ವಿಷಯಕ್ಕೆ ಹೋಗು

ವಾಸುಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಸುಕಿಯು ಹಿಂದೂ ಮತ್ತು ಬೌದ್ಧ ಧರ್ಮದ ಒಬ್ಬ ನಾಗರಾಜ. ಇವನು ತನ್ನ ತಲೆಯ ಮೇಲೆ ನಾಗಮಣಿ ಎಂಬ ರತ್ನವನ್ನು ಹೊಂದಿದ್ದಾನೆಂದು ವರ್ಣಿಸಲಾಗಿದೆ. ಮತ್ತೊಬ್ಬ ನಾಗಿಣಿಯಾದ ಮಾನಸಾ ಇವನ ಸೋದರಿಯಾಗಿದ್ದಾಳೆ. ವಾಸುಕಿಯು ಶಿವನ ಸರ್ಪವಾಗಿದ್ದಾನೆ. ಇವನು ಅಷ್ಟಸರ್ಪಗಳಾದ ಅನಂತ (ಶೇಷ), ವಾಸುಕಿ, ತಕ್ಷಕ, ಕುಲಿಕ, ಕಾರ್ಕೋಟಕ, ಪದ್ಮ, ಮಹಾಪದ್ಮ, ಶಂಕಪಾಲ ಇವುಗಳಲ್ಲಿ ಒಬ್ಬ.

ವಾಸುಕಿಯು ಶಿವನ ಕುತ್ತಿಗೆಯ ಸುತ್ತ ಸುತ್ತಿಕೊಂಡಿರುವುದರಿಂದ ಪ್ರಸಿದ್ಧನಾಗಿದ್ದಾನೆ. ಶಿವನು ಇವನನ್ನು ಆಶೀರ್ವದಿಸಿ ಆಭರಣವಾಗಿ ಧರಿಸಿದನು.

ವಾಸುಕಿಯು ದೇವತೆಗಳು ಮತ್ತು ಅಸುರರಿಗೆ ತನ್ನನ್ನು ಮಂದಾರ ಪರ್ವತಕ್ಕೆ ಕಟ್ಟಲು ಅನುಮತಿ ನೀಡಿ ಸಮುದ್ರ ಮಂಥನದಲ್ಲಿ ಭಾಗವಹಿಸಿದನು. ಇವನನ್ನು ಈ ಸಂದರ್ಭದಲ್ಲಿ ಕ್ಷೀರಸಾಗರದಿಂದ ಅಮೃತವನ್ನು ಪಡೆಯಲು ಕಡೆಯುವ ಹಗ್ಗವಾಗಿ ಬಳಸಲಾಯಿತು.[] ವಾಸುಕಿಯನ್ನು ರಾಮಾಯಣ ಮತ್ತು ಮಹಾಭಾರತದಂತಹ ಹಿಂದೂ ಧರ್ಮಗ್ರಂಥಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Jones, Constance (2007). Encyclopedia of Hinduism. New York: Infobase Publishing. p. 300. ISBN 0-8160-5458-4.