಲ. http://ಸೈಕಾಲಜಿ .ಉಕ್ದವಿಸ್ .ಇಡಿಯು /ಲ್ಯಾಬ್ಸ್ /ಎಮ್ಮೊಂಸ್ /
  17. ೩. ಎಮ್ಮೊಂಸ್ , ರಾಬರ್ಟ್ ಎ ., ಅಂಡ್ ಚೆರ್ಯ್ಲ್ ಎ . ಕ್ರುಮ್ಪ್ಲಾರ್ . "ಗ್ರ್ಯಾಟಿಟ್ಯೂಡ್ ಆಸ್ ಎ ಹ್ಯುಮನ್ ಸ್ಟ್ರೆಂತ್  : ಅಪ್ಪ್ರೈಸಿಂಗ್ ದಿ ಎವಿಡೆನ್ಸ್ ." ಜರ್ನಲ್ ಆಫ್ ಸೋಶಿಯಲ್ ಅಂಡ್ ಕ್ಲಿನಿಕಲ್ ಸೈಕಾಲಜಿ ೧೯.೧ (೨೦೦೦): ೫೬-೬೯. ಮುದ್ರಣ
  18. ೧೮.೦ ೧೮.೧ ೧೮.೨ ೧.ಎಮ್ಮೊಂಸ್ , ರಾಬರ್ಟ್ ಎ ., ಅಂಡ್ ತೆರೇಸಾ ಟಿ . ಕ್ನೀಜೆಲ್ . "ಗಿವಿಂಗ್ ಗ್ರ್ಯಾಟಿಟ್ಯೂಡ್ : ಸ್ಪಿರಿಚುಯಲ್ ಅಂಡ್ ರಿಲಿಜಿಯಸ್ ಕಾರ್ರೆಲ್ಅಟ್ಸ್ ಆಫ್ ಗ್ರ್ಯಾಟಿಟ್ಯೂಡ್ : ." ಜರ್ನಲ್ ಆಫ್ ಸೈಕಾಲಜಿ ಅಂಡ್ ಕ್ರಿಶ್ಚಿಯಾನಿಟಿ ೨೪.೨ (೨೦೦೫): ೧೪೦-೪೮. ಮುದ್ರಣ
  19. ೧೯.೦ ೧೯.೧ ೧೯.೨ ೩. ಎಮ್ಮೊಂಸ್ , ರಾಬರ್ಟ್ ಎ ., ಅಂಡ್ ಚೆರ್ಯ್ಲ್ ಎ . ಕ್ರುಮ್ಪ್ಲರ್ . "ಗ್ರ್ಯಾಟಿಟ್ಯೂಡ್ : ಆಸ್ ಎ ಹ್ಯುಮನ್ ಸ್ಟ್ರೆಂತ್ : ಅಪ್ಪ್ರೈಸಿಂಗ್ ದಿ ಎವಿಡೆನ್ಸ್ ." ಜರ್ನಲ್ ಆಫ್ ಸೋಶಿಯಲ್ ಅಂಡ್ ಕ್ಲಿನಿಕಾಲ್ ಸೈಕಾಲಜಿ ೧೯.೧ (೨೦೦೦): ೫೬-೬೯. ಮುದ್ರಣ
  20. ೩.ಎಮ್ಮೊಂಸ್ , ರಾಬರ್ಟ್ ಎ ., ಅಂಡ್ ಚೆರ್ಯ್ಲ್ ಎ . ಕ್ರುಮ್ಪ್ಲರ್ . "ಗ್ರ್ಯಾಟಿಟ್ಯೂಡ್ ಆಸ್ ಎ ಹ್ಯುಮನ್ ಸ್ಟ್ರೆಂತ್ : ಅಪ್ಪ್ರೈಸಿಂಗ್ ದಿ ಎವಿಡೆನ್ಸ್ ." ಜರ್ನಲ್ ಆಫ್ ಸೋಶಿಯಲ್ ಅಂಡ್ ಕ್ಲಿನಿಕಲ್ ಸೈಕಾಲಜಿ ೧೯.೧ (೨೦೦೦): ೫೬-೬೯. ಮುದ್ರಣ
  21. ೨.ವುಡ್ , ಆಲೆಕ್ಷ್ , ಸ್ತೆಪ್ಹೇನ್ ಜೋಸೆಫ್ , ಅಂಡ್ ಆಲೆಕ್ಷ್ ಲಿನ್ಲೆಯ್ . "ಗ್ರ್ಯಾಟಿಟ್ಯೂಡ್--ಪೇರೆಂಟ್ ಆಫ್ ಆಲ್ ವರ್ಚ್ಯೂಸ್ ." ದಿ ಸೈಕಾಲಜಿಸ್ಟ್ ೨೦.೧ (೨೦೦೭): ೧೮-೨೧. ಮುದ್ರಣ
  22. ೨೨.೦ ೨೨.೧ ವುಡ್ , ಎ . ಎಂ ., ಮಲ್ತ್ಬಿ , ಜೆ ., ಸ್ತೆವಾರ್ತ್ , ಎನ್ ., ಅಂಡ್ ಜೋಸೆಫ್ , ಎಸ್ . (೨೦೦೮). ಕಾಂಸೆಪ್ಶ್ಚುಯಲೈಜಿಂಗ್ ಗ್ರ್ಯಾಟಿಟ್ಯೂಡ್ ಅಂಡ್ ಅಪ್ಪ್ರಿಸಿಯೇಶನ್ ಆಸ್ ಎ ಯುನಿಟರಿ ಪೆರ್ಸನಾಲಿಟಿ ಟ್ರೈಟ್ . Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ. ಪರ್ಸನಾಲಿಟಿ ಅಂಡ್ ಇಂಡಿವಿಜುಯಲ್ ಡಿಫ್ಫರೆನ್ಸಸ್ , ೪೪ , ೬೧೯-೬೩೦.
  23. ೨೩.೦ ೨೩.೧ ಮಕ್ ಕುಲ್ಲೌಗ್ಹ್ , ಎಂ . ಇ ., ಎಮ್ಮೊಂಸ್ , ಆರ್ . ಎ ., ಅಂಡ್ ತ್ಸಾಂಗ್ , ಜೆ . (೨೦೦೨). ದಿ ಗ್ರೇಟ್ ಫುಲ್ ಡಿಸ್ಪೋಸಿಶನ್ : ಎ ಕಾಂಸೆಪ್ಚುಯಲ್ ಅಂಡ್ ಎಂಪಿರಿಕಲ್ ಟೋಪೋಗ್ರಫಿ . ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ , ೮೨ , ೧೧೨-೧೨೭.
  24. ಅಡ್ಲರ್ , ಎಂ . ಜಿ ., ಅಂಡ್ ಫಾಗ್ಲೆಯ್ , ಎನ್ . ಎಸ್ . (೨೦೦೫). ಅಪ್ಪ್ರೆಸಿಯೇಶನ್ : ಇಂಡಿವಿಶುಯಲ್ ಡಿಫ್ಫರೆನ್ಸಸ್ ಇನ್ ಫೈನ್ದಿಂಗ್ ವ್ಯಾಲ್ಯೂ ಅಂಡ್ ಮೀನಿಂಗ್ ಆಸ್ ಎ ಯುನಿಕ್ಯು ಪ್ರೆಡಿಕ್ಟರ್ ಆಫ್ ಸಬ್ಜಕ್ತಿವ್ ವೆಲ್ -ಬಿಯಿಂಗ್. . ಜರ್ನಲ್ ಆಫ್ ಪರ್ಸಾನಲಿಟಿ , ೭೩ , ೭೯-೧೧೪.
  25. ವಾಟ್ ಕಿನ್ಸ್ , ಪಿ . ಸಿ ., ವುಡ್ವರ್ಡ್ , ಕೆ ., ಸ್ಟೋನ್ , ಟಿ ., ಅಂಡ್ ಕೊಲ್ಟ್ಸ್ , ಆರ್ . ಎಲ್ . (| ೨೦೦೩ ಗ್ರ್ಯಾಟಿಟ್ಯೂಡ್ ಅಂಡ್ ಹ್ಯಾಪಿನೆಸ್  : ಡೆವಲಪ್ಮೆಂಟ್ ಆಫ್ ಅ ಮೆಷರ್ ಆಫ್ ಗ್ರ್ಯಾಟಿಟ್ಯೂಡ್, ಅಂಡ್ ರಿಲೇಶನ್ ಶಿಪ್ಸ್ ವಿಥ್ ಸಬ್ಜಕ್ತಿವ್ ವೆಲ್ -ಬಿಯಿಂಗ್ . ಸೋಶಿಯಲ್ ಬಿಹೇವಿಯರ್ ಅಂಡ್ ಪರ್ಸನಾಲಿಟಿ ', ೩೧ , ೪೩೧-೪೫೧.
  26. ೨೬.೦ ೨೬.೧ ವುಡ್ , ಎ . ಎಂ ., ಜೋಸೆಫ್ , ಎಸ್ ., ಅಂಡ್ ಮಲ್ತ್ಬಿ , ಜೆ . (೨೦೦೮). ಪರ್ಸನಲ್ ಪೇಜಸ್. Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ.ಮ್ಯಾನ್ಚಸ್ತರ್.ಎಸಿ .ಯುಕೆ Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ., ಗ್ರ್ಯಾಟಿಟ್ಯೂಡ್ ಯುನಿಕ್ಲಿ ಪ್ರೆದಿಕ್ತ್ಸ್ ಸಾಟಿಸ್ಫ್ಯಕ್ಷನ್ ವಿಥ್ ಲೈಫ್ : ಇನ್ಕ್ರೆಮೆನ್ಟಲ್ ವ್ಯಾಲಿಡಿಟಿ ಎಬೋವ್ ದಿ ದೊಮೈನ್ಸ್ ಅಂಡ್ ಫಾಸೆತ್ಸ್ ಆಫ್ ದಿ ಫೈವ್ ಫಾಕ್ಟೊರ್ ಮಾಡೆಲ್ . ಪರ್ಸನಾಲಿಟಿ ಅಂಡ್ ಇಂಡಿವಿಶುಯಲ್ ದಿಫರೆನ್ಸಸ್, ೪೫ , ೪೯-೫೪.
  27. ಕಷ್ದನ್ , ಟಿ .ಬಿ ., ಉಸ್ವತ್ತೆ , ಜಿ ., ಅಂಡ್ ಜುಲಿಯನ್ , ಟಿ . (೨೦೦೬). ಗ್ರ್ಯಾಟಿಟ್ಯೂಡ್ ಅಂಡ್ ಹೆಡೋನಿಕ್ ಅಂಡ್ ಯುದೈಮೊನಿಕ್ ವೆಲ್ -ಬಿಯಿಂಗ್ ಇನ್ ವಿಯಟ್ನಾಂ ವಾರ್ ವೆಟರನ್ಸ್ . ಬಿಹೇವಿಯರ್ ರಿಸರ್ಚ್ ಅಂಡ್ ಥೆರಪಿ , ೪೪, ೧೭೭-೧೯೯.
  28. ೨೮.೦ ೨೮.೧ ವುಡ್ , ಎ . ಎಂ ., ಜೋಸೆಫ್ , ಎಸ್ . ಅಂಡ್ ಮಲ್ತ್ಬಿ (೨೦೦೯). ಗ್ರ್ಯಾಟಿಟ್ಯೂಡ್ ಪ್ರೆಡಿಕ್ತ್ಸ್ ಸೈಕಾಲಜಿಕಲ್ ವೆಲ್ -ಬಿಯಿಂಗ್ ಎಬೋವ್ ದಿ ಬಿಗ್ ಫೈವ್ ಫಾಸೆತ್ಸ್ . Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ. ಪರ್ಸನಾಲಿಟಿ ಅಂಡ್ ಇಂಡಿವಿಶುಯಲ್ ಡಿಫರೆನ್ಸಸ್ ೪೫, ೬೫೫-೬೬೦.
  29. ೨೯.೦ ೨೯.೧ ವುಡ್ , ಎ . ಎಂ ., ಜೋಸೆಫ್ , ಎಸ್ ., ಅಂಡ್ ಲಿನ್ಲೆಯ್ , ಪಿ . ಎ . (೨೦೦೭). [೧] Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ.ಕಾಪಿಂಗ್ ಸ್ಟೈಲ್ ಆಸ್ ಎ ಸೈಕಾಲಾಜಿಕಲ್ ರಿಸೋರ್ಸ್ ಆಫ್ ಗ್ರೇಟ್ ಫುಲ್ ಪೀಪಲ್ . Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ. ಜರ್ನಲ್ ಆಫ್ ಸೋಶಿಯಲ್ ಅಂಡ್ ಕ್ಲಿನಿಕಲ್ ಸೈಕಾಲಜಿ, ೨೬, ೧೧೦೮–೧೧೨೫.
  30. ವುಡ್ , ಎ . ಎಂ ., ಜೋಸೆಫ್ , ಎಸ್ ., ಲ್ಲೋಯ್ದ್ , ಜೆ ., ಅಂಡ್ ಆಟ್ಕಿನ್ಸ್ , ಎಸ್ . (೨೦೦೯). ಗ್ರ್ಯಾಟಿಟ್ಯೂಡ್ ಇನ್ ಫ್ಳುಯನ್ಸಸ್ಸ್ ಸ್ಲೀಪ್ ಥ್ರೂ ದಿ ಮೆಖನಿಸಮ್ ಆಫ್ ಪ್ರಿ -ಸ್ಲೀಪ್ ಕಾಗ್ನಿನಿಶಿಯನ್ಸ್ . Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ. ಜರ್ನಲ್ ಆಫ್ ಸೈಕೊಮ್ಯಾತಿಕ್ ರಿಸರ್ಚ್ , ೬೬, ೪೩-೪೮
  31. ೧೦. ಮಕ್ ಕುಲ್ಲೌಗ್ಹ್ , ಎಂ . ಇ ., ತ್ಸಾಂಗ್ , ಜೆ ., ಅಂಡ್ ಎಮ್ಮೊಂಸ್ , ಆರ್ .ಎ . (೨೦೦೪). ಗ್ರ್ಯಾಟಿಟ್ಯೂಡ್ ಇನ್ ಇಂಟರ್ ಮೀಡಿಯೇಟ್ ಎಫ್ಫೆಕ್ಟಿವ್ ತೆರ್ರೈನ್ : ಲಿಂಕ್ಸ್ ಆಫ್ ಗ್ರೇಟ್ ಫುಲ್ ಮೂಡ್ಸ್ ವಿಥ್ ಇಂಡಿವಿಶುಯಲ್ ಡಿಫ್ಫರೆನ್ಸಸ್ ಅಂಡ್ ಡೈಲಿ ಎಮೋಷನಲ್ ಎಕ್ಸ್ಪೀರಿಯನ್ಸ್ . ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ , ೮೬, ೨೯೫-೩೦೯.
  32. ೩೨.೦ ೩೨.೧ ೨. ವುಡ್ , ಆಲೆಕ್ಷ್ , ಸ್ತೆಪ್ಹೇನ್ ಜೋಸೆಫ್ , ಅಂಡ್ ಆಲೆಕ್ಷ್ ಲಿನ್ಲೆಯ್ . "ಗ್ರ್ಯಾಟಿಟ್ಯೂಡ್--ಪೇರೆಂಟ್ ಆಫ್ ಆಲ್ ವರ್ಚ್ಯೂಸ್ ." ದಿ ಸೈಕಾಲಜಿಸ್ಟ್ ೨೦.೧ (೨೦೦೭): ೧೮-೨೧. ಮುದ್ರಣ
  33. ೧೧.ಸೇಲಿಗ್ಮನ್ , ಎಂ. ಇ.ಪಿ ., ಸ್ಟೀನ್ , ಟಿ .ಎ ., ಪಾರ್ಕ್ , ಎನ್ .,ಅಂಡ್ ಪೀಟರ್ ಸನ್ , ಸಿ . (೨೦೦೫). ಪಾಸಿಟಿವ್ ಸೈಕಾಲಜಿ ಪ್ರೋಗ್ರೆಸ್ : ಎಂಪೀರಿಕಲ್ ವ್ಯಲಿಡೆಶನ್ ಆಫ್ ಇಂಟರ್ವೆಂಶನ್ಸ್ . ಅಮೆರಿಕನ್ ಸೈಕಾಲಜಿಸ್ಟ್ , ೬೦, ೪೧೦-೪೨೧.
  34. ೯.ಮಕ್ ಕುಲ್ಲೌಗ್ಹ್ , ಎಂ .ಇ ., ಎಮ್ಮೊಂಸ್ , ಆರ್ .ಎ ., ಅಂಡ್ ತ್ಸಾಂಗ್ , ಜೆ . (೨೦೦೨). ದಿ ಗ್ರೇಟ್ ಫುಲ್ ಡಿಸ್ಪೋಸಿಶನ್ : ಎ ಕಾನ್ಸೆಪ್ಚ್ಯುಯಲ್ ಅಂಡ್ ಎಂಪಿರಿಕಲ್ ಟೋಪೋ ಗ್ರಫಿ . ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ , ೮೩, ೧೧೨-೧೨೭
  35. ವುಡ್ , ಎ . ಎಂ ., ಮಲ್ತ್ ಬಿ , ಜೆ ., ಗಿಲ್ಲೆತ್ತ್ , ಆರ್ ., ಲಿನ್ಲೆಯ್ , ಪಿ . ಎ ., ಅಂಡ್ ಜೋಸೆಫ್ , ಎಸ್ . (೨೦೦೮). ದಿ ರೋಲ್ ಆಫ್ ಗ್ರ್ಯಾಟಿಟ್ಯೂಡ್ ಇನ್ ದಿ ದೆವೆಲೋಪ್ಮೆಂಟ್ ಆಫ್ ಸೋಶಿಯಲ್ ಸಪೋರ್ಟ್ , ಸ್ಟ್ರೆಸ್ , ಅಂಡ್ ಡಿಪ್ರೆಶನ್ : ಟೊ ಲಾಂಗಿಟ್ಯುಡಿನಲ್ ಸ್ಟಡೀಸ್ .ಸಾಮಾಜಿಕ ಸಹಕಾರ ,ಒತ್ತಡ ,ಮತ್ತು ಖಿನ್ನತೆಗಳ ಬೆಳವಣಿಗೆಯಲ್ಲಿ ಕೃತಜ್ಞತೆಯ ಪಾತ್ರ:ಎರಡು ರೇಖಾಂಶದ ಅಭ್ಯಾಸಗಳು. Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ. ಜರ್ನಲ್ ಆಫ್ ರಿಸರ್ಚ್ ಇನ್ ಪರ್ಸನಾಲಿಟಿ , ೪೨ , ೮೫೪-೮೭೧.
  36. ೭. ದೇ ಸ್ಟೆನೋ , ಡೇವಿಡ್ , ಅಂಡ್ ಮೋನಿಕಾ ಬರ್ಟ್ ಲೇಟ್ತ್ . "ಗ್ರ್ಯಾಟಿಟ್ಯೂಡ್ ಆಸ್ ಎ ಮರಳ ಸೆಂಟಿಮೆಂಟ್ : ಎಮೋಶನ್ ಗೈಡೆಡ್ ಕೋ- ಅಪರೇಷನ್ ಇನ್ ಎಕಾನಾಮಿಕ್ ಎಕ್ಸ್ಚೇಂಜ್ ." ಸೈಕ್ಆರ್ಟಿಕಲ್ಸ್ . ಏಪ್ರಿಲ್ . ೨೦೧೦. ಜಾಲ. ೯ ಏಪ್ರಿಲ್ . ೨೦೧೦. <http://csaweb116v.csa.com.proxy.library.vanderbilt.edu/ids70/view_rec ಆರ್ ಡಿ .ಪಿ ಹೆಚ್ ಪಿ ?id=2&recnum=2&log=from_res&SID=lvn78o4qht7j6g7k7o2l05 nv1&mark_id=search%3A2%3A0%2C0%2C10>
  37. ೫.ಎಮ್ಮೊಂಸ್ , ರಾಬರ್ಟ್ ಎ ., ಅಂಡ್ ಮೈಕೇಲ್ ಇ . ಮಕ್ ಕುಲ್ಲೌಗ್ಹ್ . "ಹೈ ಲೈಟ್ಸ್ ಫ್ರಾಂ ದಿ ರಿಸರ್ಚ್ ಪ್ರಾಜೆಕ್ಟ್ ಆಫ್ ಗ್ರ್ಯಾಟಿಟ್ಯೂಡ್ ಅಂಡ್ ಥ್ಯಾಂಕ್ ಫುಲ್ ನೆಸ್ ." ಜಾಲ. http://psychology.ucdavis.edu/labs/emmons/ Archived 2010-08-11 ವೇಬ್ಯಾಕ್ ಮೆಷಿನ್ ನಲ್ಲಿ.
  38. ಎಮ್ಮೊಂಸ್ , ಆರ್ . ಎ . ಅಂಡ್ ಮಕ್ ಕುಲ್ಲೌಗ್ಹ್ , ಎಂ . ಇ . (| ೨೦೦೩ ಕೌನ್ಟಿಂಗ್ ಬ್ಲೆಸ್ಸ್ಇಂಗ್ಸ್ ವರ್ಸಸ್ ಬರ್ಡನ್ಸ್  : ಅನ್ ಎಕ್ಸ್ಪೆರಿಮೆಂಟಲ್ ಇನ್ವೆಸ್ಟಿಗೇಶನ್ ಆಫ್ ಗ್ರ್ಯಾಟಿಟ್ಯೂಡ್ ಅಂಡ್ ಸಬ್ಜಕ್ಟಿವ್ ವೆಲ್ -ಬಿಯಿಂಗ್ ಇನ್ ಡೈಲಿ ಲೈಫ್ . ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ , ೮೪ , ೩೭೭-೩೮೯. (ಎಲೆಕ್ಟ್ರಾನಿಕ್ ಕಾಪಿ ) Archived 2009-03-18 ವೇಬ್ಯಾಕ್ ಮೆಷಿನ್ ನಲ್ಲಿ.
  39. ವಾಟ್ ಕಿನ್ಸ್ , ಪಿ . ಸಿ ., ವುಡ್ವರ್ಡ್ , ಕೆ ., ಸ್ಟೋನ್ , ಟಿ ., ಅಂಡ್ ಕೊಲ್ಟ್ಸ್ , ಆರ್ . ಎಲ್ . (| ೨೦೦೩ ಗ್ರ್ಯಾಟಿಟ್ಯೂಡ್ ಅಂಡ್ ಹ್ಯಾಪಿನೆಸ್  : ಡೆವೆಲಪ್ಮೆಂಟ್ ಆಫ್ ಎ ಮೆಷರ್ ಆಫ್ ಗ್ರ್ಯಾಟಿಟ್ಯೂಡ್, ಅಂಡ್ ರಿಲೇಶನ್ ಶಿಪ್ಸ್ ವಿಥ್ ಸಬ್ಜಕ್ಟಿವ್ ವೆಲ್ -ಬಿಯಿಂಗ್ . ಸೋಶಿಯಲ್ ಬಿಹೇವಿಯರ್ ಅಂಡ್ ಪರ್ಸನಾಲಿಟಿ , ೩೧ , ೪೩೧-೪೫೨.
  40. ೧೦.ಮಕ್ ಕುಲ್ಲೌಗ್ಹ್ , ಎಂ . ಇ ., ತ್ಸಾಂಗ್ , ಜೆ ., ಅಂಡ್ ಎಮ್ಮೊಂಸ್ , ಆರ್ .ಎ . (೨೦೦೪). ಗ್ರ್ಯಾಟಿಟ್ಯೂಡ್ ಇನ್ ಇಂಟರ್ ಮೀಡಿಯೇಟ್ ಎಫ್ಫೆಕ್ಟಿವ್ ತೆರ್ರೈನ್ : ಲಿಂಕ್ಸ್ ಆಫ್ ಗ್ರೇಟ್ ಫುಲ್ ಮೂಡ್ಸ್ ವಿಥ್ ಇನ್ದಿವಿಶ್ಯುಅಲ್ ಡಿಫರೆನ್ಸಸ್ ಅಂಡ್ ಡೈಲಿ ಎಮೋಷನಲ್ ಎಕ್ಸ್ಪೀರಿಯನ್ಸ್ . ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ , ೮೬, ೨೯೫-೩೦೯.
  41. ೭. ದೇ ಸ್ಟೆನೋ , ಡೇವಿಡ್ , ಅಂಡ್ ಮೋನಿಕಾ ಬರ್ಟ್ ಲೇಟ್ತ್ . "ಗ್ರ್ಯಾಟಿಟ್ಯೂಡ್ ಆಸ್ ಎ ಮಾರಲ್ ಸೆಂಟಿಮೆಂಟ್ : ಎಮೋಶನ್ ಗೈಡೆಡ್ ಕೋ ಆಪರೇಷನ್ ಇನ್ ಎಕಾನಾಮಿಕ್ ಎಕ್ಸ್ಚೇಂಜ್ ." ಸೈಕ್ ಆರ್ಟಿಕಲ್ಸ್ . ಏಪ್ರಿಲ್ . ೨೦೧೦. ಜಾಲ. ೯ April. ೨೦೧೦. <http://csaweb116v.csa.com.proxy.library.vanderbilt.edu/ids70/view_rec ಆರ್ ಡಿ .ಪಿ ಹೆಚ್ ಪಿ ?id=2&recnum=2&log=from_res&SID=lvn78o4qht7j6g7k7o2l05 nv1&mark_id=search%3A2%3A0%2C0%2C10>