ವಿಷಯಕ್ಕೆ ಹೋಗು

ರೋಹಿಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮದಲ್ಲಿ, ರೋಹಿಣಿಯು ವಸುದೇವನ ಮೊದಲ ಪತ್ನಿ. ಇವಳು ಬಲರಾಮನ ಬದಲಿ ತಾಯಿ ಮತ್ತು ಅವನ ಸಹೋದರಿ ಸುಭದ್ರಳ ತಾಯಿ. ಸುಭದ್ರೆಯ ಸಹೋದರನೇ ಕೃಷ್ಣ. ಇವಳು ಕೃಷ್ಣನ ಪಾಲನೆ ಪೋಷಣೆಯಲ್ಲಿ ಪ್ರಧಾನವಾದ ಪಾತ್ರವಹಿಸಿದಳು. ಇವಳು ಹಸುಗಳ ಮಾತೆಯಾದ ಕಾಮಧೇನುವಿನ ಭಾಗಶಃ ಅವತಾರವಾಗಿದ್ದಾಳೆ.

ಕಂಸನು ದೇವಕಿಯ ಆರು ಶಿಶುಗಳನ್ನು ಹುಟ್ಟಿದ ಕೂಡಲೇ ಕೊಂದನು. ದೇವಕಿಯು ಏಳನೇ ಬಾರಿಗೆ ಗರ್ಭ ಧರಿಸಿದಳು. ಆದರೆ, ಈ ಏಳನೇ ಮಗುವು ಹಿಂದಿನ ಆರು ಶಿಶುಗಳಂತೆ ಸಾಯಲಿಲ್ಲ; ಗರ್ಭದಲ್ಲಿದ್ದ ಮಗುವು ಪವಾಡಸದೃಶವಾಗಿ ದೇವಕಿಯ ಗರ್ಭದಿಂದ, ತನ್ನ ಸ್ವಂತ ಮಗುವಿಗಾಗಿ ದೀರ್ಘಕಾಲದಿಂದ ಹಂಬಲಿಸುತ್ತಿದ್ದ ರೋಹಿಣಿಯ ಗರ್ಭಕ್ಕೆ ವರ್ಗಾವಣೆಗೊಂಡಿತು. ಹೀಗೆ ಹುಟ್ಟಿದ ಮಗುವೇ ಬಲರಾಮ. ಇವನು ಮಹಾನ್ ಯೋದ್ಧನಾಗಿ ಮತ್ತು ತನ್ನ ತಮ್ಮ ಕೃಷ್ಣನ ಆಸರೆಯಾಗಿ ಬೆಳೆದನು.

ಕೃಷ್ಣನನ್ನು ಜನ್ಮದ ನಂತರ ಗೋಕುಲಕ್ಕೆ ರಹಸ್ಯವಾಗಿ ಸಾಗಿಸಲಾಯಿತು. ಆಗ, ತನ್ನ ನೆಚ್ಚಿನ ಮಲಮಗ ಕೃಷ್ಣನ ಮೇಲೆ ಕಣ್ಣಿಡಲು ಸಾಧ್ಯವಾಗಲು ರೋಹಿಣಿಯೂ ಅದೇ ಪ್ರದೇಶಕ್ಕೆ ಹೋದಳು. ಈ ಸಾಮೀಪ್ಯದ ಕಾರಣದಿಂದ ಕೃಷ್ಣ ಬಲರಾಮರು ಒಟ್ಟಿಗೆ ಬೆಳೆದರು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

Rohini