ವಿಷಯಕ್ಕೆ ಹೋಗು

ಭಾರತ-ಚೀನ ಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತ-ಚೀನ ಯುದ್ಧ

ಯುದ್ಧದಲ್ಲಿ ಭಾಗಿಯಾಗಿದ್ದ ರಾಷ್ಟ್ರಗಳು
ಕಾಲ: ಜೂನ್[] - ನವೆಂಬರ್ ೨೧, ೧೯೬೨
ಸ್ಥಳ: ಅಕ್ಸಾಯ್ ಚಿನ್ ಮತ್ತು ಅರುಣಾಚಲ ಪ್ರದೇಶ
ಪರಿಣಾಮ: ಚೀನಿಯರ ವಿಜಯ. ಚೀನಿಯರು ತಾವಾಗಿಯೆ ಯುದ್ಧಾಂತ್ಯ ಘೋಷಿಸಿದರು.
ಕಾರಣ(ಗಳು): ಚೀನಿಯರ ಅಭಿಪ್ರಾಯದಲ್ಲಿ: ಭಾರತೀಯ ಸೇನೆಯು ಮ್ಯಕ್‌ಮಹೊನ್ ಲೈನ್ ಉತ್ತರಕ್ಕೆ ಬಂದದ್ದು.[]ಭಾರತೀಯರ ಅಭಿಪ್ರಾಯದಲ್ಲಿ: ನಾರ್ತ್ ಈಸ್ಟರ್ನ್ ಫ್ರಾಂಟಿಯರ್ ಏಜನ್ಸಿ ಪ್ರದೇಶದ ಮೇಲೆ ಚೀನಿಯರ ದಾಳಿ.
ಪ್ರದೇಶಗಳ ಕೈಬದಲು: ಅಕ್ಸಾಯ್ ಚಿನ್ ಚೀನಿಯರ ವಶಕ್ಕೆ
ಕದನಕಾರರು
ಭಾರತ
ಭಾರತ
ಚೀನಾ
ಚೀನಾ
ಸೇನಾಧಿಪತಿಗಳು
ಭಾರತ ಬ್ರಿಜ್ ಮೋಹನ್ ಕೌಲ್
ಭಾರತ ಜವಹರಲಾಲ್ ನೆಹರೂ
ಚೀನಾ ಜಾಂಗ್ ಗುಓಹುಅ[]
ಚೀನಾ ಮಾಓ ಜೆಡಾಂಗ್
ಬಲ
10,000-12,000 80,000[][]
ಮೃತರು ಮತ್ತು ಗಾಯಾಳುಗಳು
3,128 killed[]
3,968 Captured[][]
1,047 Wounded []
722 killed.[]
0 Captured[]
1,697 Wounded[][]

ಭಾರತ-ಚೀನ ಯುದ್ಧವು ೧೯೬೨ರಲ್ಲಿ ಭಾರತ ಮತ್ತು ಚೀನಿ ಜನರ ಗಣರಾಜ್ಯಗಳ ಮಧ್ಯೆ ನಡೆದ ಒಂದು ಗಡಿಯುದ್ಧ. ಗಡಿಯ ವಿಷಯಗಳು ಈ ಯುದ್ಧದ ಕಾರಣವೆಂದಿದ್ದರೂ, ಇತರ ಕಾರಣಗಳು ಇದ್ದವು. ೧೯೫೯ರ ಟಿಬೆಟ್ ದಂಗೆಯ ನಂತರ ಭಾರತವು ದಲೈ ಲಾಮ ಅವರಿಗೆ ಆಶ್ರಯ ನೀಡಿತ್ತು. ಇದರಿಂದ ಚೀನಿಯರು ಕುಪಿತರಾಗಿದ್ದರು. ಭಾರತವು ತಂತ್ರForward Policy ವೊಂದನ್ನು ರೂಪಿಸಿ ಅದರ ಪ್ರಕಾರ ಚೀನಾದ ಪ್ರಧಾನಿ ಚೌ ಎನ್ ಲಾಯ್ ೧೯೫೯ ರಲ್ಲಿ ಘೋಷಿಸಿದ ವಾಸ್ತವಿಕ ಗಡಿ ರೇಖೆಯ ಪೂರ್ವಕ್ಕೆ ಮೆಕ್ ಮೋಹನ್ ರೇಖೆಯ ಉತ್ತರದಿಕ್ಕಿನಲ್ಲಿಯೂ ಸೇರಿದಂತೆ ಅನೇಕ ಠಾಣೆಗಳನ್ನು ಗಡಿಗುಂಟ ಸ್ಥಾಪಿಸಿತು.

  • ಚೀನೀಯರು ೨೦ ಅಕ್ಟೋಬರ್ ೧೯೬೨ ರಂದು ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಸಮಯಕ್ಕೇ ಲಡಾಖ್ ನಲ್ಲಿ ಮತ್ತು ಮೆಕ್ ಮೋಹನ್ ಗಡಿಗುಂಟ ಒಂದೇ ಹೊತ್ತಿಗೆ ದಾಳಿಗಳನ್ನು ಆರಂಭಿಸಿದರು. ಎರಡೂ ರಂಗಗಳಲ್ಲಿ ಚೀನೀ ಸೈನ್ಯಗಳು ಭಾರತೀಯ ಸೈನ್ಯಗಳನ್ನು ಮೀರಿ ಮುಂದುವರೆದು ಪಶ್ಚಿಮದ ಚುಶೂಲ್ ನಲ್ಲಿ ರೇಝಾಂಗ್ ಲಾ ವನ್ನೂ ಪೂರ್ವದಲ್ಲಿ ತವಾಂಗ್ ಅನ್ನೂ ಕೈವಶ ಮಾಡಿಕೊಂಡವು. ೨೦ ನವೆಂಬರ್ ೧೯೬೨ ರಂದು ಚೀನೀಯರು ಕದನವಿರಾಮವನ್ನು ಘೋಷಿಸಿದಾಗ ಯುದ್ಧವು ನಿಂತಿತು. ನಂತರ ಅವರು ವಿವಾದಿತ ಕ್ಷೇತ್ರದಿಂದ ಹಿಂದಕ್ಕೆ ಸರಿದರು.
  • ೪೨೫೦ ಮೀಟರ್ (೧೪೦೦೦ ಅಡಿ) ಗಿಂತ ಹೆಚ್ಚು ಎತ್ತರದ ಪರ್ವತಪ್ರದೇಶದಲ್ಲಿ ಪ್ರತಿಕೂಲ ಮತ್ತು ಕಠಿಣ ಪರಿಸ್ಥಿತಿಯಲ್ಲಿ ಭಾರೀಪ್ರಮಾಣದಲ್ಲಿ ಕದನವು ನಡೆದದ್ದು ಈ ಯುದ್ಧದ ಗಮನಾರ್ಹ ಸಂಗತಿ. ಇದು ಇಕ್ಕಡೆಗಳಲ್ಲೂ ಸೈನ್ಯ ಹಾಗೂ ಸಾಮಗ್ರಿ ಸಾಗಣೆಯ ಸಮಸ್ಯೆಯನ್ನು ಒಡ್ಡಿತು. ಎರಡೂ ಪಕ್ಷಗಳು ಈ ಯುದ್ಧದಲ್ಲಿ ವಾಯುದಳವನ್ನಾಗಲೀ ನೌಕಾದಳವನ್ನಾಗಲೀ ಬಳಸದಿದ್ದುದು ಕೂಡ ಗಮನಿಸತಕ್ಕ ಸಂಗತಿ.

ಹಿನ್ನಲೆ

[ಬದಲಾಯಿಸಿ]

ಅಕ್ಸಾಯ್ ಚಿನ್ ಮತ್ತು ಅರುಣಾಚಲ್ ಪ್ರದೇಶದ ಗಡಿಯ ಪ್ರದೇಶಗಳ ಸಾರ್ವಭೌಮತ್ವದ ಮೇಲಿನ ವಿವಾದವು ಯುದ್ಧಕ್ಕೆ ಕಾರಣವಾಗಿತ್ತು. ಅಕ್ಸಾಯ್ ಚಿನ್ ಪ್ರದೇಶವು ಕಾಶ್ಮೀರಕ್ಕೆ ಸೇರಿದೆ ಎಂದು ಭಾರತವೂ ಮತ್ತು ಚೀನಾವು ತನ್ನ ಕ್ಸಿನ್ಜಿಯಾಂಗ್ನ ಭಾಗವೆಂದು ಹೇಳಿಕೊಂಡಿದೆ, ಇದು ಟಿಬೆಟ್ ಮತ್ತು ಕ್ಸಿನ್ಜಿಯಾಂಗ್ನ ಚೀನೀಯ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಸಂಪರ್ಕವನ್ನು ಹೊಂದಿದೆ. ಈ ರಸ್ತೆಯನ್ನು ಚೀನಾ ನಿರ್ಮಿಸಿರುವುದು ಸಂಘರ್ಷದ ಪ್ರಚೋದಕಗಳಲ್ಲಿ ಒಂದಾಗಿದೆ.

ಹೆಚ್ಚಿನ ಮಾಹಿತಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. 6月,印度军队加快了武装入侵中国的速度,东段已越过“麦克马洪线”,进入西藏山南的扯冬地区。截至8月底,印军在中国境内建立了一百多个据点。
  2. Zhou Enlai: "But if your (Indian) troops come up north of the McMahon line, and come even further into Chinese territory, how is it possible for us to refrain from retaliating?" "China", USA Department of State.
  3. ಉಲ್ಲೇಖ ದೋಷ: Invalid <ref> tag; no text was provided for refs named Garver
  4. H.A.S.C. by United States. Congress. House Committee on Armed Services — 1999, p. 62
  5. War at the Top of the World: The Struggle for Afghanistan, Kashmir, and Tibet by Eric S. Margolis, p. 234.
  6. ೬.೦ ೬.೧ ೬.೨ ೬.೩ ೬.೪ ೬.೫ The US Army [೧] says Indian wounded were 1,047 and attributes it to Indian Defence Ministry's 1965 report, but this report also included a lower estimate of killed.
  7. ಉಲ್ಲೇಖ ದೋಷ: Invalid <ref> tag; no text was provided for refs named Calvin
  8. https://books.google.com/books?id=PsoDGLNmU30C&pg=PA188&lpg=PA188&dq=sino+indian+war+wounded&source=web&ots=goq1pcQc50&sig=FOQDKdciOn6VAd3fOCInHKhOu3U&hl=en&sa=X&oi=book_result&resnum=6&ct=result